ಚಂದ್ರಯಾನ-3 ಯಶಸ್ವಿ: ಹಾಸನದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ ಜನ
ಹಾಸನ, ಆಗಸ್ಟ್, 23: ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್ ಕೊನೆಗೂ ಚಂದ್ರನ ಮೇಲೆ ಲ್ಯಾಂಡ್ ಆಗಿದ್ದು, ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದೆ. ಅಲ್ಲದೇ ದೇಶದೆಲ್ಲೆಡೆ ಚಂದ್ರಯಾನ-3ರ ಯಶಸ್ವಿ ಸಂಭ್ರಮ ಮನೆ ಮಾಡಿದೆ. ಹಾಗೆಯೇ ಹಾಸನದಲ್ಲಿಯೂ ಜನರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದಾರೆ.
ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಇಳಿಯುತ್ತಿದ್ದಂತೆ ಹಾಸನದ ಎಂಜಿ ರಸ್ತೆಯಲ್ಲಿ ಜನರು ಪಟಾಕಿ ಸಿಡಿಸಿ ಜೈ ಇಸ್ರೋ ಎಂದು ಘೋಷಣೆ ಕೂಗುವುದಲ್ಲದೇ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ಮೂರು ಚಂದ್ರಯಾನಗಳ ವಿವರ
ಬೆಂಗಳೂರು, ಆಗಸ್ಟ್, 23: ಚಂದ್ರಯಾನ-3ರ ವಿಕ್ರಂ ಲ್ಯಾಂಡರ್ ಚಂದ್ರನ ದಕ್ಷಿನ ಧ್ರುವದ ಮೇಲೆ ಇಳಿದಿದ್ದು, ಇದರಿಂದ ಇಡೀ ವಿಶ್ವವೇ ಭಾರತದತ್ತ ತಿರುಗಿ ನೀಡುವಂತೆ ಮಾಡಿದೆ. ಇಸ್ರೋ 15 ವರ್ಷಗಳಲ್ಲಿ ಮೂರು ಚಂದ್ರಯಾನಗಳನ್ನು ಕಳುಹಿಸಿದ್ದು, ಚಂದ್ರಯಾನ 1ರಿಂದ 3 ಅಂದರೆ ಇಲ್ಲಿಯವರೆಗಿನ ಘಟನೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ವಿಜ್ಞಾನಿಗಳು ಮೊದಲ ಬಾರಿಗೆ 2009 ರಲ್ಲಿ ಚಂದ್ರಯಾನ -1ರ ದತ್ತಾಂಶವನ್ನು ಬಳಸಿಕೊಂಡು ಚಂದ್ರನ ಧ್ರುವ ಪ್ರದೇಶಗಳ ಕತ್ತಲೆ ಮತ್ತು ಶೀತ ಭಾಗಗಳಲ್ಲಿ ಮಂಜುಗಡ್ಡೆಯ ಕುರುಹುಗಳನ್ನು ಕಂಡುಹಿಡಿದಿದ್ದರು. ಇದು ಭಾರತದ ಮೊಟ್ಟ ಮೊದಲ ಚಂದ್ರಯಾನ ಯೋಜನೆ ಆಗಿದೆ. ಇದನ್ನು ಅಕ್ಟೋಬರ್ 22, 2008ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಾಯಿತು.
ಭಾರತ, ಯುಎಸ್, ಯುಕೆ, ಜರ್ಮನಿ, ಸ್ವೀಡನ್ ಮತ್ತು ಬಲ್ಗೇರಿಯಾದಲ್ಲಿ ತಯಾರಿಸಿದ 11 ವೈಜ್ಞಾನಿಕ ಉಪಕರಣಗಳನ್ನು ಹೊತ್ತ ಬಾಹ್ಯಾಕಾಶ ನೌಕೆಯು ಚಂದ್ರನ ರಾಸಾಯನಿಕ, ಖನಿಜಶಾಸ್ತ್ರೀಯ ಮತ್ತು ಫೋಟೋ-ಜಿಯೋಲಾಜಿಕಲ್ ಮ್ಯಾಪಿಂಗ್‌ಗಾಗಿ ಮೇಲ್ಮೈಯಿಂದ 100 ಕಿಲೋ ಮೀಟರ್ ಎತ್ತರದಲ್ಲಿ ಚಂದ್ರನ ಸುತ್ತ ಸುತ್ತಿತು.
ಮಿಷನ್‌ನ ಎಲ್ಲಾ ಪ್ರಮುಖ ಅಂಶಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಮೇ 2009ರಲ್ಲಿ ಕಕ್ಷೆಯನ್ನು 200 ಕಿಲೋ ಮೀಟರ್‌ಗೆ ವಿಸ್ತರಿಸಲಾಯಿತು. ಈ ಉಪಗ್ರಹವು ಚಂದ್ರನ ಸುತ್ತ 3,400ಕ್ಕೂ ಹೆಚ್ಚು ಕಕ್ಷೆಗಳನ್ನು ಮಾಡಿತು. ಈ ಕಕ್ಷೆಯ ಕಾರ್ಯಾಚರಣೆಯು ಎರಡು ವರ್ಷಗಳ ಅವಧಿಯನ್ನು ಹೊಂದಿತ್ತು. ಮತ್ತು ಆಗಸ್ಟ್ 29, 2009ರಂದು ಬಾಹ್ಯಾಕಾಶ ನೌಕೆಯೊಂದಿಗಿನ ಸಂವಹನವನ್ನು ಕಳೆದುಕೊಂಡ ನಂತರ ಅಕಾಲಿಕವಾಗಿ ರದ್ದುಪಡಿಸಲಾಯಿತು.
ಅಂದಿನ ಇಸ್ರೋ ಅಧ್ಯಕ್ಷ ಜಿ.ಮಾಧವನ್ ನಾಯರ್ ಮಾತನಾಡಿ, ಚಂದ್ರಯಾನ-1 ತನ್ನ ಶೇಕಡಾ 95ರಷ್ಟು ಉದ್ದೇಶಗಳನ್ನು ಸಾಧಿಸಿತ್ತು ಎಂದಿದ್ದರು.
ನಂತರ ಜುಲೈ 22, 2019ರಂದು ಆರ್ಬಿಟರ್, ಲ್ಯಾಂಡರ್ ಮತ್ತು ರೋವರ್ ಒಳಗೊಂಡ ಚಂದ್ರಯಾನ -2 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಆರ್ಬಿಟರ್‌ನಲ್ಲಿ ಪೇಲೋಡ್‌ಗಳ ಮೂಲಕ ವೈಜ್ಞಾನಿಕ ಅಧ್ಯಯನಗಳನ್ನು ಪ್ರದರ್ಶಿಸುವುದು ಮತ್ತು ಚಂದ್ರನ ಮೇಲ್ಮೈಯಲ್ಲಿ ಮೃದುವಾಗಿ ಇಳಿಯುವ ಮತ್ತು ತಿರುಗುವ ತಂತ್ರಜ್ಞಾನವನ್ನು ಪ್ರದರ್ಶಿಸುವುದು ದೇಶದ ಎರಡನೇ ಚಂದ್ರ ಕಾರ್ಯಾಚರಣೆಯ ಪ್ರಮುಖ ಉದ್ದೇಶವಾಗಿತ್ತು.
ಉಡಾವಣೆ, ನಿರ್ಣಾಯಕ ಕಕ್ಷೀಯ ವ್ಯಾಯಾಮಗಳು, ಲ್ಯಾಂಡರ್ ಬೇರ್ಪಡಿಸುವಿಕೆ, "ಡಿ-ಬೂಸ್ಟ್" ಮತ್ತು "ರಫ್ ಬ್ರೇಕಿಂಗ್" ಹಂತ ಸೇರಿದಂತೆ ತಂತ್ರಜ್ಞಾನ ಪ್ರದರ್ಶನದ ಹೆಚ್ಚಿನ ಘಟಕಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಚಂದ್ರನನ್ನು ತಲುಪುವ ಕೊನೆಯ ಹಂತದಲ್ಲಿ ರೋವರ್ ಹೊಂದಿರುವ ಲ್ಯಾಂಡರ್ ಅಪಘಾತಕ್ಕೀಡಾಯಿತು. ಇದರಿಂದ ಚಂದ್ರನ ಮೇಲ್ಮೈಯಲ್ಲಿ ಇಳಿಯುವ ಉದ್ದೇಶವನ್ನು ಸಾಧಿಸಲು ಸಾಧ್ಯವಾಗದೇ ವಿಫಲವಾಯಿತು.

ಇನ್ನು ನಾವು ತುಂಬಾ ಹತ್ತಿರದಲ್ಲಿದ್ದೆವು ಆದರೆ ಕೊನೆಯ ಎರಡು ಕಿಲೋ ಮೀಟರ್‌ಗಳಲ್ಲಿ ಯಶಸ್ವಿಯಾಗಲು ಸಾಧ್ಯವಾಗಲಿಲ್ಲ ಎಂದು ಆಗಿನ ವಿಜ್ಞಾನಿಗಳು ಹೇಳಿದ್ದರು. ಆದರೂ ಲ್ಯಾಂಡರ್ ಮತ್ತು ರೋವರ್‌ನಿಂದದ ಬೇರ್ಪಟ್ಟ ಆರ್ಬಿಟರ್‌ನ ಎಲ್ಲಾ 8 ವೈಜ್ಞಾನಿಕ ಉಪಕರಣಗಳು ವಿನ್ಯಾಸದ ಪ್ರಕಾರ ಕಾರ್ಯನಿರ್ವಹಿಸುತ್ತಿವೆ. ಮತ್ತು ಅಮೂಲ್ಯವಾದ ವೈಜ್ಞಾನಿಕ ದತ್ತಾಂಶವನ್ನಯ ಒದಗಿಸುತ್ತಿವೆ. ಇಸ್ರೋ ಪ್ರಕಾರ ನಿಖರವಾದ ಉಡಾವಣೆ ಮತ್ತು ಕಕ್ಷೆಯ ವ್ಯಾಯಾಮದಿಂದಾಗಿ, ಆರ್ಬಿಟರ್‌ನ ಮಿಷನ್ ಜೀವಿತಾವಧಿ 7 ವರ್ಷಗಳಿಗೆ ಏರಿದೆ.
ಚಂದ್ರಯಾನ -2ರ ಆರ್ಬಿಟರ್ ಮತ್ತು ಚಂದ್ರಯಾನ್ -3ರ ಚಂದ್ರ ಮಾಡ್ಯೂಲ್ ನಡುವೆ ಯಶಸ್ವಿ ದ್ವಿಮುಖ ಸಂವಹನವನ್ನು ಸ್ಥಾಪಿಸಲಾಗಿದೆ ಎಂದು ಇಸ್ರೋ ತಿಳಿಸಿದೆ. 2009ರಲ್ಲಿ ಚಂದ್ರನ ಮೇಲೆ ನೀರಿನ ಆವಿಷ್ಕಾರವು ಒಂದು ಮಹತ್ವದ ಘಟನೆಯಾಗಿದ್ದು, ನಂತರ ವಿಜ್ಞಾನಿಗಳು ಭಾರತದ ಚಂದ್ರಯಾನ -1ರಲ್ಲಿನ ಉಪಕರಣದ ದತ್ತಾಂಶವನ್ನು ಬಳಸಿಕೊಂಡು ಚಂದ್ರನ ಮಣ್ಣಿನ ಮೇಲಿನ ಪದರದಲ್ಲಿ ನೀರಿನ ಉಪಸ್ಥಿತಿಯ ಮೊದಲ ನಕ್ಷೆಯನ್ನು ರಚಿಸಿದರು. ಭವಿಷ್ಯದ ಚಂದ್ರನ ಅನ್ವೇಷಣೆಗೆ ಇದು ಬಹಳ ಉಪಯುಕ್ತವೆಂದು ಸಾಬೀತುಪಡಿಸುತ್ತದೆ ಎಂದು ಇಸ್ರೋ ವಿಜ್ಞಾನಿಗಳು ಹೇಳಿದ್ದಾರೆ.












Click it and Unblock the Notifications