ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾಸನದಲ್ಲಿ ಮತಚಲಾವಣೆ ಮಾಡಿದ ಶತಾಯುಷಿ ಕಾಳಮ್ಮ

|
Google Oneindia Kannada News

ಹಾಸನ, ಏಪ್ರಿಲ್ 18 : ಹಾಸನ ಲೋಕಸಭಾ ಕ್ಷೇತ್ರದ ಚುನಾವಣೆಗೆ ಮತದಾನ ಶಾಂತಿಯುತವಾಗಿ ಮುಕ್ತಾಯಗೊಂಡಿತು. ಹೊಳೆನರಸೀಪುರದಲ್ಲಿ 103 ವರ್ಷದ ಕಾಳಮ್ಮ ಎಂಬುವವರು ತಮ್ಮ ಹಕ್ಕು ಚಲಾವಣೆ ಮಾಡಿದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಗುರುವಾರ ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯ ತನಕ ಮತದಾನ ನಡೆಯಿತು. ಬೆಳಗ್ಗೆ 9 ಗಂಟೆಯ ಬಳಿಕ ಮತದಾನ ಬಿರುಸುಗೊಂಡಿತು. 11 ಗಂಟೆಯ ವೇಳೆಗೆ ಶೇ 23.31ರಷ್ಟು ಮತದಾನವಾಗಿತ್ತು. ಸಂಜೆ 5 ಗಂಟೆಯ ವೇಳೆಗೆ ಶೇ 71.14 ರಷ್ಟು ಮತದಾನವಾಗಿದೆ.

ಹಾಸನ ಲೋಕಸಭಾ ಕ್ಷೇತ್ರದ ಚುನಾವಣಾ ಪುಟ

ಹೊಳೆನರಸೀಪುರ ತಾಲ್ಲೂಕಿನ ಮಾರೇನಹಳ್ಳಿ ಮತಗಟ್ಟೆಯಲ್ಲಿ ಶತಾಯುಷಿ ಕಾಳಮ್ಮ ತಮ್ಮ ಹಕ್ಕು ಚಲಾವಣೆ ಮಾಡಿದರು. ವೀಲ್‌ ಚೇರ್‌ನಲ್ಲಿ ಆಗಮಿಸಿದ ಕಾಳಮ್ಮ (103) ಮತ ಚಲಾವಣೆ ಮಾಡಿದರು.

ಬಿಜೆಪಿ ಅಭ್ಯರ್ಥಿ ಎ.ಮಂಜು ಅವರು ಹನ್ಯಾಳುವಿನಲ್ಲಿ ಪತ್ನಿಯೊಂದಿಗೆ ಆಗಮಿಸಿ ಮತ ಚಲಾವಣೆ ಮಾಡಿದರು. ಹಾಸನ ಲೋಕಸಭಾ ಕ್ಷೇತ್ರದ ಚುನಾವಣಾ ಕಣದಲ್ಲಿ 6 ಅಭ್ಯರ್ಥಿಗಳಿದ್ದರು. ಎಲ್ಲರ ಭವಿಷ್ಯ ಮತಯಂತ್ರ ಸೇರಿದ್ದು, ಮೇ 23ರಂದು ಫಲಿತಾಂಶ ಪ್ರಕಟವಾಗಲಿದೆ.

ಜನರ ಮೆಚ್ಚುಗೆ

ಜನರ ಮೆಚ್ಚುಗೆ

ಹಾಸನ ಜಿಲ್ಲೆಯಾದ್ಯಂತ ವಿಶೇಷ ಚೇತನರಿಗೆ ವಿಶೇಷ ಸೌಲಭ್ಯ ಕಲ್ಪಿಸಲಾಗಿತ್ತು. ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರಿಗೆ ಸಾರಿಗೆ ಸೌಲಭ್ಯ ಸ್ವಯಂ ಸೇವಕರ ನೆರವು, ಗಾಲಿ ಚುರ್ಚಿ, ಭೂತಗಾಜಿನ ಸೌಲಭ್ಯ, ಬ್ರೆಲ್‍ಲಿಪಿ ಸೌಲಭ್ಯ ಒದಗಿಸಲಾಗಿತ್ತು. ವಿಕಲ ಚೇತನರನ್ನು ಕರೆತಂದು ಮತ ಚಲಾಯಿಸಲು ನೆರವಾಗುತ್ತಿದ್ದದು ಮೆಚ್ಚುಗೆಗೆ ಕಾರಣವಾಯಿತು.

ಮೊದಲ ಮತದಾನ

ಮೊದಲ ಮತದಾನ

ಹಾಸನ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಡಾ.ಕೆ.ಎನ್.ವಿಜಯ್‍ಪ್ರಕಾಶ್ ಅವರು ಪುತ್ರ ಆಕಾಂಕ್ಷ್ ಅವರೊಡನೆ ಮತ ಚಲಾಯಿಸಿದರು. ಆಕಾಂಕ್ಷ್ ಅವರು ಮೊದಲ ಬಾರಿಗೆ ಮತದಾನ ಮಾಡಿದರು.

ಪತ್ನಿ ಸಮೇತ ಮತದಾನ

ಪತ್ನಿ ಸಮೇತ ಮತದಾನ

ಮಾಜಿ ಪ್ರಧಾನಿ, ಹಾಸನ ಕ್ಷೇತ್ರದ ಸಂಸದ ಎಚ್.ಡಿ.ದೇವೇಗೌಡ ಅವರು ಪಡುವಲ ಹಿಪ್ಪೆಯಲ್ಲಿ ಪತ್ನಿ ಚನ್ನಮ್ಮ ಸಮೇತರಾಗಿ ಬಂದು ಮತದಾನ ಮಾಡಿದರು. ಈ ಬಾರಿಯ ಚುನಾವಣೆಯಲ್ಲಿ ಅವರು ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.

ಪ್ರಜ್ವಲ್ ರೇವಣ್ಣ ಮತದಾನ

ಪ್ರಜ್ವಲ್ ರೇವಣ್ಣ ಮತದಾನ

ಹಾಸನ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ತಂದೆ ಎಚ್.ಡಿ ರೇವಣ್ಣ, ತಾಯಿ ಭವಾನಿ ರೇವಣ್ಣ ಅವರ ಜೊತೆ ಪಡುವಲ ಹಿಪ್ಪೆಯಲ್ಲಿ ಮತ ಚಲಾಯಿಸಿದರು.

ಎ.ಮಂಜು ಮತದಾನ

ಎ.ಮಂಜು ಮತದಾನ

ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಮಂಜು ಅವರು ಹನ್ಯಾಳುವಿನಲ್ಲಿ ಪತ್ನಿಯೊಂದಿಗೆ ಆಗಮಿಸಿ ಮತ ಚಲಾವಣೆ ಮಾಡಿದರು.

English summary
Peaceful voting for Hassan lok sabha seat on April 18, 2019. 103 year old Kalamma cast her vote in Holenarasipura taluk Marenahalli polling booth.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X