• search
  • Live TV
ಗದಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜಮ್ಮುವಿನಲ್ಲಿ ಗದಗ ಮೂಲದ ಯೋಧ ಹುತಾತ್ಮ

|

ಗದಗ, ಡಿಸೆಂಬರ್ 26 : ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್‌ನಲ್ಲಿ ಗದಗ ಮೂಲದ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಸಕಲ ಸರ್ಕಾರಿ ಗೌರವದೊಂದಿಗೆ ಜಿಲ್ಲಾಡಳಿತ ಅಂತ್ಯಕ್ರಿಯೆ ನಡೆಸಿಕೊಟ್ಟಿದೆ.

ವೀರೇಶ ಕುರಹಟ್ಟಿ (40) ಹುತಾತ್ಮರಾದ ಯೋಧ. ವೀರೇಶ ಗದಗ ಜಿಲ್ಲೆಯ ಹೊಳೆಆಲೂರು ಸಮೀಪದ ಕರಮುಡಿ ಗ್ರಾಮದವರು. ಉತ್ತರ ಕಾಶ್ಮೀರದ ಉರಿ ಸೆಕ್ಟರ್‌ನ ಗಡಿ ಭಾಗದಲ್ಲಿ ವೀರೇಶ ಕಾರ್ಯ ನಿರ್ವಹಣೆ ಮಾಡುತ್ತಿದ್ದರು.

ಜಮ್ಮು ಕಾಶ್ಮೀರದಲ್ಲಿ ಹಿಮಪಾತ: ಓರ್ವ ಯೋಧ ಸಾವು, ಮೂವರು ನಾಪತ್ತೆ

ಡಿಸೆಂಬರ್ 25ರಂದು ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ವೀರೇಶ ಕುರಹಟ್ಟಿ ಹುತಾತ್ಮರಾದರು. ಗದಗ ಎಸ್ಪಿ ಯೋಧ ಹುತಾತ್ಮರಾಗಿರುವ ಕುರಿತು ಕುಟುಂಬಕ್ಕೆ ಮಾಹಿತಿ ನೀಡಿದರು.

ಕಾಶ್ಮೀರದಲ್ಲಿ ಅಪ್ರಚೋದಿತ ಗುಂಡಿನ ದಾಳಿ: ಬೆಳಗಾವಿ ಯೋಧ ಹುತಾತ್ಮ

ಹುತಾತ್ಮ ಯೋಧನ ಪಾರ್ಥೀವ ಶರೀರವನ್ನು ವಿಮಾನದಲ್ಲಿ ಬೆಳಗಾವಿಗೆ ತರಲಾಯಿತು. ಅಲ್ಲಿಂದ ರಸ್ತೆ ಮಾರ್ಗವಾಗಿ ಕುರಹಟ್ಟಿಗೆ ತಂದು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆಯನ್ನು ಜಿಲ್ಲಾಡಳಿತ ನಡೆಸಿತು.

ಹುಬ್ಬಳ್ಳಿ ಯೋಧ ಸತ್ತಿದ್ದು ಉಗ್ರರ ದಾಳಿಯಿಂದಲ್ಲ, ಆತ್ಮಹತ್ಯೆಯಿಂದ

ಡಿಸೆಂಬರ್ 25ರ ಮುಂಜಾನೆ ಪಾಕಿಸ್ತಾನದ ಸೈನಿಕರು ಭಾರತೀಯ ಯೋಧರನ್ನು ಗುರಿಯಾಗಿಸಿಕೊಂಡು ಅಪ್ರಚೋದಿತ ಗುಂಡಿನ ದಾಳಿ ನಡೆಸಿದರು. ಆಗ ಭಾರತೀಯ ಸೈನಿಕರು ಪ್ರತ್ಯುತ್ತರ ನೀಡಿದ್ದಾರೆ. ಈ ಗುಂಡಿನ ಚಕಮಕಿಯಲ್ಲಿ ವೀರೇಶ ಹುತಾತ್ಮರಾದರು.

ಭಾರತೀಯ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿಯನ್ನು ಪಾಕಿಸ್ತಾನ ನಡೆಸಿತ್ತು. ಕೆಲವು ಗಂಟೆಗಳ ಕಾಲ ನಡೆದ ಗುಂಡಿನ ಚಕಮಕಿ ಬಳಿಕ ಪಾಕಿಸ್ತಾನದ ಸೈನಿಕರನ್ನು ಹಿಮ್ಮೆಟ್ಟಿಸಲಾಯಿತು.

English summary
Karnataka's Gadag based soldier Veeresh Kurahatti (40) martyred in LoC in northern Kashmir's Uri sector.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X