Lok Sabha Election 2024 Result: ಹಾಸನದಲ್ಲಿ ಪ್ರಜ್ವಲ್‌ಗೆ ಹಿನ್ನಡೆ ಆಗಿದ್ದು ಎಲ್ಲಿ?

ಹಾಸನ, ಜೂನ್‌ 04: ಹಾಸನ ಲೋಕಸಭೆ ಚುನಾವಣೆ 2024ರ ಫಲಿತಾಂಶ ಘೋಷಣೆಯಾಗಿದೆ. ಹಾಲಿ ಸಂಸದ, ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಸೋಲು ಕಂಡಿದ್ದಾರೆ. ಪ್ರಜ್ವಲ್ ರೇವಣ್ಣ ಸದ್ಯ ಎಸ್‌ಐಟಿ ವಶದಲ್ಲಿದ್ದು, ಚುನಾವಣೆಯಲ್ಲಿಯೂ ಸೋಲಾಗಿದೆ.

ಮಂಗಳವಾರ ಹಾಸನ ನಗರದ ಡೈರಿ ವೃತ್ತದಲ್ಲಿರುವ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆ ನಡೆಯಿತು. ಬಿಜೆಪಿ-ಜೆಡಿಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಕಾಂಗ್ರೆಸ್ ಅಭ್ಯರ್ಥಿ ಎಂ. ಶ್ರೇಯಸ್ ಪಟೇಲ್ ವಿರುದ್ಧ ಸೋಲು ಕಂಡರು.

Hassan Lok Sabha Election 2024 Results Assembly Seat Wise Vote Details

ಯಾರಿಗೆ ಎಷ್ಟು, ಮತ?; ಹಾಸನ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹಾಸನ, ಬೇಲೂರು, ಅರಸೀಕೆರೆ, ಶ್ರವಣಬೆಳಗೊಳ, ಸಕಲೇಶಪುರ, ಹೊಳೆನರಸೀಪುರ ಮತ್ತು ಕಡೂರು ವಿಧಾನಸಭಾ ಕ್ಷೇತ್ರಗಳಿವೆ.

ಕಡೂರು ಕ್ಷೇತ್ರದಲ್ಲಿ ಪ್ರಜ್ವಲ್ ರೇವಣ್ಣ 76,369. ಶ್ರೇಯಸ್ ಪಟೇಲ್ 74,126 ಮತ. ಶ್ರವಣಬೆಳಗೊಳದಲ್ಲಿ ಪ್ರಜ್ವಲ್ ರೇವಣ್ಣ 81,729 ಮತ, ಶ್ರೇಯಸ್ ಪಟೇಲ್ 81,800 ಮತಗಳನ್ನು ಪಡೆದಿದ್ದಾರೆ.

ಅರಸೀಕೆರೆಯಲ್ಲಿ ಪ್ರಜ್ವಲ್ ರೇವಣ್ಣ 84,033 ಮತ್ತು ಶ್ರೇಯಸ್ ಪಟೇಲ್ 87,126 ಮತ ಪಡೆದಿದ್ದಾರೆ. ಬೇಲೂರು ಕ್ಷೇತ್ರದಲ್ಲಿ ಪ್ರಜ್ವಲ್ ರೇವಣ್ಣ 74,240 ಮತ್ತು ಶ್ರೇಯಸ್ ಪಟೇಲ್ 72,608 ಮತಗಳನ್ನು ಪಡೆದಿದ್ದಾರೆ.

ಹಾಸನದಲ್ಲಿ ಪ್ರಜ್ವಲ್ ರೇವಣ್ಣ 68,587, ಶ್ರೇಯಸ್ ಪಟೇಲ್ 88,347 ಮತ. ಹೊಳೆನರಸೀಪುರದಲ್ಲಿ ಪ್ರಜ್ವಲ್ ರೇವಣ್ಣ 80,193, ಶ್ರೇಯಸ್ ಪಟೇಲ್ 97,800 ಮತಗಳನ್ನು ಪಡೆದರು.

ಅರಕಲಗೂಡು ಕ್ಷೇತ್ರದಲ್ಲಿ ಪ್ರಜ್ವಲ್ ರೇವಣ್ಣ 80,637 ಮತ. ಶ್ರೇಯಸ್ ಪಟೇಲ್ 95,065 ಮತ ಪಡೆದರು. ಸಕಲೇಶಪುರದಲ್ಲಿ ಪ್ರಜ್ವಲ್ ರೇವಣ್ಣ 80,748 ಮತ್ತು ಶ್ರೇಯಸ್ ಪಟೇಲ್ 73,402 ಮತಗಳನ್ನು ಪಡೆದಿದ್ದಾರೆ.

ಪ್ರಜ್ವಲ್ ರೇವಣ್ಣ ಸೋಲಿಸಿದ ಕಾಂಗ್ರೆಸ್ ಅಭ್ಯರ್ಥಿ ಎಂ. ಶ್ರೇಯಸ್ ಪಟೇಲ್ ಜಿ. ಪುಟ್ಟಸ್ವಾಮಿಗೌಡರ ಮೊಮ್ಮಗ. ಜಿ. ಪುಟ್ಟಸ್ವಾಮಿಗೌಡರು ಹಾಸನದಲ್ಲಿ ಎಚ್. ಡಿ. ದೇವೇಗೌಡರನ್ನು ಸೋಲಿಸಿದ್ದರು. ಈಗ ಶ್ರೇಯಸ್ ಪಟೇಲ್ ದೇವೇಗೌಡರ ಮೊಮ್ಮಗನನ್ನು ಸೋಲಿಸುವ ಮೂಲಕ ಹಾಸನ ರಾಜಕೀಯದಲ್ಲಿ ಹೊಸ ಅಧ್ಯಾಯ ಬರೆದಿದ್ದಾರೆ.

ಪುಟ್ಟಸ್ವಾಮಿ ಗೌಡರು 1985ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋತಿದ್ದರು. 1989, 1999ರ ಚುನಾವಣೆಯಲ್ಲಿ ಅವರು ದೇವೇಗೌಡರನ್ನು ಸೋಲಿಸಿದ್ದರು. ಅವರ ಮೊಮ್ಮಗ ಎಂ. ಶ್ರೇಯಸ್ ಪಟೇಲ್ ಎಚ್. ಡಿ. ರೇವಣ್ಣ ವಿರುದ್ಧ 2023ರ ವಿಧಾನಸಭೆ ಚುನಾವಣೆಯಲ್ಲಿ ಹೊಳೆನರಸೀಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. 84,951 ಮತಗಳನ್ನು ಪಡೆದು ರೇವಣ್ಣಗೆ ಪ್ರಬಲ ಪೈಪೋಟಿ ನೀಡಿದ್ದರು. ಈಗ ಲೋಕಸಭೆ ಚುನಾವಣೆಯಲ್ಲಿ ಪ್ರಜ್ವಲ್ ವಿರುದ್ಧ ಶ್ರೇಯಸ್ ಪಟೇಲ್ ಕಣಕ್ಕಿಳಿದು ಗೆಲುವು ಸಾಧಿಸಿದ್ದಾರೆ.

ಸದ್ಯದ ಮಾಹಿತಿ ಪ್ರಕಾರ ಶ್ರೇಯಸ್ ಪಟೇಲ್ 6,70,274 ಮತಗಳನ್ನು ಪಡೆದಿದ್ದಾರೆ. ಪ್ರಜ್ವಲ್ ರೇವಣ್ಣ 6,26,536 ಮತಗಳನ್ನು ಪಡೆದಿದ್ದಾರೆ. ಕ್ಷೇತ್ರದಲ್ಲಿ 8,470 ನೋಟ ಮತಗಳು ಚಲಾವಣೆಯಾಗಿವೆ.

ಹಾಸನ ಕ್ಷೇತ್ರದ ಚುನಾವಣೆ ಏಪ್ರಿಲ್ 26ರಂದು ನಡೆದಿತ್ತು. ಆದರೆ ಮತದಾನಕ್ಕೂ 2 ದಿನ ಮೊದಲು ಸಂಸದ ಪ್ರಜ್ವಲ್ ರೇವಣ್ಣರದ್ದು ಎಂದು ಆರೋಪಿಸಲಾದ ಅಶ್ಲೀಲ ವಿಡಿಯೋಗಳು ಕ್ಷೇತ್ರದಲ್ಲಿ ಪೆನ್‌ ಡ್ರೈವ್ ಮೂಲಕ ಹಂಚಿಕೆಯಾದವು. ಮತದಾನ ಮಾಡಿದ ಬಳಿಕ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಪರಾರಿಯಾದರು.

ಪ್ರಜ್ವಲ್ ರೇವಣ್ಣ ವಿರುದ್ಧ ದೂರು ದಾಖಲಾಯಿತು. ಬಳಿಕ ಕರ್ನಾಟಕ ಸರ್ಕಾರ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ ವಹಿಸಿತು. ಮೇ 31ರಂದು ವಿದೇಶದಿಂದ ಮರಳಿದ ಪ್ರಜ್ವಲ್ ರೇವಣ್ಣರನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿಯೇ ಬಂಧಿಸಲಾಯಿತು. ಜೂನ್ 6ರ ತನಕ ಅವರು ಎಸ್‌ಐಟಿ ವಶದಲ್ಲಿ ಇರಲಿದ್ದಾರೆ. ಈಗ ಚುನಾವಣೆಯಲ್ಲಿಯೂ ಸೋಲು ಕಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+