• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Just in: 500 ರೂಪಾಯಿಗೆ ಜಗಳ, ತಲೆ ಕತ್ತರಿಸಿ ಠಾಣೆಗೆ ತಂದ ಆರೋಪಿ

|
Google Oneindia Kannada News

ಗುವಾಹಟಿ, ಆಗಸ್ಟ್ 17: ಅಸ್ಸಾಂನ ವ್ಯಕ್ತಿಯೊಬ್ಬ 500 ರೂಪಾಯಿ ವಿಷಯದಲ್ಲಿ ಜಗಳ ಮಾಡಿಕೊಂಡು ತನ್ನದೇ ಗ್ರಾಮದ 55 ವರ್ಷದ ವ್ಯಕ್ತಿಯೊಬ್ಬನ ಶಿರಚ್ಛೇದ ಮಾಡಿರುವ ಘಟನೆ ಉತ್ತರ ಅಸ್ಸಾಂನ ಸೋನಿತ್‌ಪುರ ಜಿಲ್ಲೆಯಲ್ಲಿ ನಡೆದಿದೆ.

ಈ ಬರ್ಬರ ಕೊಲೆ ಬಳಿಕ ಆರೋಪಿಯೇ ಕತ್ತರಿಸಿದ ತಲೆಯೊಂದಿಗೆ ರಾತ್ರಿಯ ವೇಳೆಯಲ್ಲಿ ಸುಮಾರು 25 ಕಿಲೋಮೀಟರ್ ದೂರದ ಪೊಲೀಸ್ ಠಾಣೆಗೆ ನಡೆದುಕೊಂಡು ಹೋಗಿ ಶರಣಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Breaking: ಅಂತರ್ಜಾತಿ ವಿವಾಹ, ಬ್ರಾಹ್ಮಣನ ಶವ ಮುಟ್ಟದ ಗ್ರಾಮಸ್ಥರು!Breaking: ಅಂತರ್ಜಾತಿ ವಿವಾಹ, ಬ್ರಾಹ್ಮಣನ ಶವ ಮುಟ್ಟದ ಗ್ರಾಮಸ್ಥರು!

ಉತ್ತರ ಅಸ್ಸಾಂನ ಸೋನಿತ್‌ಪುರ ಜಿಲ್ಲೆಯ ರಂಗಪಾರ ಪೊಲೀಸ್ ಠಾಣೆ ವ್ಯಾಪ್ತಿಯ ದೋಯಲ್‌ಪುರದಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಆಯೋಜಿಸಲಾಗಿದ್ದ ಫುಟ್‌ಬಾಲ್ ಪಂದ್ಯ ಮುಗಿದ ನಂತರ ಸೋಮವಾರ ರಾತ್ರಿ 10:30ರ ಸುಮಾರಿಗೆ ಈ ಘಟನೆ ನಡೆದಿದೆ. ಅರುಣಾಚಲ ಪ್ರದೇಶದ ಗಡಿಗೆ ಸಮೀಪದಲ್ಲಿರುವ ದೂರದ ಗ್ರಾಮ ದೋಯಲ್‌ಪುರ.

ಮೃತನನ್ನು ಬೋಯಿಲಾ ಹೆಮ್ರಾಮ್ ಎಂದು ಗುರುತಿಸಲಾಗಿದೆ. ಆರೋಪಿ ಸುನಿರಾಮ್ ಮಾದ್ರಿ (25) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. 500 ರೂಪಾಯಿಗಳ ವಿವಾದದ ಪರಿಣಾಮವಾಗಿ ಬೋಯಿಲಾ ಹೇಮ್ರಾಮ್ ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾರೆ.

ಘಟನೆಯ ಹಿಂದಿನ ದಿನ ಆರೋಪಿಯಿಂದ 500 ರೂಪಾಯಿ ಸಾಲವನ್ನು ಪಡೆದಿದ್ದರು. ಆದರೆ ನಂತರ ಸಾಲ ಪಡೆದದನ್ನು ಒಪ್ಪಿಲ್ಲ. ಫುಟ್‌ಬಾಲ್ ಪಂದ್ಯದ ನಂತರ ಮೇಕೆಯನ್ನು ಬಹುಮಾನವಾಗಿ ಗೆದ್ದ ಆರೋಪಿ ಸುನಿರಾಮ್ ಮಾದ್ರಿ, ತನ್ನೊಂದಿಗೆ ಕಸಾಯಿಖಾನೆಗೆ ಬರುವಂತೆ ಬೋಯಿಲಾ ಹೆಮ್ರಾಮ್‌ನನ್ನು ಕೇಳಿಕೊಂಡಿದ್ದಾರೆ. ಆದರೆ, ಆತ ಆರೋಪಿಯೊಂದಿಗೆ ಹೋಗಲು ನಿರಾಕರಿಸಿದನು. ಇದರಿಂದ ರೊಚ್ಚಿಗೆದ್ದ ಸುನಿರಾಮ್ ಮಾದ್ರಿ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವ್ಯಕ್ತಿಯನ್ನು ಕೊಂದ ನಂತರ, ಆರೋಪಿ ಕತ್ತರಿಸಿದ ತಲೆಯನ್ನು ಹೊತ್ತುಕೊಂಡು 25 ಕಿ.ಮೀ ನಡೆದು ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಜೊತೆಗೆ ಕೊಲೆಗೆ ಬಳಸಿದ ಮಚ್ಚನ್ನು ಸಹ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

"ಆರೋಪಿಯನ್ನು ವಿಚಾರಣೆಗಾಗಿ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಮತ್ತು ಪ್ರಕರಣದ ಎಲ್ಲಾ ಅಂಶಗಳನ್ನು ತನಿಖೆ ಮಾಡಲಾಗುತ್ತಿದೆ" ಎಂದು ಅಧಿಕಾರಿ ತಿಳಿಸಿದ್ದಾರೆ. ಮೃತ ವ್ಯಕ್ತಿ ಮತ್ತು ಆರೋಪಿಗಳು ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

English summary
Man Beheads villager for 500 rs, went police station With Severed Head in Assam's Sonitpur. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X