ಲೋಕಸಭಾ ಚುನಾವಣೆ 2024: ಹಾಸನದಲ್ಲಿ ಪುತ್ರನ ಪರ ಮತಯಾಚನೆಗಿಳಿದ ಭವಾನಿ ರೇವಣ್ಣ

ಹಾಸನ, ಮಾರ್ಚ್ 19: ಹಾಸನದಲ್ಲಿ ಲೋಕಸಭಾ ಚುನಾವಣೆಯ ಕಣ ರಂಗೇರಿದೆ. ಕಾಂಗ್ರೆಸ್‌ ಮಣಿಸಲು ಬಿಜೆಪಿ-ಜೆಡಿಎಸ್‌ ಮೈತ್ರಿಯಾಗಿದ್ದು, ಹಾಸನ, ಮಂಡ್ಯ ಹಾಗೂ ಕೋಲಾರ ಲೋಕಸಭೆ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಸ್ಪರ್ಧೆಗಳಿಸುವ ಬಗ್ಗೆ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ತಿಳಿಸಿದ್ದಾರೆ. ಹೀಗಾಗಿ ಹಾಸನ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಮತಯಾಚನೆ ಆರಂಭವಾಗಿದೆ.

ಜೆಡಿಎಸ್‌ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ, ಭವಾನಿ ರೇವಣ್ಣ ಮತಯಾಚನೆ ಗಿಳಿದಿದ್ದು, ಹಾಸನ ಲೋಕಸಭಾ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಭವಾನಿ ರೇವಣ್ಣ 'ರಾಜ್ಯದಲ್ಲಿ ಲೋಕಸಭಾ ಚುನಾವಣೆ ಇದೆ. ಹಾಸನ ಲೋಕಸಭಾ ಕ್ಷೇತ್ರದಲ್ಲಿ ಪ್ರಜ್ವಲ್‌ರೇವಣ್ಣ ಅಭ್ಯರ್ಥಿಯಾಗಿದ್ದಾರೆ. ಹಾಸನದಲ್ಲಿ ವಕೀಲರ ಸಂಘದಲ್ಲಿ ವಕೀಲರನ್ನು ಭೇಟಿ ಮಾಡಿ ಪ್ರಚಾರ ಮಾಡಿದ್ದೇವೆ. ಎಲ್ಲರಿಗೂ ಮತ ಕೊಡಿ ಎಂದು ಕೇಳಿದ್ದೇವೆ' ಎಂದರು.

Bhavani Revanna Start Lok Sabha Election Campaign In Hassan Constituency

'ಕಳೆದ ಐದು ವರ್ಷದಿಂದ ಸಾಕಷ್ಟು ಅನುದಾನ ತಂದಿದ್ದಾರೆ. ಕೊರೊನಾ ಕಾರಣದಿಂದ ಎರಡು ವರ್ಷ ಕೇಂದ್ರ ಸರ್ಕಾರ ಅನುಧಾನ ಕೊಡಲಿಲ್ಲ. ಆಮೇಲೆ ಎಲ್ಲಾ ಕೆಲಸಗಳಿಗೂ ಅನುದಾನ ಕೊಟ್ಟಿದ್ದಾರೆ. ರೇವಣ್ಣ ಮಾಡಿರುವ ಕೆಲಸ ಕಣ್ಮುಂದೆ ನಿದರ್ಶನವಾಗಿ ನಿಂತಿದೆ. ಕೋರ್ಟ್, ಸಾರಿಗೆ ಬಸ್ ನಿಲ್ದಾಣ ರೇವಣ್ಣ ಅವರ ಕೊಡುಗೆ' ಎಂದು ಹೇಳಿದರು.

'ಕಳೆದ ವಾರ ನಿತಿನ್ ಗಡ್ಕರಿ ಬಂದಾಗ ರೇವಣ್ಣ ಅವರಿಗೆ ಕರೆ ಮಾಡಿ ಕಾರ್ಯಕ್ರಮಕ್ಕೆ ಕರೆಸಿಕೊಂಡಿದ್ದರು. ಹಾಸನ ಜಿಲ್ಲೆಗೆ 4,500 ಕೋಟಿ ಅನುದಾನ ಕೊಟ್ಟಿದ್ದಾರೆ. ದೇವೇಗೌಡರು, ರೇವಣ್ಣ ಅವರು ಖುದ್ದಾಗಿ ಹೋಗಿ ಗಡ್ಕರಿ ಅವರನ್ನು ಭೇಟಿ ಮಾಡಲಾಗಿ ಹಾಸನಕ್ಕೆ ಅನುದಾನ ಕೊಟ್ಟಿದ್ದಾರೆ. ಅದು ಬಹಳ ಸಂತೋಷದ ವಿಷಯ' ಎಂದರು.

'ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ದಿನ ನಿತ್ಯ ನೋಡುತ್ತಿದ್ದೇವೆ. ಮೋದಿಯವರ, ದೇವೇಗೌಡರ, ಜನಗಳ ಆಶೀರ್ವಾದ ಬೇಡುತ್ತಾ, ಪ್ರಜ್ವಲ್ ರೇವಣ್ಣ ಅವರಿಗೆ ಮತ ಕೇಳುತ್ತಿದ್ದೇನೆ. ನಾನು ಎಲ್ಲಿಲ್ಲಿ ಹೋಗಲು ಸಾಧ್ಯವಾಗುತ್ತದೆ, ಅಲ್ಲಿ ಹೋಗಿ ಪ್ರಚಾರ ಮಾಡುತ್ತೇನೆ' ಎಂದು ಹಾಸನ ನಗರದ ಜಿಲ್ಲಾ ವಕೀಲರ ಸಂಘದಲ್ಲಿ ಮಾಜಿ ಜಿಲ್ಲಾ ಪಂಚಾಯತ್‌ ಸದಸ್ಯೆ ಭವಾನಿ ರೇವಣ್ಣ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+