ಹಾಸನ ನಿವೇಶನ ವಿವಾದ: ಡಿಸಿಗೆ ದಾಖಲೆ ಸಲ್ಲಿಸಿದ ಯಶ್ ತಾಯಿ, ನಕಲಿ ದಾಖಲೆ ಆರೋಪಕ್ಕೆ ತಿರುಗೇಟು ನೀಡಿದ ಪುಷ್ಪ

ಹಾಸನ: ನಟ, ರಾಕಿಂಗ್ ಸ್ಟಾರ್ ಯಶ್ ಅವರ ಕುಟುಂಬಕ್ಕೆ ಸೇರಿದ ಹಾಸನ ತಾಲ್ಲೂಕಿನ ತಿಮ್ಮಲಾಪುರ ಗ್ರಾಮದ ನಿವೇಶನ ವಿವಾದವು ಮತ್ತೆ ಮುನ್ನೆಲೆಗೆ ಬಂದಿದೆ. ಜಮೀನಿನ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ತಮ್ಮ ಬಳಿ ದಾಖಲೆಗಳಿಲ್ಲ ಎಂಬ ಆರೋಪಗಳು ಕೇಳಿಬರುತ್ತಿದ್ದ ಹಿನ್ನೆಲೆಯಲ್ಲಿ, ಯಶ್ ಅವರ ತಾಯಿ ಪುಷ್ಪಾ ಅರುಣ್‌ಕುಮಾರ್ ಅವರು ಸೋಮವಾರ ನೇರವಾಗಿ ಹಾಸನ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, ತಮ್ಮ ಬಳಿಯಿರುವ ಎಲ್ಲ ಮೂಲ ದಾಖಲೆಗಳನ್ನು ಸಲ್ಲಿಸಿದ್ದಾರೆ.

ತಿಮ್ಮಲಾಪುರದಲ್ಲಿರುವ ತಮ್ಮ ಜಮೀನಿನ ಕುರಿತು ಎದ್ದಿರುವ ವಿವಾದ ಮತ್ತು ಎದುರಾಳಿಗಳು ಮಾಡುತ್ತಿರುವ ಆರೋಪಗಳಿಗೆ ಸಂಬಂಧಿಸಿದಂತೆ ಅವರು ಜಿಲ್ಲಾಧಿಕಾರಿಗಳಿಗೆ ಲಿಖಿತ ಹೇಳಿಕೆ ನೀಡಿದ್ದು, ದಾಖಲೆಗಳನ್ನು ಪರಿಶೀಲಿಸುವಂತೆ ಮನವಿ ಮಾಡಿದ್ದಾರೆ.

Yash mother Pushpa Arunkumar

'ನ್ಯಾಯಾಲಯದಲ್ಲಿರುವ ಕಾರಣ ಮೌನವಾಗಿದ್ದೆ'

ಜಿಲ್ಲಾಧಿಕಾರಿಗಳಿಗೆ ದಾಖಲೆ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಪುಷ್ಪಾ ಅರುಣ್‌ಕುಮಾರ್, ತಮ್ಮ ಮೇಲಿನ ಆರೋಪಗಳಿಗೆ ಸ್ಪಷ್ಟನೆ ನೀಡಿದರು. "ನಮ್ಮ ನಿವೇಶನಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳಿಲ್ಲ ಎಂದು ಕೆಲವರು ನಿರಂತರವಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಈ ಪ್ರಕರಣ ಈಗಾಗಲೇ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿರುವುದರಿಂದ ನಾನು ಇದುವರೆಗೂ ಮೌನವಾಗಿದ್ದೆ. ಆದರೆ, ಆರೋಪಗಳು ಮಿತಿಮೀರುತ್ತಿರುವ ಹಿನ್ನೆಲೆಯಲ್ಲಿ ಇಂದು ಡಿಸಿ ಕಚೇರಿಗೆ ಬಂದು ಎಲ್ಲಾ ದಾಖಲೆಗಳನ್ನು ಒಪ್ಪಿಸಿದ್ದೇನೆ. ಜಿಲ್ಲಾಧಿಕಾರಿಗಳು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ," ಎಂದು ತಿಳಿಸಿದರು.

'ಯಶ್ ತಾಯಿ ಎಂಬ ಕಾರಣಕ್ಕೆ ಟಾರ್ಗೆಟ್'

ತಮ್ಮ ಮಗ ಸೆಲೆಬ್ರಿಟಿ ಎಂಬ ಕಾರಣಕ್ಕೆ ವಿಷಯವನ್ನು ದೊಡ್ಡದು ಮಾಡಲಾಗುತ್ತಿದೆ ಎಂದು ಪುಷ್ಪಾ ಅವರು ಬೇಸರ ವ್ಯಕ್ತಪಡಿಸಿದರು. "ಕೇವಲ ಯಶ್ ಅವರ ತಾಯಿ ಎಂಬ ಕಾರಣಕ್ಕೆ ಅನಗತ್ಯವಾಗಿ ಗೊಂದಲ ಸೃಷ್ಟಿಸಲಾಗುತ್ತಿದೆ. ನಮ್ಮ ಎಲ್ಲಾ ದಾಖಲೆಗಳು ಪಕ್ಕಾ ಆಗಿವೆ. ಬೇಕಿದ್ದರೆ ಎದುರಾಳಿಗಳ ದಾಖಲೆಗಳನ್ನೂ ಅಧಿಕಾರಿಗಳು ಪರಿಶೀಲಿಸಲಿ. ಈವರೆಗೆ ಅವರು ಒಂದು ದಿನವೂ ನಮ್ಮೊಂದಿಗೆ ಸಂಧಾನಕ್ಕೆ ಅಥವಾ ಮಾತುಕತೆಗೆ ಬಂದಿಲ್ಲ. ಬದಲಿಗೆ ಏಕಾಏಕಿ ನಮ್ಮ ಕಾಂಪೌಂಡ್ ಒಡೆದು ದಬ್ಬಾಳಿಕೆ ನಡೆಸಿದ್ದಾರೆ," ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

'ನಮ್ಮದಲ್ಲ, ಅವರದ್ದೇ ನಕಲಿ ದಾಖಲೆ'

ವಿವಾದಿತ ಜಾಗದ ಬಗ್ಗೆ ಮಾತನಾಡಿದ ಅವರು, "ನಮ್ಮ ಬಳಿ ಇರುವ ದಾಖಲೆಗಳು ಸರ್ಕಾರಿ ಕಚೇರಿಯಿಂದಲೇ ಪಡೆದ ಅಧಿಕೃತ ದಾಖಲೆಗಳು. ಆದರೆ, ದೇವರಾಜು ಮತ್ತು ಅವರ ಭಾವ ನಟರಾಜು ಅವರು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎಂದು ನಾನು ಈ ಹಿಂದೆಯೂ ಹೇಳಿದ್ದೇನೆ, ಈಗಲೂ ಹೇಳುತ್ತಿದ್ದೇನೆ. ಸರ್ಕಾರಿ ಕಚೇರಿಯಲ್ಲಿ ಯಾರೋ ಮಾಡಿದ ತಪ್ಪಿನಿಂದ ಈ ಗೊಂದಲ ಉಂಟಾಗಿದೆ. ದಾಖಲೆಗಳು ನನ್ನ ಹೆಸರಿನಲ್ಲಿದ್ದರೂ, ನನಗೆ ನೋಟಿಸ್ ನೀಡದೆ ಬೇರೆಯವರಿಗೆ ನೀಡಿದ್ದು ಏಕೆ?" ಎಂದು ಅವರು ಪ್ರಶ್ನಿಸಿದರು.

ನಮ್ಮ ದಾಖಲೆಗಳು 'ಕ್ಲಿಯರ್' ಆಗಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಪುಷ್ಪಾ ಅರುಣ್‌ಕುಮಾರ್, ತಮ್ಮ ಜಮೀನಿನ ರಕ್ಷಣೆಗಾಗಿ ಕಾನೂನು ಹೋರಾಟ ಮುಂದುವರಿಸುವುದಾಗಿ ಸ್ಪಷ್ಟಪಡಿಸಿದ್ದಾರೆ. ಜಿಲ್ಲಾಧಿಕಾರಿಗಳು ಈ ಪ್ರಕರಣವನ್ನು ಯಾವ ರೀತಿ ಇತ್ಯರ್ಥಪಡಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+