ಗುರ್ಗಾಂವ್: ಅನುಮಾನ ಹುಟ್ಟಿಸುವ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು

ಗುರ್ಗಾಂವ್, ಆಗಸ್ಟ್ 30: ಒಂದೇ ಕುಟುಂಬದ ನಾಲ್ವರು ನಿಗೂಢವಾಗಿ ಸಾವಿಗೀಡಾದ ಘಟನೆ ಗುರ್ಗಾಂವ್ ನಲ್ಲಿ ಬುಧವಾರ ನಡೆದಿದೆ.

ಗುರ್ಗಾಂವ್ ನಿಂದ ಸುಮಾರು 50 ಕಿಮೀ ದೂರದ ಪಟೌಡಿಯಯ ಬ್ರಿಜಾಪುರ ಎಂಬಲ್ಲಿ ಈ ಘಟನೆ ನಡೆದಿದೆ.

ಮನೆಯಿಂದ ಎಷ್ಟೋ ಸಮಯದಿಂದ ಯಾರೂ ಬರದಿರುವುದರಿಂದ ಅನುಮಾನಗೊಂಡ ನೆರೆಹೊರೆಯವರು ಪೊಲೀರಿಗೆ ಸುದ್ದಿ ಮುಟ್ಟಿಸಿದ್ದರು. ಮಹಿಳೆಯೊಬ್ಬರ ಮೃತದೇಹ ನೇಣುಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇನ್ನೋರ್ವ ವ್ಯಕ್ತಿ ಮತ್ತು ವೃದ್ಧೆಯ ದೇಹ ನೆಲದ ಮೇಲೆ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಓರ್ವ ಮಗು ಸಹ ನೆಲದ ಮೇಲೆ ಬಿದ್ದಿತ್ತಾದರೂ ಅದು ಬದುಕಿತ್ತು. ತಕ್ಷಣವೇ ಮಗುವನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಅದು ಚಿಕಿತ್ಸೆ ಫಲಕಾರಿಯಾಗದೆ ಮೃತವಾಗಿತ್ತು.

Gurgaon: 4 members of family found dead in mysterious circumstances

ಪತ್ನಿಯೇ ತನ್ನ ಪತಿ ಮತ್ತು ಅತ್ತೆ, ಮಗುವನ್ನು ಕೊಲೆ ಮಾಡಿ ನಂತರ ತಾನೂ ನೇಣಿಗೆ ಶರಣಾಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ.

ದೆಹಲಿಯ ಬುರಾರಿಯಲ್ಲಿ ಜುಲೈ ತಿಂಗಳಿನಲ್ಲಿ ನಡೆದ 11 ಜನರ ಸಾಮೂಹಿಕ ಆತ್ಮಹತ್ಯೆ ಪ್ರಕರಣವನ್ನು ಈ ಘಟನೆ ನೆನಪಿಸುವಂತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+