ವ್ಹೀಲ್ ಚೇರ್ ನಲ್ಲಿ ಲೋಕಸಭೆಗೆ ಹೋಗಲ್ಲ: ಎಚ್.ಡಿ.ದೇವೇಗೌಡ

Recommended Video

      ನಾನು ಲೋಕಸಭೆಗೆ ವೀಲ್ ಚೇರ್ ನಲ್ಲಿ ಹೋಗಲ್ಲ ಅಂದ್ರು ದೇವೇಗೌಡ್ರು | Oneindia Kannada

      ಹಾಸನ, ಮಾರ್ಚ್ 3೦: ನಾನು‌ ಮುಂದಿನ ಲೋಕಸಭೆ ಚುನಾವಣೆಗೆ ನಿಲ್ಲುವುದಿಲ್ಲ, ನಾನು ವ್ಹೀಲ್ ಚೇರ್ ನಲ್ಲಿ ಸಂಸತ್ ಗೆ ಹೋಗಲು ಬಯಸುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು.

      ಹಾಸನದಲ್ಲಿ ಮಾತನಾಡಿದ ಅವರು, ಜಿಲ್ಲೆಯ ನಮ್ಮ ಪಕ್ಷದ ನಾಯಕರ ಅಭಿಪ್ರಾಯ ಕೇಳುತ್ತೇನೆ ಅವರು ಸ್ಪರ್ಧೆ ಮಾಡದೇ‌ ಹೋದರೆ ಪ್ರಜ್ವಲ್ ನನ್ನು ಲೋಕಸಭೆಗೆ ಕಳುಹಿಸಬೇಕು ಎಂಬ ಆಸೆ ಇದೆ. ತವರು ಜಿಲ್ಲೆಯಲ್ಲಿ ನನ್ನ ಉತ್ತರಾಧಿಕಾರಿ ಮೊಮ್ಮಗ ಪ್ರಜ್ವಲ್ ಎಂದು ದೇವೇಗೌಡರು ಸುಳಿವು ನೀಡಿದರು.

      ಮೊಮ್ಮಗ ವಿದ್ಯಾವಂತ, ಕೊಂಚ ದುಡುಕು ಬುದ್ಧಿ‌ ಅಷ್ಟೆ ನನ್ನ ಬಿಟ್ಟು ಬೇರೆಯವರು ಸ್ಪರ್ಧೆ ಮಾಡಿದರೆ ಸ್ವಾಗತ ಇಲ್ಲವಾದರೆ ಪ್ರಜ್ವಲ್ ನನ್ನು ಮಗನೆಂದು ತಿಳಿದು ಗೆಲ್ಲಿಸಲಿ ಎಂದರು. ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಮುಂದುವರಿಕೆ ವಿಚಾರ ಚುನಾವಣೆಯಲ್ಲಿ ಅವರು ನಿಷ್ಪಕ್ಷಪಾತವಾಗಿ ನಡೆದು ಕೊಳ್ಳಬೇಕು ಇಲ್ಲವಾದರೆ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದರು.

      I dont want to go parliament in wheel chair: Former PM Devegowda

      ನಾನು‌ ಚುನಾವಣಾ ಪೂರ್ವ ಸರ್ವೇ ನೋಡಿ ಸುಮ್ಮನೆ ಕೂರೋದಿಲ್ಲ ಈ ಸಾರಿ‌ ಕಾಂಗ್ರೆಸ್ ಬಿಜೆಪಿ ಬಿಟ್ಟು ಸರ್ಕಾರ ರಚನೆ ಮಾಡಬೇಕು ಎಂಬ ಹಠ ನಮ್ಮದು, 115 ಸ್ಥಾನ ಗೆಲ್ಲುವುದು ನಮ್ಮ ಟಾರ್ಗೆಟ್ ಆಗಿದೆ. ಚುನಾವಣೆಗೆ ಇನ್ನೂ 45 ದಿನ ಇದೆ ಅಷ್ಟು ದಿನ ವಿರಮಿಸದೇ ನಾನು ರಾಜ್ಯ ಸುತ್ತುತ್ತೇನೆ ಎಂದು ತಿಳಿಸಿದರು.

      ಚಿತ್ರಗಳು : ವಿಕಾಸ ಪರ್ವ ಯಾತ್ರೆಯಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ

      ಇದು‌ ನನ್ನ ಕೊನೆಯ‌ ಚುನಾವಣೆ ಎಂಬ ಸಿಎಂ ‌ಹೇಳಿಕೆ, ಈ‌ ರೀತಿಯ ಹೇಳಿಕೆಯನ್ನು ಯಾರೂ‌ ಗಂಭೀರವಾಗಿ ತೆಗೆದು ಕೊಳ್ಳಬಾರದು, ಕಳೆದ ಬಾರಿಯೂ ಸಿದ್ದರಾಮಯ್ಯ ಹೀಗೇ ಹೇಳಿದ್ದರು. ಅವರ ಬಳಿ ಅಧಿಕಾರ ಇದೆ, ಅದಕ್ಕೆ ಯಾರು ಏನೇ‌ ಮಾಡಿದರು ಗೆದ್ದೇ ಗೆಲ್ಲುವೆ ಎನ್ನುತ್ತಿದ್ದಾರೆ, ನಾನು‌ ಮಾತ್ರ ನಮ್ಮ ಅಭ್ಯರ್ಥಿ ಜಿ.ಟಿ.ದೇವೇಗೌಡರ ಪರ ಹೋರಾಟ ಮಾಡುವೆ ಎಂದು ತಿಳಿಸಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+