ಗದಗ : ಪೊಲೀಸ್ ಪೇದೆಗೆ ಥಳಿಸಿದ ಸಾರ್ವಜನಿಕರು

By: ಗದಗ ಪ್ರತಿನಿಧಿ
Subscribe to Oneindia Kannada

ಗದಗ, ನವೆಂಬರ್ 28 : ಪೊಲೀಸರು ಸಾರ್ವಜನಿಕರ ಮೇಲೆ ಕೈ ಮಾಡುವುದು ಮಾಮೂಲು, ಆದರೆ ಗದಗದಲ್ಲಿ ಸಾರ್ವನಿಕರೇ ಸೇರಿಕೊಂಡು ಪೊಲೀಸ್ ಪೇದೆಯೊಬ್ಬನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಗದಗ ಡಿಆರ್ ಪೇದೆ ಚಂದ್ರು ಲಮಾಣಿ ಪಾನಮತ್ತನನಾಗಿ ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಪೇದೆಯ ವರ್ತನೆಗೆ ರೋಸಿ ಹೋದ ಜನತೆ ಆತನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಘಟನೆ ನಾಲ್ಕು ದಿನದ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

public beats drunken police constable in Gadag

ಗದಗ ನಗರದ ಮುಳಗುಂದ ನಾಕಾದಲ್ಲಿ ಈ ಘಟನೆ ನಡೆದಿದೆ, ಸಾರ್ವಜನಿಕರು ಪೇದೆಗೆ ಥಳಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

   Gadag- Bhishma Lake get Boating Facility

   ವಿಡಿಯೋ ಈಗ ವೈರಲ್ ಆಗಿದ್ದರೂ ಈವರೆಗೂ ಪೊಲೀಸರು ಪೇದೆ ವಿರುದ್ಧ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Public beats drunken police constable Chandru Lamani in Gadag. pc Chandru misbehaved with public so public beaten him. police department not taken any actions against constable yet.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ