ಸಿನಿಮಿಯಾ ಶೈಲಿನಲ್ಲಿ ಪೊಲೀಸ್ ವಾಹನಕ್ಕೆ ಅಡ್ಡಗಟ್ಟಿ ಆರೋಪಿಯನ್ನ ಎಸ್ಕೇಪ್ ಮಾಡಿದ ಗ್ಯಾಂಗ್!
ಗದಗ ಜೂನ್ 29: ಪೊಲೀಸರು ಆರೋಪಿಯನ್ನು ಕರೆದೊಯ್ಯುವ ವೇಳೆ ದುಷ್ಕರ್ಮಿಗಳು ಅಟ್ಯಾಕ್ ಮಾಡಿದ ಘಟನೆ ಗದಗದಲ್ಲಿ ನಡೆದಿದೆ. ಬೆಟಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಅಟ್ಯಾಕ್ ಮಾಡಿದ ಗ್ಯಾಂಗ್ ಆರೋಪಿಯನ್ನು ಕರೆದುಕೊಂಡು ಹೋಗಿದೆ.
ಹೌದು... ಗದಗದಲ್ಲಿ ಸಿನಿಮಿಯಾ ಶೈಲಿನಲ್ಲಿ ಗ್ಯಾಂಗ್ ಪೊಲೀಸರ ಮೇಲೆ ಅಟ್ಯಾಕ್ ಮಾಡಿದೆ. ಪೊಲೀಸರು ಅಮ್ಜಾದ್ ಅಲಿ ಇರಾನಿ ಎಂಬ ಆರೋಪಿಯನ್ನು ಕರೆದುಯ್ಯುತ್ತಿದ್ದಾಗ ದುಷ್ಕರ್ಮಿಗಳು ಗದಗ ರೈಲ್ವೆ ಬ್ರಿಡ್ಜ್ ಬಳಿ ವಾಹನ ಅಡ್ಡಗಟ್ಟಿ ದಾಳಿ ಮಾಡಿದ್ದಾರೆ. ಪೊಲೀಸರ ಮೇಲೆ ಹಲ್ಲೆ ಮಾಡಿ ಆರೋಪಿಯನ್ನು ಕರೆದುಕೊಂಡು ಹೋಗಿದ್ದಾರೆ.

392 ಕೇಸ್‌ನಲ್ಲಿ ಆರೋಪಿ ಅಮ್ಜದ್ ಅಲಿ ಗಂಗಾವತಿ ಶಹರ ಪೊಲೀಸರಿಗೆ ಬೇಕಿದ್ದನು. ಹೀಗಾಗಿ ಆತನನ್ನು ವಶಕ್ಕೆ ಪಡೆದು ಪೊಲೀಸರು ತೆರಳುತ್ತಿದ್ದಾಗ ಪೊಲೀಸ್ ವಾಹನಕ್ಕೆ ಅಡ್ಡಗಟ್ಟಿದ ದುಷ್ಕರ್ಮಿಗಳು ಆರೋಪಿಯನ್ನು ಕರೆದುಕೊಂಡು ಹೋಗಿದ್ದಾರೆ. ಪೊಲೀಸ್ ವಾಹನದ ಕಿಟಕಿ ಗಾಜುಗಳನ್ನು ಚೂರು ಚೂರು ಮಾಡಲಾಗಿದೆ. ಬಲವಂತವಾಗಿ ಬಾಗಿಲು ಓಪನ್ ಮಾಡಿ ಆರೋಪಿಯನ್ನು ಕರೆದೊಯ್ಯತ್ತಿದ್ದ ನಾಲ್ವರು ಪೊಲೀಸರ ಮೇಲೆ ಹಲ್ಲೆ ಮಾಡಲಾಗಿದೆ.
ಗಾಯಗೊಂಡ ಪೊಲೀಸರನ್ನು ಬೆಟಗೇರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಎಸ್.ಪಿ, ಬಿ.ಎಸ್ ನೇಮಗೌಡ, ಡಿವೈಎಸ್ಪಿ ಭೇಟಿ ನೀಡಿ ಗಾಯಾಳು ಪೊಲೀಸರ ಆರೋಗ್ಯ ವಿಚಾರಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಎಸ್ಪಿ ಬಿಎಸ್ ನೇಮಗೌಡ, ಪೊಲೀಸ್ ವಾಹನದ ಕಾರು ಗಾಜು ಒಡೆದು ಬಲವಂತವಾಗಿ ಆರೋಪಿಯನ್ನು ಕರೆದುಕೊಂಡು ಹೋಗಿದ್ದಾರೆ. ಆದರೆ ಈ ಗ್ಯಾಂಗ್ ಯಾರು? ಎಷ್ಟು ಜನ ಇದ್ದರು ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಆರೋಪಿ ಸಿಕ್ಕ ಬಳಿಕ ಪೊಲೀಸ್ ಠಾಣೆಗೆ ಕರೆದುಕೊಂಡು ಬರುವ ಮಾರ್ಗ ಮಧ್ಯದಲ್ಲಿ ಈ ಘಟನೆ ನಡೆದಿದೆ.
ಪೊಲೀಸರ ಮೇಲೆ ಹಲ್ಲೆ ಮಾಡಿದ್ದು ಮಾತ್ರ ಆರೋಪಿಗಳಿಗೆ ಕಾನೂನಿನ ಬಗ್ಗೆ ಭಯ ಇಲ್ಲ ಎಂದು ತೋರುತ್ತದೆ. ಪೊಲೀಸರ ಮೇಲೆ ಹಲ್ಲೆ ಮಾಡುವಷ್ಟು ಈ ಗ್ಯಾಂಗ್ ಬಲವಾಗಿದಿಯಾ ಎನ್ನುವ ಅನುಮಾನ ಹುಟ್ಟಿಕೊಂಡಿದೆ. ಈಗಾಗಲೇ ಈ ಬಗ್ಗೆ ತನಿಖೆ ಚುರುಕುಗೊಂಡಿದೆ. ದುಷ್ಕರ್ಮಿಗಳಿಗೆ ಕಾನೂನು ಬಗ್ಗೆ ನಾವು ಭಯ ಹುಟ್ಟಿಸುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.












Click it and Unblock the Notifications