ಹಾಸನ; ಹೋಟೆಲ್‌ನಲ್ಲಿದ್ದ ಯುವತಿ ನಿಗೂಢ ಸಾವು
ಹಾಸನ, ಅಕ್ಟೋಬರ್ 20 : ಹೋಟೆಲ್‌ನಲ್ಲಿದ್ದ ಯುವತಿಯು ನಿಗೂಢ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಹಾಸನದಲ್ಲಿ ನಡೆದಿದೆ. ಪೊಲೀಸರು ಸ್ಥಳಕ್ಕೆ ತೆರಳಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಮೃತಪಟ್ಟ ಯುವತಿಯನ್ನು 23 ವರ್ಷದ ಭವಿತಾ ಎಂದು ಗುರುತಿಸಲಾಗಿದೆ. ಹಾಸನ ಜಿಲ್ಲೆಯ ಅರಕಲಗೂಡು ಮೂಲದ ಯುವತಿ 12 ದಿನಗಳಿಂದ ನಗರದ ಸರಾಯು ಹೋಟೆಲ್‌ನಲ್ಲಿ ರೂಂ ಮಾಡಿಕೊಂಡಿದ್ದಳು.
ಭಾನುವಾರ ಬೆಳಗ್ಗೆ ಯುವತಿ ಶವ ಹೋಟೆಲ್ ಹಿಂಭಾಗದ ದಾರಿಯಲ್ಲಿ ಪತ್ತೆಯಾಗಿದೆ. ಶವವನ್ನು ನೋಡಿದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಯುವತಿ ಮೃತಪಟ್ಟಿರುವುದು ಹೇಗೆ? ಎಂಬುದು ನಿಗೂಢವಾಗಿದೆ.

ಯುವತಿ ಆತ್ಮಹತ್ಯೆ ಮಾಡಿಕೊಂಡಳೋ ಅಥವ ಕೊಲೆಯೋ ಎಂದು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಯವತಿ ಪೋಷಕರು ಸಾವಿನ ಬಗ್ಗೆ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ಪೊಲೀಸರಿಗೆ ದೂರು ನೀಡಿದ್ದಾರೆ.
ಭವಿತಾ ದೇಹದ ಹಲವು ಭಾಗಗಳಲ್ಲಿ ಹಚ್ಚೆ ಹಾಕಿಸಿಕೊಂಡಿದ್ದಾಳೆ. ಕೈ ಮೇಲೆ ಪುನೀತ್ ಎಂದು ಬರೆಸಿಕೊಂಡಿದ್ದಾಳೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.
ಯುವತಿ ಮೈ ಮೇಲೆ ಯಾವುದೇ ಗಾಯದ ಗುರುತಿಲ್ಲ. ಆದ್ದರಿಂದ, ಹೋಟೆಲ್‌ನಿಂದ ಜಿಗಿದು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲು ಸಾಧ್ಯವಿಲ್ಲ. ಹೋಟೆಲ್ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಯುವತಿ ರೂಂಗೆ ಯಾರು ಬಂದಿದ್ದರು? ಎಂದು ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ.












Click it and Unblock the Notifications