ಕುಮಾರಸ್ವಾಮಿ ಮಾಡಿದ ತಪ್ಪನ್ನು ಇದೇ ಮೊದಲ ಬಾರಿಗೆ ಬಹಿರಂಗ ಪಡಿಸಿದ ರೇವಣ್ಣ

Recommended Video

      ರಾಷ್ಟ್ರೀಯ ಪಕ್ಷಗಳಿಂದ ಜೆಡಿಎಸ್ ಮುಗಿಸುವ ಯತ್ನ: ರೇವಣ್ಣ | H. D. Revanna | Oneindia Kannada

      ಹಾಸನ, ಸೆ 18: ಇದೇ ಮೊದಲ ಬಾರಿಗೆ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾಡಿದ ತಪ್ಪನ್ನು ಅವರ ಸಹೋದರರೂ ಆಗಿರುವ, ಮಾಜಿ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಬಹಿರಂಗ ಪಡಿಸಿದ್ದಾರೆ.

      " ನಾನು ಅವರ ಅಣ್ಣನಾಗಿ ಈ ಮಾತನ್ನು ಹೇಳುತ್ತಿದ್ದೇನೆ. ಕುಮಾರಸ್ವಾಮಿ ಕೆಲವು ತಪ್ಪುಗಳನ್ನು ಮಾಡಿದ್ದಾರೆ. ಈಗ ಅನುಭವಿಸುತ್ತಿದ್ದಾರೆ" ಎಂದು ರೇವಣ್ಣ ಹೇಳಿದ್ದಾರೆ.

      " ಯಾವುದಕ್ಕೂ ಪ್ರಯೋಜನವಿಲ್ಲದವರನ್ನು ಶಾಸಕರನ್ನಾಗಿ, ಮಂತ್ರಿಯನ್ನಾಗಿ ಮತ್ತು ಸಂಸದರನ್ನಾಗಿ ಕುಮಾರಸ್ವಾಮಿ ಮಾಡಿದ್ದಾರೆ" ಎಂದು ಹೇಳುವ ಮೂಲಕ, ರೇವಣ್ಣ, ತಮ್ಮ ಪಕ್ಷದ ಕೆಲವು ಮುಖಂಡರನ್ನು ಅಪ್ರಯೋಜಕರು ಎಂದು ಪರೋಕ್ಷವಾಗಿ ಹೇಳಿದ್ದಾರೆ.

      Former CM HD Kumaraswamy Did A Mistake, His Brother HD Revanna Statement

      " ಇಲ್ಲಿ ಯಾವುದೂ ಶಾಶ್ವತವಲ್ಲ, ಇನ್ನು ರಾಜಕೀಯ ಶಾಶ್ವತವೇ" ಎಂದು ಪ್ರಶ್ನಿಸಿರುವ ರೇವಣ್ಣ, " ಇದ್ದಷ್ಟು ದಿನ ಗೌರವದಿಂದ ಇರಬೇಕು" ಎಂದು, ಸಹೋದರ ಕುಮಾರಸ್ವಾಮಿಗೆ ಸಲಹೆಯನ್ನು ನೀಡಿದ್ದಾರೆ.

      " ಡಿ.ಕೆ.ಶಿವಕುಮಾರ್ ಅವರ ದೆಹಲಿಗೆ ಇಡಿ ವಿಚಾರಣೆಗೆ ಹೋಗುವ ಮುನ್ನ ದೇವೇಗೌಡರ ಆಶೀರ್ವಾದವನ್ನು ಪಡೆದುಕೊಂಡು ಹೋಗಿದ್ದಾರೆ" ಎಂದು ರೇವಣ್ಣ ಹೇಳಿದ್ದಾರೆ.

      " ಜೆಡಿಎಸ್ ಪಕ್ಷವನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ" ಎಂದಿರುವ ರೇವಣ್ಣ, ಜನರ ಆಶೀರ್ವಾದ ಮತ್ತು ದೇವರ ಕೃಪೆ ಇರುವ ತನಕ, ನಮ್ಮ ಪಕ್ಷವನ್ನು ಯಾರಿಂದಲೂ ಏನೂ ಮಾಡಲು ಸಾಧ್ಯವಿಲ್ಲ" ಎಂದು ತಮ್ಮ ಹಿಂದಿನ ಹೇಳಿಕೆಯನ್ನು ರಿವೈಂಡ್ ಮಾಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+