• search
  • Live TV
ಗುರ್ ಗಾಂವ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಫಿಯಾನ್ಸಿ ಜತೆ ಔಟಿಂಗ್‌ಗೆ ತೆರಳಿದ್ದಾಗ ಗುಂಡು ಹಾರಿಸಿ ಟೆಕ್ಕಿ ಹತ್ಯೆ

|
Google Oneindia Kannada News

ಗುರುಗ್ರಾಮ, ನವೆಂಬರ್ 07: ಫಿಯಾನ್ಸಿ ಜತೆ ಹೊರಗೆ ತೆರಳಿದ್ದ ಮಹಿಳಾ ಟೆಕ್ಕಿ ತಲೆಗೆ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ.

ಮದುವೆ ನಿಶ್ಚಯವಾಗಿದ್ದ ವರನೊಂದಿಗೆ ಕಾರಿನಲ್ಲಿ ತೆರಳುತ್ತಿದ್ದ, ಮತ್ತೊಂದು ಬೈಕಿನಲ್ಲಿ ಬಂದ ವ್ಯಕ್ತಿ ಟೆಕ್ಕಿಯ ತಲೆಗೆ ಗುಂಡು ಹಾರಿಸಿದ್ದು, ಸ್ಥಳದಲ್ಲೇ ಆಕೆ ಮೃತಪಟ್ಟಿದ್ದಾಳೆ.

ಗೆಳತಿಯ ಅಣ್ಣನನ್ನು ಕೊಲೆ ಮಾಡಿದ್ದ ಯೂಟ್ಯೂಬರ್ ಬಂಧನಗೆಳತಿಯ ಅಣ್ಣನನ್ನು ಕೊಲೆ ಮಾಡಿದ್ದ ಯೂಟ್ಯೂಬರ್ ಬಂಧನ

ನವೆಂಬರ್ 3 ರಂದು ರಾತ್ರಿ ಈ ಘಟನೆ ನಡೆದಿದೆ ಎಂಬುದು ತಿಳಿದುಬಂದಿದೆ. ಆಕೆ ಫಿಯಾನ್ಸಿ ಜತೆ ಕಾರಿನಲ್ಲಿ ಔಟಿಂಗ್‌ಗೆ ತೆರಳುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ.

ಗುರುಗ್ರಾಮದ ರೆಸ್ಟೋರೆಂಟ್ ಒಂದರಲ್ಲಿ ಊಟ ಮುಗಿಸಿ ಔಟಿಂಗ್ ಹೊರಟಿದ್ದರು. ಇಬ್ಬರ ಬಳಿ ದರೋಡೆ ಮಾಡಲು ಬಂದಿದ್ದ ವ್ಯಕ್ತಿ ಅಚಾನಕ್ ಆಗಿ ಫೈರಿಂಗ್ ಮಾಡಿದ್ದಾನೆ.

ಆಕೆ ಮೂಲತಃ ಛತ್ತೀಸ್‌ಗಢದವಳಾಗಿದ್ದು, ಗುರುಗ್ರಾಮದಲ್ಲಿರುವ ಮಲ್ಟಿನ್ಯಾಷನಲ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಮದುವೆಗೆ ನಿಶ್ಚಯವಾಗಿದ್ದ ವರ ಕೂಡ ಅಲ್ಲಿಯೇ ಕೆಲಸ ಮಾಡುತ್ತಿದ್ದ. ಬೈಕಿನಲ್ಲಿ ಬಂದಿದ್ದ ವ್ಯಕ್ತಿ ಯಾರೆಂಬುದರ ಕುರಿತು ತನಿಖೆ ನಡೆಯುತ್ತಿದೆ.

English summary
A 26-year-old woman in Gurgaon near Delhi died on Thursday after she was shot in the head allegedly by men on a motorcycle four days ago.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
Desktop Bottom Promotion