ಅರಕಲಗೂಡು: ಕರೆಂಟ್ ಬಿಲ್ ಕಟ್ಟಿ ಎಂದಿದ್ದಕ್ಕೆ ಸೆಸ್ಕಾಂ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಥಳಿಸಿದ್ರು
ಹಾಸನ, ಜೂನ್, 01: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೂ ಬರುವ ಮುನ್ನವೇ ಪ್ರತೀ ಮನೆಗೂ 200 ಯೂನಿಟ್ ಉಚಿತ ವಿದ್ಯುತ್ ಕೊಡುವುದಾಗಿ ಹೇಳಿತ್ತು. ಇದೀಗ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಇನ್ನೂ ಈ ಯೋಜನೆಯನ್ನು ಜಾರಿ ಮಾಡಿಲ್ಲ ಎಂದು ವಿಪಕ್ಷಗಳು ವಾಗ್ದಾಳಿಯನ್ನು ಮುಂದುವರೆಸಿವೆ. ಮತ್ತೊಂದೆಡೆ ವಿದ್ಯುತ್ ಬಿಲ್ ಕಲೆಕ್ಷನ್‌ಗೆ ಬಂದಂತಹ ಸಿಬ್ಬಂದಿಗಳ ಮೇಲೂ ಹಲವರು ಹಲ್ಲೆ ಮಾಡಿದ ಘಟನೆಗಳೂ ನಡೆದಿವೆ. ಅದೇ ರೀತಿಯ ಘಟನೆ ಇದೀಗ ಹಾಸನ ಜಿಲ್ಲೆಯ ಅರಕಲಗೂಡಿಲ್ಲೂ ನಡೆದಿದೆ.
ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಹಳೇ ಕೋರ್ಟ್ ರಸ್ತೆಯಲ್ಲಿರುವ ಸುರೇಶ್ ಎಂಬುವವರ ಮನೆಗೆ ಸೆಸ್ಕಾಂ ಸಿಬ್ಬಂದಿ ಬುಧವಾರ (ಮೇ 31) ವಿದ್ಯುತ್ ಬಿಲ್ ಕಟ್ಟಿಸಿಕೊಳ್ಳಲು ಹೋಗಿದ್ದರು. ಈ ವೇಳೆ ನಾವು ವಿದ್ಯುತ್ ಬಿಲ್ಲ ಕಟ್ಟುವುದಿಲ್ಲ ಏನಿವಾಗ ಎಂದು ಸೆಸ್ಕಾಂ ಸಿಬ್ಬಂದಿ ಸಂತೋಶ್ ಎಂಬುವವರ ಮೇಲೆ ಕೋಳಿ ಅಂಗಡಿ ಮಾಲೀಕ ಸುರೇಶ್ ಮತ್ತು ಆತನ ಮಗ ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಇನ್ನು ಸೆಸ್ಕಾಂ ಸಿಬ್ಬಂದಿ ಸಂತೋಷ್ ಹಲ್ಲೆಗೊಳಗಾದವರಾಗಿದ್ಧಾರೆ. ಸುರೇಶ್ 1150 ರೂಪಾಯಿ ವಿದ್ಯುತ್ ಬಿಲ್ ಪಾವತಿಸಬೇಕಿಗಿತ್ತು. ಬುಧವಾರ (ಮೇ 31) ಬಿಲ್ ಕಲೆಕ್ಷನ್ ಮಾಡಲು ಹೋದಾಗ ನಾವು ಹಣ ಕಟ್ಟಲ್ಲ ಎಂದು ಸುರೇಶ್ ಹಾಗೂ ಪೋಷಕರು ಚೆಸ್ಕಾಂ ಸಿಬ್ಬಂದಿಯನ್ನು ನಿಂದಿಸಿದ್ದಾರೆ. ಅಲ್ಲದೆ ಏಕಾಏಕಿ ಹಲ್ಲೆಯನ್ನೂ ಸಹ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಹಲ್ಲೆಗೊಳಗಾದ ಸಂತೋಷ್ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದು, ಆಸ್ಪತ್ರೆಗೆ ಪೊಲೀಸರು ಭೇಟಿ ನೀಡಿ ಮಾಹಿತಿಯನ್ನು ಕಲೆಹಾಕಿದ್ದಾರೆ. ಇನ್ನು ಈ ಘಟನೆ ಅರಕಲಗೂಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.












Click it and Unblock the Notifications