ಗದಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಿಂಗಾಯತ ವಿವಾದ: ಸಿದ್ದರಾಮಯ್ಯ ವಿರುದ್ಧ ಕೆಂಡಕಾರಿದ ಕಾಶಿ ಜಗದ್ಗುರು

|
Google Oneindia Kannada News

ಗದಗ, ಡಿಸೆಂಬರ್ 16: ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಶಿಫಾರಸು ಮಾಡುವುದಾಗಿ ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಾಶಿ ಜಗದ್ಗುರು ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಕೆಂಡಾಮಂಡಲವಾಗಿದ್ದಾರೆ.

ವಿಜಯಪುರದಲ್ಲಿ ಲಿಂಗಾಯತ ಸಮಾವೇಶ, 3 ನಿರ್ಣಯ ಮಂಡನೆವಿಜಯಪುರದಲ್ಲಿ ಲಿಂಗಾಯತ ಸಮಾವೇಶ, 3 ನಿರ್ಣಯ ಮಂಡನೆ

Recommended Video

ಉಡುಪಿ ಕೃಷ್ಣ ಮಠದ ಪೇಜಾವರ ಶ್ರೀಗಳು ಲಿಂಗಾಯತರ ಬಗ್ಗೆ ಹೇಳಿದ್ದೇನು? | Oneindia Kannada

ಗದಗನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕಾಶಿ ಜಗದ್ಗುರು, "ಸಿದ್ದರಾಮಯ್ಯ ಅವರ ಹೇಳಿಕೆ ನಮಗೆ ಆತಂಕ ಮೂಡಿಸಿದೆ. ಲಿಂಗಾಯತ ಧರ್ಮಕ್ಕೆ ಶಿಪಾರಸು ಮಾಡಿದ್ರೆ ಪರಿಣಾಮ ನೆಟ್ಟಗಿರಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಎಚ್ಚರಿಕೆ ನೀಡಿದರು.

Lingayat issue: Kashi Jagadguru Chandrashekhar Mahaswamiji angry on Siddaramaiah

ವೀರಶೈವ ಲಿಂಗಾಯತ ಒಂದೇ. ಲಿಂಗಾಯತ ಪ್ರತ್ಯೇಕ ಧರ್ಮದಲ್ಲಿ ಏಕಪಕ್ಷಿಯ ನಿರ್ಧಾರ ಸರಿಯಲ್ಲ. ಚುನಾವಣೆ ಮುಗಿದ ಬಳಿಕ ಶಾಂತ ಮನಸ್ಸಿನಿಂದ ಎಲ್ಲರೂ ಕುಳಿತುಕೊಂಡು ನಿರ್ಧರಿಸೋಣ. ಅವಸರದ ನಿರ್ಣಯ ಕೈಗೊಂಡು ಸಮಾಜ ಒಡೆದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ.

ಲಿಂಗಾಯತ ಧರ್ಮ ಎಂಬ ಒಂದು ಕೂಗು ಷಡ್ಯಂತರ. ಕೆಲ ಸಚಿವರು, ಮುಖ್ಯಮಂತ್ರಿಗಳೇ ಇದರ ರೂವಾರಿಗಳು. ಇದಕ್ಕೆ ಕೆಲ ಮಠಾಧೀಶರು, ಮುಖಂಡರು ಕುಮ್ಮಕು ನೀಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ನಿಮ್ಮ ಪಕ್ಷದಲ್ಲಿ ಬೆಂಕಿ ಹೊತ್ತಿಕೊಂಡಿದೆ. ನಿಮ್ಮ ತಲೆ ಮೇಲೆ ಬೆಂಕಿ ಇರಿಸಿಕೊಂಡು ಧರ್ಮವನ್ನು ಒಡೆಯಬೇಡಿ. ವೀರಶೈವ ಲಿಂಗಾಯತ ಎರಡು ಒಂದೇ ಎಂದು ಕೆಂಡಕಾರಿದರು.

English summary
Kashi Jagadguru Chandrashekhar Shivacharya Mahaswamiji angry on CM Siddaramaiah for Lingayat issue refer the matter to the State Minorities Commission. Lingayat religion issue refers to the commission, Siddaramaiah gave a statement on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X