ಅರಸೀಕೆರೆ ಚುನಾವಣೆ ಫಲಿತಾಂಶ 2023: ಶಿವಲಿಂಗೇ ಗೌಡ Vs ಸಂತೋಷ್

ಹಳೇ ಮೈಸೂರು ಭಾಗದಲ್ಲಿ ಗುರುತಿಸಲ್ಪಡುವ ಹಾಸನ ಜಿಲ್ಲಾ ವ್ಯಾಪ್ತಿಯ ಅರಸೀಕೆರೆ ವಿಧಾನಸಭಾ ಕ್ಷೇತ್ರ ಜಾತ್ಯಾತೀತ ಜನತಾದಳದ (JDS) ಭದ್ರಕೋಟೆಯೆಂದೇ ಗುರುತಿಸಲ್ಪಟ್ಟಿದೆ. ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದ್ದು, ಬಹುತೇಕ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಹಣಾಹಣಿ ನಡೆಯಲಿದೆ.

ಕ್ಷೇತ್ರದಲ್ಲಿ ಬಿಜೆಪಿಯಿಂದ ಜಿ.ವಿ ಬಸವರಾಜು, ಜೆಡಿಎಸ್‌ನಿಂದ ಎನ್.ಆರ್. ಸಂತೋಷ್, ಕಾಂಗ್ರೆಸ್ಸಿನಿಂದ ಕೆ.ಎಂ.ಶಿವಲಿಂಗೇಗೌಡ, ಆಪ್ ನಿಂದ ರಾಜೇಶ್ವರಿ ಬಿ.ಎಚ್ ಕಣದಲ್ಲಿದ್ದಾರೆ. ಅರಸೀಕೆರೆಯಲ್ಲಿ ಒಟ್ಟು 2,14,020 ಮತದಾರರು ಇದ್ದಾರೆ. ಮೊನ್ನೆ ನಡೆದ ಚುನಾವಣೆಯಲ್ಲಿ ಇಲ್ಲಿ ಶೇ. 84.97 ಮತದಾನವಾಗಿತ್ತು.

Arsikere Assembly Election Result

2018ರಲ್ಲಿ ಆಗ ಜೆಡಿಎಸ್‌ನಲ್ಲಿದ್ದ ಎಂ.ಕೆ. ಶಿವಲಿಂಗೇಗೌಡ ಅವರು ಬರೊಬ್ಬರಿ 93,986 ಮತಗಳಿಂದ ಗೆದ್ದಿದ್ದರು. ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಜೆ.ಮರಿಸ್ವಾಮಿಯವರು ಕೇವಲ 25,258 ಮತ ಪಡೆದು ಭಾರೀ ಅಂತರದಿಂದ ಸೋಲುಂಡಿದ್ದರು.

ಈ ಬಾರಿ ಸಹ ಜೆಡಿಎಸ್ ಬಿಟ್ಟು ಶಿವಲಿಂಗೇಗೌಡರು ಕಾಂಗ್ರೆಸ್‌ ಸೇರಿ ಅಲ್ಲಿಂದ ಸ್ಪರ್ಧಿಸಿದ್ದಾರೆ. ಇದು ಕೈ ಬಣಕ್ಕೆ ವರದಾನವಾಗುವ ಸಾಧ್ಯತೆ ಇದೆಯೇ ಎನ್ನುವುದು ಫಲಿತಾಂಶ ಹೊರಬಿದ್ದ ನಂತರ ಗೊತ್ತಾಗಲಿದೆ.

ಜೆಡಿಎಸ್‌ ಭದ್ರಕೋಟೆ ಈ ಬಾರಿ ಕಾರಣಾಂತರಗಳಿಂದ ಅಲುಗಾಡಿದ ಪರಿಣಾಮವೇ ಗೆಲುವಿನ ಕುದುರೆ ಶಿವಲಿಂಗೇಗೌಡ ಅವರು ಕಾಂಗ್ರೆಸ್ ಪಾಲಾಗಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ, ಈ ಭಾಗದಲ್ಲಿ ಪಂಚರತ್ನ ಯಾತ್ರ ಕೈ ಹಿಡಯಬಹುದು ಎಂದು ಜೆಡಿಎಸ್ ವರಿಷ್ಠರ ಲೆಕ್ಕಾಚಾರ. ಇದಕ್ಕೆ ಕೆಲವೇ ಗಂಟೆಯಲ್ಲಿ ಉತ್ತರ ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+