ಅಸ್ಸಾಂನ ತೈಲ ಬಾವಿಯಲ್ಲಿ ಅಗ್ನಿ ಅವಘಡ: ಭಾರಿ ಪ್ರಮಾಣದಲ್ಲಿ ಬೆಂಕಿ

ಗುವಾಹಟಿ, ಜೂನ್ 9: ಅಸ್ಸಾಂನ ಟಿನ್ಸುಕಿಯಾ ಜಿಲ್ಲೆಯ ಆಯಿಲ್ ಇಂಡಿಯಾ ಲಿಮಿಟೆಡ್ (OIL) ನಲ್ಲಿರುವ ಭಾಗ್ ಜನ್ ನೈಸರ್ಗಿಕ ತೈಲ, ಅನಿಲ ಬಾವಿಯಲ್ಲಿ ಸ್ಫೋಟ ಸಂಭವಿಸಿದ್ದು, ಭಾರಿ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ.

Recommended Video

      ಚಿರು ಜಾತಕದಲ್ಲಿದ್ದ ದೋಷದ ಬಗ್ಗೆ ನಟ ಜಗ್ಗೇಶ್ ಹೇಳಿದ್ದೇನು? | Chiranjeevi Sarja's Horoscope

      ಹಾಗ್ನೋಡಿದ್ರೆ, 13 ದಿನಗಳಿಂದಲೂ ಈ ಬಾವಿಯಿಂದ ಗ್ಯಾಸ್ ಲೀಕ್ ಆಗುತ್ತಲೇ ಇತ್ತು. ಮೇ 29 ರಿಂದ ಸೋರಿಕೆಯಾಗುತ್ತಿದ್ದ ಅನಿಲವನ್ನು ನಿಯಂತ್ರಿಸುವಷ್ಟರಲ್ಲಿ ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ.

      ಸೋರಿಕೆ ಆಗುತ್ತಿದ್ದ ಅನಿಲವನ್ನು ನಿಯಂತ್ರಿಸಲು ಸಿಂಗಾಪುರ್ ನಿಂದ ಮೂವರು ಪರಿಣಿತರು ಆಗಮಿಸಿದ್ದರು. ಇವರು ಆಯಿಲ್ ಇಂಡಿಯಾ ಮತ್ತು ಒ.ಎನ್.ಜಿ.ಸಿ ತಂಡಗಳೊಂದಿಗೆ ಅನಿಲ ಸೋರಿಕೆ ಬಗ್ಗೆ ಚರ್ಚಿಸಿದ್ದರು. ಹೀಗಿರುವಾಗಲೇ, ಅವಘಡ ಜರುಗಿದೆ.

      Massive Fire Broke Out At Gas Well Of OIL At Tinsukia District Assam

      ''ಮಧ್ಯಾಹ್ನ 1.40 ಕ್ಕೆ ಘಟನೆ ಜರುಗಿದೆ. ಅವಘಡದಿಂದ ಒ.ಎನ್.ಜಿ.ಸಿ ಯಲ್ಲಿನ ಅಗ್ನಿಶಾಮಕ ಸಿಬ್ಬಂದಿಯೊಬ್ಬರಿಗೆ ಗಾಯಗೊಂಡಿದ್ದಾರೆ. ಇದರ ಹೊರತಾಗಿ ಇನ್ಯಾವುದೇ ಸಾವು-ನೋವಿನ ಮಾಹಿತಿ ಲಭ್ಯವಾಗಿಲ್ಲ'' ಎಂದು OIL ಸೀನಿಯರ್ ಮ್ಯಾನೇಜರ್ ಜಯಂತ್ ಬೊರ್ಮುಡೊಯ್ ತಿಳಿಸಿದ್ದಾರೆ.

      ಅದೃಷ್ಟವಶಾತ್ ಬೆಂಕಿ ಕಾಣಿಸಿಕೊಂಡಾಗ ಸ್ಥಳದಲ್ಲಿ ಪರಿಣಿತರು ಮತ್ತು ಸಿಬ್ಬಂದಿಗಳು ಇರಲಿಲ್ಲ. ಹಾಗೇ ಈ ಘಟನೆಯಿಂದ ತೈಲ ಬಾವಿಯ 1.5 ಕೀ.ಮೀ ವ್ಯಾಪ್ತಿಯಲ್ಲಿ ವಾಸಿಸುವ ಜನರಿಗೆ ಯಾವುದೇ ಅಪಾಯ ಇಲ್ಲ ಎಂದು ಕಂಪನಿ ಮೂಲಗಳು ತಿಳಿಸಿವೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+