ಅಸ್ಸಾಂ ವೈದ್ಯೆಯಲ್ಲಿ ಏಕಕಾಲಕ್ಕೆ ಕೋವಿಡ್‌ನ ಆಲ್ಫಾ ಮತ್ತು ಡೆಲ್ಟಾ ರೂಪಾಂತರ ಪತ್ತೆ
ಗುವಾಹಟಿ, ಜು.20: ಅಸ್ಸಾಂನ ಮಹಿಳಾ ವೈದ್ಯೆಯೊಬ್ಬರು ಒಂದೇ ಸಮಯದಲ್ಲಿ ಕೋವಿಡ್‌ನ ಎರಡು ವಿಭಿನ್ನ ರೂಪಾಂತರಗಳಿಂದ ಸೋಂಕಿಗೆ ಒಳಗಾಗಿದ್ದಾರೆ. ಈ ರೀತಿ ಒಂದೇ ಸಮಯದಲ್ಲಿ ಎರಡು ಸೋಂಕಿಗೆ ಒಳಗಾಗುವ ಭಾರತದ ಮೊದಲ ರೋಗಿ ಈ ವೈದ್ಯೆಯಾಗಿರಬಹುದು ಎಂದು ಹೇಳಲಾಗಿದೆ. SARS-CoV-2 ನ ಆಲ್ಫಾ ಮತ್ತು ಡೆಲ್ಟಾ ಎರಡೂ ರೂಪಾಂತರಗಳಿಂದ ಮಹಿಳೆ ಸೋಂಕಿಗೆ ಒಳಗಾಗಿದ್ದಾಳೆ ಎಂದು ವರದಿಯಾಗಿದೆ.
ಈ ವರದಿಯನ್ನು ದೃಢಪಡಿಸಿದ ಡಾ. ಬಿಸ್ವಾಜ್ಯೋತಿ ಬೊರ್ಕಕೊಟಿ, "ಮಹಿಳೆ ವೈದ್ಯೆಯಲ್ಲಿ ಒಂದೇ ಸಮಯದಲ್ಲಿ ಎರಡು ವಿಭಿನ್ನ ರೂಪಾಂತರದ ಕೊರೊನಾವೈರಸ್ ಸೋಂಕು ಇರುವುದು ಪರೀಕ್ಷೆಯಿಂದ ಪತ್ತೆ ಹಚ್ಚಲಾಗಿದೆ. ಈ ಮಹಿಳೆ ವೈದ್ಯೆಗೆ ಎರಡೂ ಡೋಸ್ ಲಸಿಕೆಗಳನ್ನು ನೀಡಲಾಗಿತ್ತು," ಎಂದು ತಿಳಿಸಿದ್ದಾರೆ.
ಡಾ. ಬಿಸ್ವಾಜ್ಯೋತಿ ಬೊರ್ಕಕೊಟಿ ಅಸ್ಸಾಂನ ದಿಬ್ರುಗಢ ಜಿಲ್ಲೆಯ ಲಾಹೋವಾಲ್‌ನಲ್ಲಿರುವ ಐಸಿಎಂಆರ್ ಪ್ರಾದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ (ಆರ್‌ಎಂಆರ್‌ಸಿ) ನೋಡಲ್ ಅಧಿಕಾರಿಯಾಗಿದ್ದಾರೆ. ಇನ್ನು "ಮಹಿಳೆ ವೈದ್ಯೆಯ ಪತಿಯೂ ಕೂಡಾ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಪತಿಗೆ ಸೋಂಕು ದೃಢಪಟ್ಟ ಬಳಿಕ ಮಹಿಳೆಗೆ ಸೋಂಕು ಇರುವುದು ದೃಢಪಟ್ಟಿದೆ," ಎಂದು ಹಿರಿಯ ಅಧಿಕಾರಿ ಹೇಳಿದ್ದಾರೆ.

"ನಮ್ಮ ಪ್ರಯೋಗಾಲಯದಲ್ಲಿ ನಾವು ಮಹಿಳಾ ವೈದ್ಯೆಯ ಮಾದರಿಗಳನ್ನು ಪರೀಕ್ಷಿಸಿದಾಗ, ವೈದ್ಯೆಯ ದೇಹದಲ್ಲಿ ಒಂದೇ ಸಮಯದಲ್ಲಿ SARS-CoV-2 ನ ಆಲ್ಫಾ ಮತ್ತು ಡೆಲ್ಟಾ ರೂಪಾಂತರಗಳು ಇದೆ. ಈ ಎರಡೂ ರೂಪಾಂತರಗಳಿಂದ ವೈದ್ಯೆ ಸೋಂಕಿಗೆ ಒಳಗಾಗಿದ್ದಾರೆ ಎಂದು ತಿಳಿದು ಬಂದಿದೆ. ವೈದ್ಯೆಯ ಪತಿಗೆ ಆಲ್ಫಾ ರೂಪಾಂತರದಿಂದ ಸೋಂಕು ತಗುಲಿತ್ತು," ಎಂದು ತಿಳಿಸಿದರು.
"ಎರಡು ಸೋಂಕು ಇರುವ ಬಗ್ಗೆ ಮತ್ತೆ ಖಾತರಿಪಡಿಸುವ ನಿಟ್ಟಿನಲ್ಲಿ ಈ ಮಹಿಳೆ ವೈದ್ಯೆಯ ಮಾದರಿಗಳನ್ನು ಎರಡು ಬಾರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ. ಆದರೆ ಎರಡೂ ಪರೀಕ್ಷೆಯಲ್ಲೂ ವೈದ್ಯೆ ಒಂದೇ ಸಮಯದಲ್ಲಿ ಎರಡೂ ರೂಪಾಂತರಗಳ ಸೋಂಕಿಗೆ ಒಳಗಾಗಿರುವುದು ದೃಢಪಟ್ಟಿದೆ," ಎಂದು ನೋಡಲ್ ಅಧಿಕಾರಿ ಡಾ. ಬಿಸ್ವಾಜ್ಯೋತಿ ಬೊರ್ಕಕೊಟಿ ಮಾಹಿತಿ ನೀಡಿದ್ದಾರೆ.
"ವೈದ್ಯೆಗೆ ಹೆಚ್ಚು ರೋಗಲಕ್ಷಣಗಳು ಇಲ್ಲ. ಕೆಲವು ರೋಗ ಲಕ್ಷಣಗಳು ಮಾತ್ರ ಇದೆ. ಆದ್ದರಿಂದ ಆಸ್ಪತ್ರೆಗೆ ಸೇರಿಸುವ ಅಗತ್ಯವಿಲ್ಲ," ಎಂದು ವೈದ್ಯರು ಹೇಳಿದ್ದಾರೆ.
ಈ ಹಿಂದೆ ಬೆಲ್ಜಿಯಂನ 90 ವರ್ಷದ ಮಹಿಳೆ ಏಕಕಾಲದಲ್ಲಿ ಆಲ್ಫಾ ಮತ್ತು ಬೀಟಾ ಎಂಬ ಎರಡು ರೂಪಾಂತರಗಳಿಂದ ಸೋಂಕಿಗೆ ಒಳಗಾಗಿದ್ದಳು ಎಂದು ವರದಿಯಾಗಿದೆ. ಆಕೆಗೆ ಇನ್ನೂ ಲಸಿಕೆ ನೀಡಿರಲಿಲ್ಲ ಮತ್ತು ಮಾರ್ಚ್ 2021 ರಲ್ಲಿ ನಿಧನರಾದರು.
(ಒನ್‌ಇಂಡಿಯಾ ಸುದ್ದಿ)
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications