Hassan: ಅಕ್ರಮ ಸಂಬಂಧಕ್ಕೆ ಅಡ್ಡಿ: ಪತಿಯನ್ನು ಪೊಲೀಸರಿಗೆ ಸಿಕ್ಕಿಸಲು ಬಿಗ್ ಪ್ಲ್ಯಾನ್!
ಹಾಸನ ಅಕ್ಟೋಬರ್ 12: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪೊಲೀಸರಿಗೆ ಸಿಕ್ಕಿಸಲು ಯತ್ನಿಸಿದ್ದ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ವಿವಾಹಿತ ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಆರೋಪಿ ಗಾಂಜಾ ತಂದು ಮಹಿಳೆಯ ಪತಿಗೆ ನೀಡಿ ಪೊಲೀಸರಿಗೆ ಮಾಹಿತಿ ನೀಡಿದ ಘಟನೆ ಹಾಸನದಲ್ಲಿ ನಡೆದಿದೆ.
ಮುಕ್ತಾರ್ ಅಲಿ ಸಕಲೇಶಪುರದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಈತನ ಪತ್ನಿ ಮೂಡಿಗೆರೆಯಲ್ಲಿ ವಾಸವಿದ್ದರು. ಮೂಡಿಗೆರೆಯಲ್ಲಿ ಒಂಟಿಯಾಗಿದ್ದ ಮುಕ್ತಾರ್ ಅಲಿ ಪತ್ನಿ ಜೊತೆಗೆ ಮಹ್ಮದ್ ಎಂಬಾತ ಅಕ್ರಮ ಸಂಬಂಧ ಹೊಂದಿದ್ದನು. ಮಹ್ಮದ್ ಆಗಾಗ ಮುಕ್ತಾರ್ ಅಲಿ ಮನೆಗೆ ಬಂದು ಹೋಗುತ್ತಿದ್ದನು. ತನ್ನ ಪತ್ನಿಯೊಂದಿಗೆ ಸಲಿಗೆಯಿಂದ ಇದ್ದ ಮಹ್ಮದ್‌ನಿಂದ ದೂರವಿರುವಂತೆ ಪತ್ನಿಗೆ ಮುಕ್ತಾರ್ ಅಲಿ ಎಚ್ಚರಿಕೆ ನೀಡಿದ್ದರು. ಅಲ್ಲದೆ ಮಹ್ಮದ್‌ಗೂ ಮುಕ್ತಾರ್ ಅಲಿ ವಾರ್ನಿಂಗ್ ಕೊಟ್ಟಿದ್ದರು.

ಹೀಗಾಗಿ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಮುಕ್ತಾರ್ ಅಲಿ ಮೇಲೆ ಮಹ್ಮದ್‌ಗೆ ಕೋಪವಿತ್ತು. ಹೀಗಾಗಿ ಮುಕ್ತಾರ್ ಅಲಿಯನ್ನು ಪೊಲೀಸರು ಬಂಧಿಸುವಂತೆ ಪ್ಲ್ಯಾನ್ ಮಾಡಿದ್ದ ಮಹ್ಮದ್. ತನ್ನೊಂದಿಗೆ ಮೂವರನ್ನು ಸೇರಿಸಿಕೊಂಡು ಮುಕ್ತಾರ್ ಅಲಿಯನ್ನು ಸಿಕ್ಕಿಸಲು ಮಹ್ಮದ್ ಬಿಗ್ ಪ್ಲ್ಯಾನ್ ಮಾಡಿದ್ದನು.
ಇದಕ್ಕಾಗಿ ಮಹ್ಮದ್ ತನ್ನ ಸ್ನೇಹಿತರಿಂದ ಚಿಕ್ಕಮಗಳೂರು ನೋಂದಣಿಯ KA-18-P-9557 ನಂಬರ್‌ನ ಥಾರ್ ವಾಹನದಲ್ಲಿ ಗಾಂಜಾ ತರಿಸಿದ್ದಾನೆ. ಮುಜ್ತಾರ್ ಅಲಿಗೆ ಗಾಂಜಾ ಕೊಟ್ಟು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಅನುಮಾನ ಬಂದು ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದು ತಮ್ಮದೇ ಆದ ಶೈಲಿಯಲ್ಲಿ ವಿಚಾರಣೆ ನಡೆಸಿದ ಬಳಿಕ ಸತ್ಯ ಗೊತ್ತಾಗಿದೆ. ಸಕಲೇಶಪುರ ಪಟ್ಟಣದ ಹಳೇಬಸ್ಟಾಂಡ್ ಸಮೀಪ ಈ ಘಟನೆ ನಡೆದಿದ್ದು ಥಾರ್ ವಾಹನದಲ್ಲಿದ್ದ 1 ಕೆಜಿ 360 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ.
ಆಗ ಮಹ್ಮದ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಗಾಂಜಾ ಸಮೇತ ಥಾರ್ ಜೀಪ್ ಅನ್ನೂ ಸಕಲೇಶಪುರ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ನಾಲ್ವರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಮೂಲದವರು ಎಂದು ತಿಳಿದು ಬಂದಿದೆ. ಸಕಲೇಶಪುರ ನಗರ ಠಾಣೆಯ ಪೊಲೀಸರು ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ತನ್ನನ್ನು ಸಿಕ್ಕಿಸಲು ಹೆಣೆದ ಪ್ಲ್ಯಾನ್ ಬಗ್ಗೆ ತಿಳಿದ ಬಳಿಕ ಮುಕ್ತಾರ್ ಅಲಿ ಪತ್ನಿಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಪತ್ನಿ ಮಾಡಿದ ಮೋಸಕ್ಕೆ ಮನೆ ಮಂದಿಯಲ್ಲೇ ಚೀಮಾರು ಹಾಕಿದ್ದಾರೆ. ಜೊತೆಗೆ ಮಹ್ಮದ್ ವಿರುದ್ಧ ಪೊಲೀಸ್ ಠಾಣೆಯಲ್ಲು ದೂರು ಕೂಡ ದಾಖಲಾಗಿದೆ. ಪೊಲೀಸರು ವಿಚಾರಣೆ ಬಳಿಕ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.












Click it and Unblock the Notifications