ಬೆಂಗಾವಲು ವಾಹನದಲ್ಲಿ ಹಣ, ಬಿಜೆಪಿಯ ಕುತಂತ್ರ ಎಂದ ರೇವಣ್ಣ

Recommended Video

      ಆಘಾತಕಾರಿ ಭವಿಷ್ಯ ನುಡಿದ ಎಚ್.ಡಿ.ರೇವಣ್ಣ: Lok Sabha Elections 2019

      ಹಾಸನ, ಏ.20: ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಗೆ ಒಂದು ದಿನ ಬಾಕಿ ಇರುವಾಗ ಲೋಕೋಪಯೋಗಿ ಸಚಿವ ಎಚ್‌ಡಿ ರೇವಣ್ಣ ಅವರ ಬೆಂಗಾವಲು ವಾಹನದಲ್ಲಿ ಹಣ ದೊರೆತಿದ್ದು ದೊಡ್ಡ ಸುದ್ದಿಯಾಗಿತ್ತು.

      ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

      ಇದೀಗ ಈ ವಿಚಾರ ಕುರಿತು ಪ್ರತಿಕ್ರಯಿಸಿರುವ ಎಚ್‌ಡಿ ರೇವಣ್ಣ ಬಿಜೆಪಿಯವರು ಇಷ್ಟು ಕೆಳ ಮಟ್ಟಕ್ಕೆ ಇಳಿಯುತ್ತಾರೆ ಅಂದುಕೊಂಡಿರಲಿಲ್ಲ. ಇದೆಲ್ಲವು ಐಟಿ ಇಲಾಖೆಯ ಸೃಷ್ಟಿಯಷ್ಟೆ ಎಂದಿದ್ದಾರೆ.

      ಐಟಿ ಎಂದು ಹೆಸರನ್ನು ಹೇಳಿಕೊಂಡು ತರಕಾರಿ ಮಾರುವವನ ಬಳಿ 80 ಸಾವಿರ ಹಣ ಲಪಟಾಯಿಸಿದ್ದಾರೆ. ನಾಮಕರಣಕ್ಕೆಂದು ಇಟ್ಟಿದ್ದ 2 ಚೀಲ ರಾಜಮುಡಿ ಅಕ್ಕಿ ತೆಗೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿದರು.

      BJP misusing IT department for election

      ಜೆಡಿಎಸ್‌ ಮುಖಂಡರು ಮತ್ತು ಕಾರ್ಯಕರ್ತರ ಮೇಲೆ ನಿರಂತರ ಐಟಿ ದಾಳಿ ಮೂಲಕ ಬಿಜೆಪಿ ಮುಖಂಡರು ಸರಕಾರಿ ಯಂತ್ರ ದುರುಪಯೋಗ ಮಾಡಿಕೊಂಡಿದ್ದಾರೆ. ನಮ್ಮ ಮೇಲೆ ಐಟಿ ಮೂಲಕ ರೇಡ್‌ ಮಾಡಿಸಿ ನಮ್ಮನ್ನು ಚುನಾವಣೆ ಪ್ರಚಾರಕ್ಕೆ ಇಳಿಯದಂತೆ ತಂತ್ರ ಹೆಣೆಯಲಾಗಿತ್ತು.

      ಬಿಜೆಪಿಯವರದ್ದು ಕೀಳುಮಟ್ಟದ ರಾಜಕಾರಣ. ಮಧ್ಯಾಹ್ನ ಜಿಲ್ಲಾಧಿಕಾರಿಯವರೇ ನನ್ನ ಕಾರನ್ನು ಚೆಕ್‌ ಮಾಡಿದ್ದಾರೆ. ಆದರೆ, ರಾತ್ರಿ ಐಟಿಯವರು ನನ್ನ ಪಿಎ ಬಳಿ ಇದ್ದ ಹಣವನ್ನು ಬೆಂಗಾವಲು ಕಾರಿನಲ್ಲಿರುವ ಬಟ್ಟೆ ಬ್ಯಾಗ್‌ ಮೇಲೆ ಇರಿಸಿ ಪೋಟೋ ತೆಗೆದುಕೊಳ್ಳುವ ಕೀಳುಮಟ್ಟಕ್ಕೆ ಇಳಿದಿದ್ದಾರೆ ಎಂದು ಆರೋಪಿಸಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+