ಅಚ್ಚರಿಯ ಮೇಲೊಂದು ಅಚ್ಚರಿ, ಹಾಸನ ಕೆರೆಯಲ್ಲಿ ಬೆಂಕಿ

ಕೆರೆಯ ಪಕ್ಕದಲ್ಲಿ ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿ. ಘಟಕವಿದೆ. ಇಲ್ಲಿ ಟ್ಯಾಂಕರ್ ಗಳಿಗೆ ತೈಲ ಲೋಡ್ ಮಾಡಲಾಗುತ್ತದೆ. ಇಲ್ಲಿ ಸೋರುವ ತೈಲ ಕೆರೆ ಸೇರಿಕೊಂಡು ಕೆರೆಯ ನೀರು ತೈಲ ಮಿಶ್ರವಾಗಿದೆ. ಹೀಗಾಗಿ ಬೆಂಕಿ ಹತ್ತಿಕೊಂಡಿದೆ.

ಹಾಸನ, ಮಾರ್ಚ್ 9: ನೊರೆ ಉಗುಳುವ ಬೆಳ್ಳಂದೂರು ಕೆರೆ, ಬೆಂಕಿಯುಗುಳುವ ಮೈಸೂರಿನ ಭೂಮಿಯ ನಂತರ ಇದೀಗ ಹಾಸನದ ಕೆರೆಯೊಂದು ಹೊತ್ತಿ ಉರಿಯುತ್ತಿದೆ.

ಹಾಸನದ ಹೊರ ವಲಯದ ದೊಡ್ಡ ಬಸವನಹಳ್ಳಿ ಕೆರೆಯಲ್ಲಿ ಸೋಮವಾರ ಬೆಂಕಿ ಕಾಣಿಸಿಕೊಂಡು ಕೆಲ ಕಾಲ ಆತಂಕ ಸೃಷ್ಟಿಯಾಯಿತು. ಇಲ್ಲಿನ ಕೆರೆಯಲ್ಲಿ ನೀರಿದೆ. ಹೀಗಿದ್ದೂ ಬೆಂಕಿ ಹತ್ತಿಕೊಂಡಿದ್ದು ಹಲವರನ್ನು ಅಚ್ಚರಿಗೆ ಕೆಡವಿದೆ.

ಕೆರೆಯ ಪಕ್ಕದಲ್ಲಿ ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿ. ಘಟಕವಿದೆ. ಇಲ್ಲಿ ಟ್ಯಾಂಕರ್ ಗಳಿಗೆ ತೈಲ ಲೋಡ್ ಮಾಡಲಾಗುತ್ತದೆ. ಇಲ್ಲಿ ಸೋರುವ ತೈಲ ಕೆರೆ ಸೇರಿಕೊಂಡು ಕೆರೆಯ ನೀರು ತೈಲ ಮಿಶ್ರವಾಗಿದೆ. ಹೀಗಾಗಿ ಬೆಂಕಿ ಹತ್ತಿಕೊಂಡಿದೆ ಎನ್ನಲಾಗಿದೆ.

Fire rages on a patch of a lake near in Hassan,

ಭಾನುವಾರ ರಾತ್ರಿ ಹತ್ತಿಕೊಂಡ ಬೆಂಕಿ ಸೋಮವಾರ ಬೆಳಗ್ಗಿನವರೆಗೆ ಹೊತ್ತಿದ್ದು ನಂತರ ನಂದಿದೆ ಎಂದು ವರದಿಯಾಗಿದೆ.

ಹಲವು ಬಾರಿ ಬೆಂಕಿ
ಈ ಕೆರೆಯಲ್ಲಿ ಹಲವು ಬಾರಿ ಬೆಂಕಿ ಕಾಣಿಸಿಕೊಂಡಿದ್ದು ಈ ಹಿಂದೆಯೂ ವರದಿಯಾಗಿದೆ. ಹೀಗಾದೆಗೆಲ್ಲಾ ಇಲ್ಲಿನ ಹಿಂದೂಸ್ಥಾನ್ ಘಟಕದ ಅಧಿಕಾರಿಗಳು ಬಂದು ಪರಿಶೀಲನೆ ನಡೆಸುತ್ತಿದ್ದರು. ಮುಂದೆ ಹೀಗಾಗದಂತೆ ಎಚ್ಚರ ವಹಿಸುತ್ತೇವೆ ಎಂಬ ಭರವಸೆಯನ್ನೂ ನೀಡುತ್ತಿದ್ದರು. ಆದರೆ ಕೆರಯಲ್ಲಿ ಬೆಂಕಿಯುರಿಯುವ ಪ್ರಕರಣಗಳು ಮಾತ್ರ ಪುನರಾವರ್ತನೆ ಆಗುತ್ತಲೇ ಇವೆ.

ಇನ್ನು 'ಕೆರೆಗೆ ಬೆಂಕಿ ಹತ್ತಿರುವುದು ಇದು ಐದನೇ ಬಾರಿ. ಇದರಿಂದ ಸಮೀಪದಲ್ಲಿರುವ ನಮಗೆ ಆತಂಕವಾಗಿದೆ,' ಎಂದು ಸ್ಥಳೀಯರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+