ಹಾಸನ: ಹೇಮಾವತಿ ಬಲದಂಡೆ ನಾಲೆಗೆ 550 ಕ್ಯೂಸೆಕ್ ನೀರು ಬಿಡುಗಡೆ, ಧರಣಿ ಕೈಬಿಟ್ಟ ಎಚ್.ಡಿ.ರೇವಣ್ಣ
ಹಾಸನ, ಅಕ್ಟೋಬರ್, 22: ತೀವ್ರ ಬರಗಾಲ ಹಿನ್ನೆಲೆ ಜನ, ಜಾನುವಾರುಗಳಿಗೆ ಹಾಗೂ ಕುಡಿಯಲು ಕಾಲುವೆಗಳಿಗೆ ನೀರು ಹರಿಸಲು ಆಗ್ರಹಿಸಿ ಮಾಜಿ.ಸಚಿವ ಎಚ್.ಡಿ.ರೇವಣ್ಣ ಅವರು ನೂರಾರು ಬೆಂಬಲಿಗರ ಜೊತೆ ಹೇಮಾವತಿ ಜಲಾಶಯದ ಬಳಿ ಅಹೋರಾತ್ರಿ ಪ್ರತಿಭಟನೆ ನಡೆಸಿದರು.
ಹಾಸನ ತಾಲೂಕಿನ ಗೊರೂರು ಸಮೀಪದ ಹೇಮಾವತಿ ಜಲಾಶಯದ ಬಳಿ ನಿನ್ನೆ (ಅಕ್ಟೋಬರ್ 21) ಹೇಮಾವತಿ ನದಿ ನೀರು ಕಾಲುವೆಗೆ ಹರಿಸುವಂತೆ ಆಗ್ರಹಿಸಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಪ್ರತಿಭಟನೆ ನಡೆಸಿದ್ದು, ಬಳಿಕ ಎಚ್ಚೆತ್ತ ಅಧಿಕಾರಿಗಳು ಹೋರಾಟಕ್ಕೆ ಮಣಿದು ಹೇಮಾವತಿ ಬಲದಂಡೆ ನಾಲೆಗೆ 550 ಕ್ಯೂಸೆಕ್ ನೀರು ಬಿಡುಗಡೆ ಮಾಡಿದ ಘಟನೆ ನಡೆದಿದೆ. ಇನ್ನು ಉಳಿದ ನಾಲೆಗಳಿಗಳಿಗೆ ಶೀಘ್ರವಾಗಿ ನೀರು ಹರಿಸುವ ಭರವಸೆ ನೀಡಿದ್ದರಿಂದ ರೇವಣ್ಣ ಅವರು ಪ್ರತಿಭಟನೆ ಕೈಬಿಟ್ಟಿದ್ದಾರೆ.

ರೇವಣ್ಣ ಅವರು ನಿನ್ನೆ ಬೆಳಗ್ಗೆಯಿಂದ ರಾತ್ರಿ 11 ಗಂಟೆವರೆಗೂ ಹೇಮಾವತಿ ಜಲಾಶಯದ ಮುಖ್ಯ ಇಂಜಿನಿಯರ್ ಕಛೇರಿ ಎದುರು ಧರಣಿ ನಡೆಸಿದ್ದು, ರಾತ್ರಿ 10 ಗಂಟೆ ವೇಳೆಗೆ ಸ್ಥಳಕ್ಕೆ ಬಂದ ಮುಖ್ಯ ಇಂಜಿನಿಯರ್ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ತಕ್ಷಣವೇ ನೀರು ಹರಿಸುವ ಭರವಸೆ ನೀಡಿದರು ಎಂದು ತಿಳಿದುಬಂದಿದೆ.












Click it and Unblock the Notifications