ಮೋದಿ ಮತ್ತೆ ಪ್ರಧಾನಿಯಾದರೆ ಪ್ರಜಾಪ್ರಭುತ್ವ ಉಳಿಯಲ್ಲ: ಸಿದ್ದರಾಮಯ್ಯ
ಹಾಸನ, ಏಪ್ರಿಲ್ 11: ನರೇಂದ್ರ ಮೋದಿ ಇನ್ನೊಮ್ಮೆ ಪ್ರಧಾನಿ ಆದರೆ ಪ್ರಜಾಪ್ರಭುತ್ವ ಉಳಿಯಲ್ಲ ಎಂದು ಸಿದ್ದರಾಮಯ್ಯ ಇಂದು ಹೇಳಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ದೇವೇಗೌಡ-ಸಿದ್ದರಾಮಯ್ಯ ಜಂಟಿಯಾಗಿ ಇಂದು ಹಾಸನದಲ್ಲಿ ಪ್ರಚಾರ ನಡೆಸಿದರು, ಈ ಸಂದರ್ಭ ಮಾತನಾಡಿದ ಸಿದ್ದರಾಮಯ್ಯ, ಪ್ರಧಾನಿ ಮೋದಿ ಅವರು ಇನ್ನೊಮ್ಮೆ ಗೆದ್ದರೆ ಸರ್ವಾಧಿಕಾರಿ ಆಡಳಿತ ನಡೆಸುತ್ತಾರೆ ಎಂದು ಹೇಳಿದರು.
ಐದು ವರ್ಷ ಆಡಳಿತದಲ್ಲಿ ಮೋದಿ ಕೇವಲ ಸುಳ್ಳುಗಳನ್ನು ಹೇಳಿದ್ದಾರೆ, ಕೊಟ್ಟ ಮಾತು ಉಳಿಸಿಕೊಂಡಿಲ್ಲ, ನಂಬಿಕೆ ದ್ರೋಹ ಎಸಗಿದ್ದಾರೆ. ಅವರು ಚೌಕೀದಾರ ಅಲ್ಲ ಭ್ರಷ್ಟಾಚಾರದಲ್ಲಿ ಭಾಗೀದಾರ ಎಂದು ಹೇಳಿದರು.

ದೇವೇಗೌಡ ಹಾಗೂ ಸಿದ್ದರಾಮಯ್ಯ ಅವರು ಹಾಸನ ಕ್ಷೇತ್ರದ ಮೂರ್ತಿ ಒಟ್ಟಿಗೆ ಓಡಾಡಿದರು, ಅವರಿಗೆ ಹೋದ ಕಡೆಯಲ್ಲೆಲ್ಲಾ ಕಾರ್ಯಕರ್ತರು ಶಿಳ್ಳೆ, ಚಪ್ಪಾಳೆಗಳಿಂದ ಸ್ವಾಗತಿಸಿದರು.












Click it and Unblock the Notifications