ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸದ್ಯಕ್ಕೆ ಜಾತ್ಯಾತೀತರ ಒಕ್ಕೂಟ ಸೇರಲ್ಲ : ದೇವೇಗೌಡ

By Manjunatha
|
Google Oneindia Kannada News

ಹಾಸನ, ಮಾರ್ಚ್ 29: ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರ ಇಡಲು ಜಾತ್ಯಾತೀತ ಶಕ್ತಿಗಳು ಒಂದಾಗಬೇಕು ಎಂಬ ಕೂಗಿದೆ, ನನ್ನದು ಇದಕ್ಕೆ ವಿರೋಧ ಇಲ್ಲ ಆದರೆ ಚುನಾವಣೆ ಮುಗಿಯುವವರೆಗೆ ಈ ಬಗ್ಗೆ ನಾನು ಮಾತನಾಡುವುದಿಲ್ಲ, ಸದ್ಯಕ್ಕೆ ನಾನು ಜಾತ್ಯಾತೀತರ ಒಕ್ಕೂಟ ಸೇರಲ್ಲ ಎಂದು ಅವರು ಹೇಳಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ |ಚುನಾವಣೆಯ ಮುಖ್ಯ ದಿನಾಂಕಗಳು

ಹಾಸನದಲ್ಲಿ ಮಾತನಾಡಿದ ಅವರು ರಾಜ್ಯಕ್ಕೆ 2 ರಾಷ್ಟ್ರೀಯ ಪಕ್ಷಗಳಿಂದ ಪೆಟ್ಟು ಬಿದ್ದಿದೆ, ಇವರಿಬ್ಬರ ವಿರುದ್ಧ ನಾನು ಹೋರಾಡಬೇಕಿದೆ ಎಂದ ಅವರು ಮಾಯಾವತಿ ಅವರು ಬಾಂಬೆ, ಹೈದ್ರಾಬಾದ್ ಕರ್ನಾಟಕ ಮತ್ತು ಹಳೇ ಮೈಸೂರು ಭಾಗದಲ್ಲಿ ನಡೆಯುವ ಸಮಾವೇಶಗಳಲ್ಲಿ ಭಾಗವಹಿಸಿ ಪ್ರಚಾರ ನಡೆಸಲಿದ್ದಾರೆ ಎಂದರು.

'ರಾಹುಲ್‌ ಮಾತು ನಿರಾಸೆ ಹುಟ್ಟಿಸುತ್ತಿವೆ, ಅವರಿನ್ನೂ ಅಪ್ರಬುದ್ಧರು' 'ರಾಹುಲ್‌ ಮಾತು ನಿರಾಸೆ ಹುಟ್ಟಿಸುತ್ತಿವೆ, ಅವರಿನ್ನೂ ಅಪ್ರಬುದ್ಧರು'

ಜೆಡಿಎಸ್ ಮುಖಂಡ ಸಂದೇಶ್ ನಾಗರಾಜ್ ಅವರು ಜೆಡಿಎಸ್ ತೊರೆಯುತ್ತಾರೆ ಎಂನ ಊಹಾಪೋಹಕ್ಕೆ ತೆರೆ ಎಳೆದಿರುವ ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್‌.ಡಿ.ದೇವೇಗೌಡ ಅವರು 'ಸಂದೇಶ್ ನಾಗರಾಜ್ ಜೊತೆ ಮಾತನಾಡಿದ್ದೇನೆ, ಅವರು ಜೆಡಿಎಸ್ ಬಿಡುವುದಿಲ್ಲ' ಎಂದು ಸ್ಪಷ್ಟನೆ ನೀಡಿದ್ದಾರೆ.

Deve Gowda said he not join seculars union now

ಕಾವೇರಿ ನಿರ್ವಹಣಾ ಮಂಡಳಿ ರಚನೆ ಬಗ್ಗೆ ಮಾತಣಾಡಿದ ಅವರು ಕೇಂದ್ರದ ಮೇಲೆ ತಮಿಳುನಾಡು ಸಂಸದರು ಹೋರಾಟದ ಮೂಲಕ ಹಾಕುತ್ತಿರುವ ಒತ್ತಡದ ಬಗ್ಗೆ ರಾಜ್ಯದ ಜನ ಆತಂಕ ಪಡುವ ಅಗತ್ಯವಿಲ್ಲ ಎಂದರು.

'ಒಮ್ಮೆಗೇ ಸುಪ್ರೀಂ ಕೋರ್ಟ್ ಆದೇಶ ಜಾರಿ ಅಸಾಧ್ಯ' ಎಂದು ಈಗಾಗಲೇ ಕೇಂದ್ರ ಸರ್ಕಾರ ಹೇಳಿಕೆ ನೀಡಿದೆ, ಕೇಂದ್ರದವರು ಮತ್ತೆ ಸುಪ್ರೀಂ ಅಭಿಪ್ರಾಯ ಕೇಳುವುದಾಗಿಯೂ ಹೇಳಿದ್ದಾರೆ, ಆದರೂ ಸಹ ತಮಿಳು ಸೋದರರು ಹೋರಾಟ ಮಾಡುತ್ತಿದ್ದಾರೆ, ಅವರ ಹೊರಾಟ ನಿರರ್ಥಕ ಎಂದರು.

ಪಟ್ಟು ಹಾಕಿ ತೋರಿಸ್ತೀನಿ ಬನ್ನಿ ಎಂದು ಸಿಟ್ಟಿನಲ್ಲಿ ಸಿದ್ದುಗೆ ಗೌಡರ ಸವಾಲುಪಟ್ಟು ಹಾಕಿ ತೋರಿಸ್ತೀನಿ ಬನ್ನಿ ಎಂದು ಸಿಟ್ಟಿನಲ್ಲಿ ಸಿದ್ದುಗೆ ಗೌಡರ ಸವಾಲು

ಸಂಸದರು ಪ್ರತಿದಿನ ಹೊರಾಟ ಮಾಡುತ್ತಾ, ಲೋಕಸಭೆ ಕಲಾಪಕ್ಕೆ ಅಡ್ಡಿ ಮಾಡುತ್ತಿದ್ದಾರೆ, ಒಬ್ಬ ಸಂಸದರಂತೂ ಆತ್ಮಹತ್ಯೆ ಬೆದರಿಕೆ ಒಡ್ಡಿದ್ದಾರೆ, ಒಂದು ಜವಾಬ್ದಾರಿಯುತ ರಾಜ್ಯವಾಗಿ ಹೀಗೆ ಹಠ ಹಿಡಿಯುವುದು ತರವಲ್ಲ ಎಂದ ಅವರು ಸಮಸ್ಯೆಯನ್ನು ಸೌಹಾರ್ಧಯುತವಾಗಿ ಬಗೆಹರಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಮೊದಲು ಕೇಂದ್ರ‌ ಜಲಸಂಪನ್ಮೂಲ ಸಚಿವರ ಅಧ್ಯಕ್ಷತೆಯಲ್ಲಿ 4 ರಾಜ್ಯಗಳ ಮುಖ್ಯಮಂತ್ರಿಗಳನ್ನು ಒಳಗೊಂಡ ಕಮಿಟಿ ಮಾಡಲಿ, ಅಲ್ಲಿ‌ ನೀರಿನ‌ ಸ್ಥಿತಿಗತಿ ಅಧ್ಯಯನ ಮಾಡುವ ತಜ್ಞರೂ ಇರಲಿ, ಅದರ‌ 5 ವರ್ಷಗಳ ಚಟುವಟಿಕೆ ನೋಡೋಣ, ಸಾಧಕ ಬಾಧಕ ನೋಡಿ ನಂತರ ಮುಂದಿನ ನಿರ್ಧಾರಕ್ಕೆ ಬರಲಿ, ಅದಕ್ಕೂ ಮುನ್ನವೇ ತಮಿಳುನಾಡು ಸಂಸದರು ಈ ರೀತಿ ಸಾಯುವ ಹೇಳಿಕೆಯಂತಹಾ ಹೀನ ಹೇಳಿಕೆಗಳನ್ನು ‌ನೀಡಬಾರದು ಎಂದರು.

English summary
Jds national president Deve Gowda said jds will not join secular union now. He is not opposing the secular union but he said he will wait till the election to complete.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X