'ಅಸ್ಸಾಂನ ವೀರಪ್ಪನ್' ತನ್ನದೇ ಗುಂಪಿನ ಸದಸ್ಯರ ಗುಂಡೇಟಿಗೆ ಬಲಿ
ಗುವಾಹಟಿ, ಜು.12: ಅಸ್ಸಾಂನ ದಕ್ಷಿಣ ಬೆಟ್ಟಗಳ ಕಾರ್ಬಿ ಆಂಗ್ಲಾಂಗ್ ಜಿಲ್ಲೆಗಳಲ್ಲಿ ತನ್ನ ಸ್ವಂತ ಕಾರ್ಯಕರ್ತರಿಂದ ಗುಂಡು ಹಾರಿಸಲ್ಪಟ್ಟ ಯುನೈಟೆಡ್ ಪೀಪಲ್ಸ್ ರೆವಲ್ಯೂಷನರಿ ಫ್ರಂಟ್ (ಯುಪಿಆರ್‌ಎಫ್)ನ ಸ್ವಯಂ ಘೋಷಿತ ಕಮಾಂಡರ್ ಶನಿವಾರ ಮಧ್ಯರಾತ್ರಿ ಮೃತಪಟ್ಟಿದ್ದಾನೆ.
ಪೊಲೀಸರ ಪ್ರಕಾರ, ಮರದ ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದಕ್ಕಾಗಿ ವೀರಪ್ಪನ್ ಎಂದೂ ಕರೆಯಲ್ಪಡುವ ಮಂಗಿನ್ ಖಲ್ಹೌ, ಈ ಗುಂಪಿನ ಏಕೈಕ ಹಿರಿಯ ಸದಸ್ಯನಾಗಿದ್ದನು. ಈ ಗುಂಪು ಹಲವಾರು ನಾಯಕರನ್ನು ಪೊಲೀಸ್‌ರೊಂದಿಗೆ ಮುಖಾಮುಖಿ ಸಂದರ್ಭ ಕಳೆದುಕೊಂಡಿದೆ ಮತ್ತು ಕಳೆದ ಒಂದು ವರ್ಷದಲ್ಲಿ ಹಲವಾರು ಮಂದಿ ಶರಣಾಗಿದ್ದಾರೆ. ಹೀಗಾಗಿ ಈಗ ಗುಂಪಿಗೆ ಯಾರೂ ನಾಯಕರಿಲ್ಲದಂತಾಗಿದೆ ಎಂದು ವರದಿಯಾಗಿದೆ.
ಭಾನುವಾರ, ಬೊಕಾಜನ್ ಪಟ್ಟಣದ ಹೊರವಲಯದಲ್ಲಿರುವ ಬೆಟ್ಟದ ಭೂಪ್ರದೇಶವಾದ ಖೆಂಗ್‌ಪಿಬುಂಗ್‌ನಲ್ಲಿ ಕಾರ್ಬಿ ಆಂಗ್ಲಾಂಗ್ ಜಿಲ್ಲಾ ಕೇಂದ್ರ ಕಚೇರಿ ದಿಫುವಿನಿಂದ 56 ಕಿ.ಮೀ ದೂರವಿರುವ ಕಾಡಿನಲ್ಲಿ ಗುಂಪಿನ ಸದಸ್ಯರ ನಡುವೆ ಯಾವುದೋ ವಿಚಾರದಲ್ಲಿ ಜಗಳ ನಡೆದಿದೆ ಎಂದು ಹೇಳಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, "ಮಂಗಿನ್ ಮೇಲೆ ಹಲವಾರು ಸುತ್ತಿನ ಗುಂಡುಗಳನ್ನು ಹಾರಿಸಿದ್ದಾರೆ. ಭಾನುವಾರ ಬೆಳಿಗ್ಗೆ ಪೊಲೀಸರು ಆತನ ಮೃತದೇಹ ವಶಕ್ಕೆ ಪಡೆದಿದ್ದಾರೆ. ಆತನನ್ನು ತನ್ನದೇ ಕಾರ್ಯಕರ್ತರು ಗುಂಡಿಕ್ಕಿ ಕೊಂದಿದ್ದಾರೆ ಎಂದು ಶಂಕಿಸಲಾಗಿದೆ," ಎಂದು ತಿಳಿಸಿದ್ದಾರೆ. ಶವವನ್ನು ಬೊಕಾಜನ್‌ನ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ ಎಂದು ವರದಿ ತಿಳಿಸಿದೆ.
ಯುಪಿಆರ್‌ಎಫ್ ಹೆಚ್ಚಾಗಿ ಅಸ್ಸಾಂನ ದಕ್ಷಿಣ ಬೆಟ್ಟಗಳಲ್ಲಿ ವಾಸಿಸುವ ಕುಕಿ ಸಮುದಾಯಕ್ಕೆ ಸೇರಿದ ಕಾರ್ಯಕರ್ತರನ್ನು ಒಳಗೊಂಡಿದೆ. ಕಳೆದ ದಶಕದಲ್ಲಿ ಸಿಂಗಾಸನ್ ಬೆಟ್ಟಗಳಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಮ್ಯಾನ್ಮಾರ್ ಮೂಲಕ ಚೀನಾದ ಯುನಾನ್ ಮೂಲದ ಆರ್ಡನೆನ್ಸ್ ಕಾರ್ಖಾನೆಯಿಂದ ಆಕ್ರಮಣಕಾರಿ ರೈಫಲ್‌ಗಳನ್ನು ಖರೀದಿಸಿದ್ದ ಕುಖ್ಯಾತಿಯನ್ನು ಈ ಗುಂಪು ಗಳಿಸಿದೆ.
ಆದರೆ ಕಳೆದ ಅಕ್ಟೋಬರ್‌ನಲ್ಲಿ ಸಿಂಘಾಸನ್ ಬೆಟ್ಟದಲ್ಲಿ ಪೋಲಿಸ್ ಎನ್‌ಕೌಂಟರ್‌ನಲ್ಲಿ ಅದರ ಕಮಾಂಡರ್ ಮಾರ್ಟಿನ್ ಗೈಟ್‌ನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಬಳಿಕ ತಂಡದ ಹಲವಾರು ಮಂದಿ ಶರಣಾಗಲು ಮುಂದೆ ಬಂದಿದ್ದಾರೆ.
ಅಂದಿನ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್‌ಗೆ ಬರೆದ ಪತ್ರದಲ್ಲಿ, ಈ ತಂಡವು "ಶಾಶ್ವತ ಶಾಂತಿ ಮತ್ತು ಸಾಮರಸ್ಯ" ದ ಬಗ್ಗೆ ತನ್ನ ಆಸಕ್ತಿಯನ್ನು ವ್ಯಕ್ತಪಡಿಸಿದೆ. ಎರಡು ತಿಂಗಳ ಕಾಲ "ಏಕಪಕ್ಷೀಯ ಕದನ ವಿರಾಮ" ಎಂದು ಘೋಷಿಸಿತ್ತು. ಅದರ 40-50 ಕಾರ್ಯಕರ್ತರ ಗುರುತಿನ ಪಟ್ಟಿಯನ್ನು ಸಹ ಹಂಚಿಕೊಂಡಿತ್ತು.
(ಒನ್‌ಇಂಡಿಯಾ ಸುದ್ದಿ)
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications