ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೋಗಿಬಿಲ್ ಸೇತುವೆ ಲೋಕಾರ್ಪಣೆ ಮಾಡಿದ ಮೋದಿ

|
Google Oneindia Kannada News

ಗುಹವಾಟಿ, ಡಿಸೆಂಬರ್ 25 : ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅತ್ಯಂತ ಉದ್ದದ ರೈಲು ಮತ್ತು ರಸ್ತೆ ಸೇತುವೆಯನ್ನು ಲೋಕಾರ್ಪಣೆ ಮಾಡಿದರು. 1997ರಲ್ಲಿ ಎಚ್.ಡಿ.ದೇವೇಗೌಡರು ಈ ಯೋಜನೆಗೆ ಶಂಕು ಸ್ಥಾಪನೆ ಮಾಡಿದ್ದರು.

ಮಂಗಳವಾರ ಮಧ್ಯಾಹ್ನ ನರೇಂದ್ರ ಮೋದಿ ಅವರು ಬ್ರಹ್ಮಪುತ್ರಾ ನದಿಗೆ ಅಡ್ಡಲಾಗಿ ಕಟ್ಟಿರುವ ಬೋಗಿಬಿಲ್ ಸೇತುವೆಯನ್ನು ಉದ್ಘಾಟಿಸಿದರು. ಈ ಸೇತುವೆಯ ಉದ್ದ 4.9 ಕಿ.ಮೀ., ರೈಲು ಹಾಗೂ ರಸ್ತೆ ಸಂಪರ್ಕವನ್ನು ಈ ಸೇತುವೆ ಕಲ್ಪಿಸುತ್ತದೆ.

PM Narendra Modi inaugurates Bogibeel bridge in Assam

5920 ಕೋಟಿಯ ದೇಶದ ಅತಿ ದೊಡ್ಡ ಸೇತುವೆ ಬಳಕೆಗೆ ಸಿದ್ಧ, ಏನು ವಿಶೇಷ? 5920 ಕೋಟಿಯ ದೇಶದ ಅತಿ ದೊಡ್ಡ ಸೇತುವೆ ಬಳಕೆಗೆ ಸಿದ್ಧ, ಏನು ವಿಶೇಷ?

ಅಸ್ಸಾಂ-ಅರುಣಾಚಲ ಪ್ರದೇಶದ ನಡುವೆ ಈ ಸೇತುವೆಯನ್ನು ನಿರ್ಮಿಸಲಾಗಿದೆ. ದೇಶದ ಅತ್ಯಂತ ಉದ್ದನೆಯ ರೈಲ್‌ರೋಡ್ ಸೇತುವೆ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. ಪೂರ್ಣವಾಗಿ ವೆಲ್ಡಿಂಗ್ ಮೂಲಕ ನಿರ್ಮಿಸಿದ ದೇಶದ ಏಕೈಕ ಹಾಗೂ ಮೊದಲ ಸೇತುವೆ ಇದಾಗಿದೆ.

ಬೋಗಿಬಿಲ್ ಸೇತುವೆ ತುರ್ತು ಸಂದರ್ಭದಲ್ಲಿ ಯುದ್ಧ ವಿಮಾನವನ್ನು ಕೂಡಾ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡುವಷ್ಟು ಸುಭದ್ರವಾಗಿದೆ. 1997ರಲ್ಲಿ ಶಂಕುಸ್ಥಾಪನೆಗೊಂಡರೂ, ಸೇತುವೆಯ ಕಾಮಗಾರಿ ಆರಂಭಗೊಂಡಿದ್ದು 2002ರಲ್ಲಿ.

ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಸೇತುವೆಯ ಕಾಮಗಾರಿ ಆರಂಭವಾಯಿತು. ಸುಮಾರು 5960 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಸೇತುವೆ ಕಾಮಗಾರಿ ಪೂರ್ಣಗೊಳ್ಳುವಾಗ ಶೇ 85ರಷ್ಟು ವೆಚ್ಚ ಏರಿಕೆಯಾಗಿದೆ.

ಬ್ರಹ್ಮಪುತ್ರಾ ನದಿಗೆ ಕಟ್ಟಿರುವ 4ನೇ ಸೇತುವೆ ಇದಾಗಿದೆ. ಅರುಣಾಚಲ ಪ್ರದೇಶದ ಭಾಗದಲ್ಲಿರುವ ಚೀನಾ ಗಡಿ ಭಾಗಕ್ಕೆ ಮಿಲಿಟರಿ ಅಗತ್ಯವನ್ನು ಪೂರೈಸಲೂ ಈ ಸೇತುವೆ ಅತಿ ಹೆಚ್ಚು ಪ್ರಯೋಜನಕಾರಿಯಾಗಿದೆ.

English summary
Prime Minister Narendra Modi inaugurated India's longest rail-cum-road bridge, the Bogibeel bridge, in Assam on December 25, 2018. It is Asia's second longest rail-cum-road bridge.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X