ಮೈತ್ರಿ ಸರ್ಕಾರ ಪತನಕ್ಕೆ ಕಾಂಗ್ರೆಸ್ ಕಾರಣ : ಪ್ರಜ್ವಲ್ ರೇವಣ್ಣ

Recommended Video

      ಮೈತ್ರಿ ಸರ್ಕಾರ ಪತನಕ್ಕೆ ಕಾರಣ ಏನು ತಿಳಿಸಿದ ಪ್ರಜ್ವಲ್ ರೇವಣ್ಣ

      ಹಾಸನ, ಜುಲೈ 29 : ಕರ್ನಾಟಕದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡಿದೆ. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ವಿಧಾನಸಭೆಯಲ್ಲಿ ಸೋಮವಾರ ವಿಶ್ವಾಸಮತಮತ ಸಾಬೀತು ಮಾಡಿದರು.

      ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನವಾಗಲು ಯಾರು ಕಾರಣ?. ಎಂಬ ಚರ್ಚೆಗಳು ನಡೆಯುತ್ತಿವೆ. ಹಾಸನ ಸಂಸದ, ಜೆಡಿಎಸ್ ನಾಯಕ ಪ್ರಜ್ವಲ್ ರೇವಣ್ಣ, "ಮೈತ್ರಿ ಸರ್ಕಾರ ಬೀಳಲು ಕಾಂಗ್ರೆಸಿಗರೇ ಕಾರಣ" ಎಂದು ಆರೋಪ ಮಾಡಿದ್ದಾರೆ.

      ಮೈತ್ರಿ ಸರ್ಕಾರದ ಹಲವು ಸಚಿವರು ಲೋಕೋಪಯೋಗಿ ಸಚಿವರಾಗಿದ್ದ ಎಚ್. ಡಿ. ರೇವಣ್ಣ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಸರ್ಕಾರ ಪತನಗೊಳ್ಳಲು ಎಚ್. ಡಿ. ರೇವಣ್ಣ ಕಾರಣ ಎಂಬ ಆರೋಪವನ್ನು ಪ್ರಜ್ವಲ್ ರೇವಣ್ಣ ತಳ್ಳಿ ಹಾಕಿದ್ದಾರೆ.

      "ಮೈತ್ರಿ ಸರ್ಕಾರ ಪತನಗೊಂಡಿರುವುದಕ್ಕೆ ನಾನು ಡಿಸ್ಟರ್ಬ ಆಗಿಲ್ಲ. ಪಕ್ಷಕ್ಕೂ ನಷ್ಟವಿಲ್ಲ, ದ್ವೇಷ ರಾಜಕಾರಣ ಮಾಡಬಾರದು" ಎಂದು ಪ್ರಜ್ವಲ್ ರೇವಣ್ಣ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ...

      ಕಾಂಗ್ರೆಸ್ಸಿಗರೇ ಕಾರಣ

      ಕಾಂಗ್ರೆಸ್ಸಿಗರೇ ಕಾರಣ

      "ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ಬೀಳಲು ಕಾಂಗ್ರೆಸ್ಸಿಗರೇ ಕಾರಣ. ಕೆಲವರು ಸಚಿವರಾಗಬೇಕೆಂದು ಹಣ ಪಡೆದು ಸರ್ಕಾರ ಬೀಳಿಸಿದ್ದಾರೆ" ಎಂದು ಹಾಸನ ಸಂಸದ, ಎಚ್. ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಆರೋಪಿಸಿದರು.

      ಗೂಬೆ ಕೂರಿಸುತ್ತಿದ್ದಾರೆ

      ಗೂಬೆ ಕೂರಿಸುತ್ತಿದ್ದಾರೆ

      "ಕೋತಿ ಮೊಸರು ತಿಂದು ಮೇಕೆ ಮೂತಿಗೆ ಒರೆಸಿತು ಎಂಬಂತೆ ನಮ್ಮ ತಂದೆಯ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಕಾಂಗ್ರೆಸ್ಸಿಗರ ವೈಯಕ್ತಿಕ ಕಾರಣಕ್ಕೆ ಸರ್ಕಾರ ಬೀಳಿಸಿದ್ದಾರೆ" ಎಂದು ಪ್ರಜ್ವಲ್ ರೇವಣ್ಣ ಹೇಳಿದರು.

      ನಾನು ಜ್ಯೋತಿಷಿಯಲ್ಲ

      ನಾನು ಜ್ಯೋತಿಷಿಯಲ್ಲ

      ಕರ್ನಾಟಕದಲ್ಲಿ ಈಗ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. "ಸರ್ಕಾರ ಎಷ್ಟು ದಿನ ಇರತ್ತೋ ಕಾದು ನೋಡೋಣ. ಭವಿಷ್ಯ ನುಡಿಯಲು ನಾನು ಜ್ಯೋತಿಷಿಯಲ್ಲ. ಸರ್ಕಾರ ಬಿದ್ದಿದ್ದರಿಂದ ಜೆಡಿಎಸ್ ಪಕ್ಷಕ್ಕೆ ನಷ್ಟವಿಲ್ಲ" ಎಂದು ಪ್ರಜ್ವಲ್ ರೇವಣ್ಣ ಸ್ಪಷ್ಟಪಡಿಸಿದರು.

      ಶಾಸಕರ ಅಭಿಪ್ರಾಯವಾಗಿದೆ

      ಶಾಸಕರ ಅಭಿಪ್ರಾಯವಾಗಿದೆ

      ಬಿಜೆಪಿಗೆ ಜೆಡಿಎಸ್ ಬಾಹ್ಯ ಬೆಂಬಲ ನೀಡುವ ಕುರಿತು ಪ್ರತಿಕ್ರಿಯೆ ನೀಡಿದ ಪ್ರಜ್ವಲ್ ರೇವಣ್ಣ, "ಯಾವುದೇ ಬೆಂಬಲ ನೀಡಲ್ಲ. ಅದು ನಮ್ಮ ಶಾಸಕರ ಅಭಿಪ್ರಾಯವಾಗಿದೆ. ಸರ್ಕಾರ ಬಿದ್ದಿದ್ದಕ್ಕೆ ನಾನು ಡಿಸ್ಟರ್ಬ್ ಆಗಿಲ್ಲ" ಎಂದು ಪ್ರಜ್ವಲ್ ರೇವಣ್ಣ ಸ್ಪಷ್ಟಪಡಿಸಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+