ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಸ್ಸಾಂ: ಮರು ಚುನಾಯಿತ ಶಾಸಕರ ಆಸ್ತಿ ಸರಾಸರಿ ಶೇ.95ರಷ್ಟು ಹೆಚ್ಚಳ

|
Google Oneindia Kannada News

ಗುವಾಹಟಿ,ಫೆಬ್ರವರಿ 16: ಅಸ್ಸಾಂ ವಿಧಾನಸಭೆಗೆ ಮರು ಚುನಾಯಿತರಾಗಿರುವ ಶಾಸಕರ ಆಸ್ತಿ ಗಳಿಕೆ ಪ್ರಮಾಣ ಬರೋಬ್ಬರಿ ಶೇ.95ರಷ್ಟು ಹೆಚ್ಚಾಗಿದೆ.

ಅತಿ ಹೆಚ್ಚು ಆಸ್ತಿ ಗಳಿಕೆಯ ಪಟ್ಟಿಯಲ್ಲಿರುವ ಪ್ರಮುಖ ಐವರು ಶಾಸಕರಲ್ಲಿ ಅಸ್ಸಾಂ ಪ್ರವಾಸೋದ್ಯಮ ಸಚಿವ ಚಂದನ್ ಬ್ರಹ್ಮ ಮೊದಲ ಸ್ಥಾನದಲ್ಲಿದ್ದಾರೆ. ಬ್ರಹ್ಮ ಅವರ ಜತೆಗೆ ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ ಹಾಗೂ ಮಾಜಿ ಮುಖ್ಯಮಂತ್ರಿ ಪ್ರಫುಲ್ಲ ಕುಮಾರ್ ಮಹಾಂತ ಅವರ ಹೆಸರೂ ಕೇಳಿಬಂದಿದೆ.

2016ರ ಚುನಾವಣೆಯಲ್ಲಿ ಮರು ಆಯ್ಕೆಯಾಗಿರುವ 34 ಶಾಸಕರ ಆಸ್ತಿ ಗಳಿಕೆ ಕುರಿತು ಅಸ್ಸಾಂ ಎಲೆಕ್ಷನ್ ವಾಚ್ ವಿಶ್ಲೇಷಣೆ ಮಾಡಿದೆ. ಆ ಪ್ರಕಾರ 2016ರಲ್ಲಿ ಮರು ಆಯ್ಕೆಯಾಗಿರುವ ಶಾಸಕರ ಆಸ್ತಿ ಬೆಳವಣಿಗೆ 1.48 ಕೋಟಿ ರೂ ಆಗಿದ್ದು,ಇದು ಶೇ.95ರಷ್ಟು ಹೆಚ್ಚಳವಾಗಿದೆ.

Average Assets Of Re-elected Assam MLAs Increased By 95 Per Cent

2016ರ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರ್ಪಡೆಗೊಂಡ ಶರ್ಮಾ, 3 ಕೋಟಿಯಿಂದ 6ಕೋಟಿಗೆ ಆಸ್ತಿಯನ್ನು ಹೆಚ್ಚಿಸಿಕೊಂಡಿದ್ದಾರೆ. ಬ್ರಹ್ಮ ಅವರ ಆಸ್ತಿ 2011ರಲ್ಲಿ 2 ಕೋಟಿ ಇತ್ತು, 2016ರಲ್ಲಿ 9 ಕೋಟಿಗೆ ಏರಿದೆ.ಇದು ಶೇ.268ರಷ್ಟು ಹೆಚ್ಚಳವಾಗಿದೆ. ಅಜ್ಮಲ್ ಅವರದ್ದು 6 ಕೋಟಿ ರೂ.ನಿಂದ 13 ಕೋಟಿ ರೂ.ಗೆ ಏರಿಕೆಯಾಗಿದೆ.

ಬೊಡೊಲ್ಯಾಂಡ್ ಪೀಪಲ್ಸ್ ಫ್ರಂಟ್ ಪಕ್ಷದ ಚಂದನ್ ಬ್ರಹ್ಮ, ಆಸ್ತಿ ಗಳಿಕೆಯ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ನಂತರದಲ್ಲಿ ಎಐಯುಡಿಎಫ್‌ನ ಅಬ್ದುಲ್ ರಹೀಂ ಅಜ್ಮಲ್, ಕಾಂಗ್ರೆಸ್‌ನ ನಜ್ರುಲ್ ಇಸ್ಲಾಂ, ಬಿಜೆಪಿಯ ಶರ್ಮಾ ಮತ್ತು ಬಿಜೆಪಿ ಮಹಂತಾ ಅವರಿದ್ದಾರೆ.

English summary
Assam Tourism Minister Chandan Brahma registered the highest growth rate of assets while Health Minister Himanta Biswa Sarma and former chief minister Prafulla Kumar Mahanta also figure among the top five re- elected MLAs whose assets increased significantly, according to a report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X