ಹಾಸನ; ಮದುವೆ ಮಾತನಾಡುವಾಗ ಜಗಳವಾಗಿ ಪ್ರಿಯತಮೆಯನ್ನೇ ಕೊಂದ
ಹಾಸನ, ಮೇ 16: ಪ್ರಿಯಕರನೇ ಪ್ರಿಯತಮೆಯ ತಲೆಗೆ ಹೊಡೆದು ಕೊಲೆ ಮಾಡಿರುವ ಘಟನೆ ಹಾಸನದ ಅರಕಲಗೂಡಿನಲ್ಲಿ ನಡೆದಿದೆ. ಸಿಂಧು (18) ಎಂಬ ಯುವತಿಯೇ ತನ್ನ ಪ್ರಿಯಕರನಿಂದ ಕೊಲೆಯಾದ ದುರ್ದೈವಿ.
ಕೊಲೆಯಾದ ಸಿಂಧು ಮತ್ತು ಚಂದನ್ ಕಳೆದ 3 ವರ್ಷಗಳಿಂದ ಪ್ರೀತಿಸುತ್ತಿದ್ದು, ಮನೆಯವರಿಗೆ ತಿಳಿಯದಂತೆ ಮದುವೆಯಾಗಲು ನಿರ್ಧರಿಸಿದ್ದರು ಎನ್ನಲಾಗಿದೆ. ಮದುವೆ ಕುರಿತಂತೆ ಚರ್ಚಿಸಲು ಚಂದನ್ ಆಕೆಯನ್ನು ತನ್ನ ಮನೆಗೆ ಕರೆದೊಯ್ದಿದ್ದಾನೆ. ಅಲ್ಲಿ ಇಬ್ಬರೂ ಮಾತುಕತೆ ನಡೆಸುವ ವೇಳೆ ಭಿನ್ನಾಭಿಪ್ರಾಯವುಂಟಾಗಿ ಮಾತಿಗೆ ಮಾತು ಬೆಳೆದು, ಕೋಪಗೊಂಡ ಚಂದನ್ ಕೈಗೆ ಸಿಕ್ಕ ಮರದ ತುಂಡಿನಿಂದ ಸಿಂಧು ತಲೆಗೆ ಹೊಡೆದಿದ್ದಾನೆ. ಇದರಿಂದ ಗಂಭೀರ ಗಾಯಗೊಂಡ ಆಕೆ ಪ್ರಜ್ಞೆ ತಪ್ಪಿ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾಳೆ.

ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆಕೆ ಸಾವನ್ನಪ್ಪಿದ್ದಾಳೆ. ಪೊಲೀಸರು ಚಂದನ್ ನನ್ನು ವಶಕ್ಕೆ ಪಡೆದಿದ್ದು, ವಿಚಾರಣೆಗೊಳಪಡಿಸಿದ ವೇಳೆ ತಾನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಪೊಲೀಸರು ಚಂದನ್, ಆತನ ಸ್ನೇಹಿತರಾದ ಶರತ್, ಗೀತಾ, ಪ್ರತಾಪ್ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.












Click it and Unblock the Notifications