ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಟುಂಬವೊಂದರ ಮೇಲೆ ಹಲ್ಲೆ: ಪಾಕಿಸ್ತಾನಕ್ಕೆ ಹೋಗಿ ಎಂದು ಬೆದರಿಸಿದ ಗುಂಪು

|
Google Oneindia Kannada News

ಗುರ್ ಗಾಂವ್, ಮಾರ್ಚ್ 23: ಮನೆಯೊಂದಕ್ಕೆ ನುಗ್ಗಿದ ಗುಂಪೊಂದು ಕುಟುಂಬದ ಸದಸ್ಯರ ಮೇಲೆ ಹಾಕಿ ಸ್ಟಿಕ್ ಮತ್ತು ಕಬ್ಬಿಣದ ಸಲಾಕೆಗಳಿಂದ ಥಳಿಸಿ ಪಾಕಿಸ್ತಾನಕ್ಕೆ ಹೋಗುವಂತೆ ಬೆದರಿಕೆ ಒಡ್ಡಿದ ಘಟನೆ ಹರಿಯಾಣದ ಗುರ್ ಗಾಂವ್‌ನಲ್ಲಿ ನಡೆದಿದೆ.

ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ

ಗುರುವಾರ ಹೋಳಿ ಸಂದರ್ಭದಲ್ಲಿ ಕ್ರಿಕೆಟ್ ಪಂದ್ಯ ಆಡುವಾಗ ಈ ದಾಳಿ ಘಟನೆ ನಡೆದಿದೆ. ಪ್ರಕರಣ ಸಂಬಂಧ ಒಬ್ಬನನ್ನು ಬಂಧಿಸಲಾಗಿದೆ.

ಪಾಕಿಸ್ತಾನಿ ನಾಟಕ ನೋಡ್ತಾ ನಿರ್ಲಕ್ಷ್ಯ ಮಾಡಿದ್ದಕ್ಕೆ ಪತ್ನಿಯ ಹೆಬ್ಬೆರಳು ಮುರಿದ ಪತಿ ಪಾಕಿಸ್ತಾನಿ ನಾಟಕ ನೋಡ್ತಾ ನಿರ್ಲಕ್ಷ್ಯ ಮಾಡಿದ್ದಕ್ಕೆ ಪತ್ನಿಯ ಹೆಬ್ಬೆರಳು ಮುರಿದ ಪತಿ

ಗುಂಪೊಂದು ಕುಟುಂಬದ ಪುರುಷ ಸದಸ್ಯರ ಮೇಲೆ ಮನಬಂದಂತೆ ಕೋಲಿನಿಂದ ಹಲ್ಲೆ ನಡೆಸುವ ಮತ್ತು ಮಹಿಳೆಯರು ಜೋರಾಗಿ ಅಳುತ್ತಾ ಅವರನ್ನು ಬೇಡಿಕೊಳ್ಳುತ್ತಿರುವ ದೃಶ್ಯವಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

gurgaon family attacked by a mob asked to go to pakistan

ಮಹಿಳೆಯರು ಮತ್ತು ಮಕ್ಕಳ ಮೇಲೆಯೂ ದಾಳಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. 14-15 ಮಂದಿಯ ಕೂಡು ಕುಟುಂಬದಲ್ಲಿ ಐವರು ಮಕ್ಕಳು ಕೂಡ ಗಾಯಗೊಂಡಿದ್ದಾರೆ. ಎರಡು ವರ್ಷದ ಮಗುವಿಗೆ ಸಹ ಏಟುಗಳು ಬಿದ್ದಿವೆ.

ಕರ್ನಾಟಕದ ಯಾವ ಸಂಸದ ಎಷ್ಟು ವಿದ್ಯಾಭ್ಯಾಸ ಮಾಡಿದ್ದಾರೆ?

ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಕುಟುಂಬದ ಕೆಲವು ಸದಸ್ಯರು ಗುರುವಾರ ಸಂಜೆ 5 ಗಂಟೆ ಸುಮಾರಿಗೆ ಮನೆಯ ಮುಂದೆ ಕ್ರಿಕೆಟ್ ಆಡುತ್ತಿದ್ದರು. ಈ ವೇಳೆ ಅಲ್ಲಿಗೆ ಪಾನಮತ್ತರಾಗಿ ಬಂದ ಆರೇಳು ಜನರು ಬೀದಿಯಲ್ಲಿ ಕ್ರಿಕೆಟ್ ಆಡದಂತೆ ಸೂಚಿಸಿದರು. ಅದಕ್ಕೆ ಕಿವಿಗೊಡದ ಮಂದಿ ಕ್ರಿಕೆಟ್ ಆಡುವುದನ್ನು ಮುಂದುವರಿಸಿದರು. ಸ್ವಲ್ಪ ಹೊತ್ತಿನಲ್ಲಿಯೇ ಕೋಲು, ಹಾಕಿ ಸ್ಟಿಕ್, ಕಬ್ಬಿಣದ ಸಲಾಕೆ ಮತ್ತು ನೀರಿನ ಪೈಪ್‌ಗಳನ್ನು ಹಿಡಿದುಕೊಂಡು ಬಂದ ಇನ್ನಷ್ಟು ಮಂದಿ ಹಲ್ಲೆ ನಡೆಸಿದರು ಎನ್ನಲಾಗಿದೆ.

ಪುಣೆಯಲ್ಲಿ ಕಾಶ್ಮೀರಿ ಮೂಲದ ಪತ್ರಕರ್ತನ ಮೇಲೆ ಹಲ್ಲೆ ಪುಣೆಯಲ್ಲಿ ಕಾಶ್ಮೀರಿ ಮೂಲದ ಪತ್ರಕರ್ತನ ಮೇಲೆ ಹಲ್ಲೆ

'ಹೋಳಿ ದಿನದಂದು ಮಕ್ಕಳು ಕ್ರಿಕೆಟ್ ಆಡುತ್ತಿದ್ದರು. ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಏನು ಮಾಡುತ್ತಿದ್ದೀರಿ ಎಂದು ಕೇಳಿದರು. ಕ್ರಿಕೆಟ್ ಆಡುತ್ತಿದ್ದೇವೆ ಎಂದೆವು. ಅದರಲ್ಲಿ ಒಬ್ಬ 'ಪಾಕಿಸ್ತಾನಕ್ಕೆ ಹೋಗಿ ಆಡು' ಎಂದು ನಿಂದಿಸಿ ಕಪಾಳಕ್ಕೆ ಬಾರಿಸಿದ' ಎಂದು ಗಾಯಗೊಂಡಿರುವ ವ್ಯಕ್ತಿಯೊಬ್ಬರು ತಿಳಿಸಿದರು.

ಕೂಡಲೇ ಮಕ್ಕಳೆಲ್ಲರೂ ಮನೆಯೊಳಕ್ಕೆ ಓಡಿದರು. ಆದರೆ, ಒಂದಷ್ಟು ಮಂದಿ ಗುಂಪುಕಟ್ಟಿಕೊಂಡು ಬಂದು ಒಳಗೆ ನುಗ್ಗಿ ಥಳಿಸಿದರು. ಕಿಟಕಿ ಬಾಗಿಲುಗಳನ್ನು ಒಡೆದುಹಾಕಿದರು ಎಂದು ತಿಳಿಸಿದ್ದಾರೆ.

ಕರ್ನಾಟಕ ಸಂಸದರಿಗೆ ಅನುದಾನ ಸಿಕ್ಕಿದ್ದೆಷ್ಟು, ಅವರು ಕ್ಷೇತ್ರದಲ್ಲಿ ಖರ್ಚು ಮಾಡಿದ್ದೆಷ್ಟು, ಉಳಿಸಿಕೊಂಡಿದ್ದೆಷ್ಟು?

ಪೊಲೀಸ್ ಸಹಾಯವಾಣಿಗೆ ನಿರಂತರವಾಗಿ ಕರೆ ಮಾಡಿದರೂ ಯಾರೂ ಬರಲಿಲ್ಲ. ದಾಳಿ ನಡೆಸಿದವರು ಹೊರಟುಹೋದ ಬಳಿಕ 40 ನಿಮಿಷಗಳ ನಂತರ ಪೊಲೀಸರು ಬಂದರು ಎಂದು ಆರೋಪಿಸಿದ್ದಾರೆ.

English summary
A family in Gurgaon was attacked by a mob with hockey sticks and iron rods at their home. The mob asked family to go to Pakistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X