ಬೆಂಗಳೂರು-ಮಂಗಳೂರು ಬೈಪಾಸ್ ರಸ್ತೆಯಲ್ಲಿ ಬಸ್ ಅಡ್ಡಗಟ್ಟಿ ತಲ್ವಾರ್‌ನಿಂದ ಗ್ಲಾಸ್ ಪುಡಿಪುಡಿ ಮಾಡಿದ್ದ ಆರೋಪಿ ಬಂಧನ
ಹಾಸನ, ಜನವರಿ, 31: ಪುಡಿರೌಡಿಯೊಬ್ಬ ರಾತ್ರೋರಾತ್ರಿ ಖಾಸಗಿ ಬಸ್ ತಡೆದು ತಲ್ವಾರ್‌ನಿಂದ ಬಸ್ ಗ್ಲಾಸ್ ಹೊಡೆದ ಘಟನೆ ಹಾಸನದ ಬೈಪಾಸ್ ಬಳಿ ನಡೆದಿತ್ತು. ಇದೀಗ ಆ ಪುಂಡನನ್ನು ಹಾಸನ ಪೊಲೀಸರು ಬಂಧಿಸುವಲ್ಲಿ ಯಶಸ್ವಯಾಗಿದ್ದಾರೆ. ಹಾಗಾದರೆ ಆತನನ್ನು ಎಳೆದುಕೊಂಡುಬಂದ ಪರಿ ಹೇಗಿತ್ತು ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ.
ಪುಡಿರೌಡಿಯೊಬ್ಬ ಜನವರಿ 29ರ ಮಧ್ಯರಾತ್ರಿ ಸುಮಾರು 2 ಗಂಟೆ ವೇಳೆಗೆ ಕಾರಿನಲ್ಲಿ ಬಂದು ಪ್ರಯಾಣಿಕರಿದ್ದ ಬಸ್ಸನ್ನು ಅಡ್ಡಗಟ್ಟಿದ್ದಾನೆ. ಬಳಿಕ ಲಾಂಗ್‌ನಿಂದ ಬಸ್ ಗ್ಲಾಸ್ ಅನ್ನು ತಲ್ವಾರ್‌ನಿಂದ ಹೊಡೆದ ಘಟನೆ ಹಾಸನದ ದೇವರಾಯಪಟ್ಟಣ ಬಳಿಯ ಬೆಂಗಳೂರು-ಮಂಗಳೂರು ಬೈಪಾಸ್ ರಸ್ತೆಯಲ್ಲಿ ನಡೆದಿದೆ.

ಇನ್ನು ಇದೀಗ ಪುಂಡಾಟ ಮೆರೆದ ಪುಡಿರೌಡಿಯ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ಶಾಂತಿಗ್ರಾಮ ಬಳಿ ನಡೆದಿದೆ. ಮನು (23) ಬಂಧಿತ ಆರೋಪಿಯಾಗಿದ್ದಾನೆ. ಈತ ಒಂದು ಕೊಲೆ, ಮೂರು ಕೊಲೆ ಯತ್ನ ಪ್ರಕರಣಗಳ ಆರೋಪಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಹೆದ್ದಾರಿಯಲ್ಲಿ ಹಲ್ಲೆಗೆ ಯತ್ನಿಸಿದ ಪುಡಿರೌಟಿ ಮನು ಅಂಬಾತತನ್ನು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿ ಹಾಸನಕ್ಕೆ ಕರೆ ತರುತ್ತಿದ್ದರು. ಈ ವೇಳೆ ಮೂತ್ರ ವಿಸರ್ಜನೆಗೆ ಅನುಮತಿ ನೀಡಬೇಕೆಂದು ಕೇಳಿದ್ದಾನೆ. ಆಗ ಶಾಂತಿಗ್ರಾಮ ಬಳಿ ರಸ್ತೆ ಬದಿ ಜೀಪ್ ನಿಲ್ಲಿಸಿ ಮೂತ್ರ ವಿಸರ್ಜನೆಗೆ ಅವಕಾಶ ನೀಡಿದಾಗ ಪೊಲೀಸರ ಮೇಲೆಯೇ ಕಲ್ಲಿನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ.
ಈ ಸಂದರ್ಭದಲ್ಲಿ ಹಾಸನ ನಗರ ಠಾಣೆ ಇನ್ಸ್‌ಪೆಕ್ಟರ್ ಮೋಹನ್‌ಕೃಷ್ಣ ಆತ್ಮರಕ್ಷಣೆಗಾಗಿ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ನಂತರ ಸಬ್ ಇನ್ಸ್‌ಪೆಕ್ಟರ್ ಕುಮಾರ್ ಎಂಬುವವರು ಆರೋಪಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ ಎಂದು ತಿಳಿದುಬಂದಿದೆ.
ಬುಧವಾರ ಮಧ್ಯರಾತ್ರಿ 2 ಗಂಟೆ ವೇಳೆಗೆ ದೇವರಾಯಪಟ್ಟಣದ ಬಳಿಯ ಬೈಪಾಸ್ ರಸ್ತೆಯಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಖಾಸಗಿ ಬಸ್ ಸಂಚರಿಸುತ್ತಿತ್ತು. ಈ ವೇಳೆ ಕೆಎ-51-ಎಂವಿ-8912 ನಂಬರ್‌ನ ಬಿಳಿ ಬಣ್ಣದ ಸ್ವಿಫ್ಟ್ ಕಾರನಲ್ಲಿ ಬಂದ ಆರೋಪಿ ಬಸ್‌ನ ಮುಂದೆ ಕಾರನ್ನು ಅಡ್ಡ ಹಾಕಿದ್ದಾನೆ. ಬಳಿಕ ಕಾರಿನಿಂದ ಇಳಿದ ಬಳಿಕ ಗಲಾಟೆ ಮಾಡಿ ಏಕಾಏಕಿ ಬಸ್ ಗ್ಲಾಸನ್ನು ಒಡೆದು ಹಾಕಿದ್ದ.
ಈ ವಿಡಿಯೋವನ್ನು ಬಸ್‌ನಲ್ಲಿದ್ದ ಪ್ರಯಾಣಿಕರು ಸೆರೆಹಿಡಿದ್ದು, ಬಳಿಕ ಇದು ಎಲ್ಲೆಡೆ ವೈರಲ್ ಆಗಿತ್ತು. ಆಗ ಸಾರ್ವಜನಿಕರು ಗೃಹ ಸಚಿವರ ವಿರುದ್ಧ ಆಕ್ರೋಶಗಳನ್ನು ವ್ಯಕ್ತಪಡಿಸಿದ್ದರು. ಹೀಗೆ ಹಲ್ಲೆಗಳು ನಡೆಯುತ್ತಿದ್ದರೆ ಸಾಮಾನ್ಯ ಜನರ ಗತಿಯೇನು? ಇಂತಹವರನ್ನು ಮಟ್ಟ ಹಾಕುವ ಕೆಲಸವನ್ನು ಏಕೆ ಮಾಡುತ್ತಿಲ್ಲ? ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು.
ಬಸ್ ಹೀಗೆ ಆದರೆ ಇನ್ನೂ ಕಾರು, ಬೈಕ್‌ನಂತ ವಾಹನದಲ್ಲಿ ಪ್ರಯಾಣ ಮಾಡುವವರು ಏನು ಮಾಡಬೇಕೆಂದು ನೆಟ್ಟಿಗರು ಪೊಲೀಸರನ್ನು ಪ್ರಶ್ನಿಸಿದ್ದರು. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಎಚ್ಚತ್ತ ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದರು. ಇದೀಗ ಕೊನೆಗೂ ಆರೋಪಿಯನ್ನು ಬಂಧಿಸುವಲ್ಲಿ ಯಶ್ವಸ್ವಿಯಾಗಿದ್ದಾರೆ.












Click it and Unblock the Notifications