ಗದಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಉಚಿತ ಬಸ್ ಪಾಸ್: ಶ್ರೀರಾಮುಲು ಆಫರ್

|
Google Oneindia Kannada News

ಗದಗ ಮಾರ್ಚ್ 13: ಚುನಾವಣೆ ಇನ್ನೂ ವರ್ಷ ಇರುವಾಗಲೇ ಬಿಜೆಪಿಯಿಂದ ಮಹಿಳೆಯರಿಗೆ ಬಿಗ್ ಆಫರ್ ನೀಡಲಾಗಿದೆ. 2023ರಲ್ಲಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡುತ್ತೇವೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದ್ದಾರೆ.

ಈ ಕುರಿತು ಗದಗದಲ್ಲಿ ಭಾನುವಾರ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿದ್ದಾರೆ.

ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ, ಒಂದು ವರ್ಷ ಬಾಕಿ ಇದೆ. ಈಗಾಗಲೇ ಎಲ್ಲ ಜನಪ್ರತಿನಿಧಿಗಳು ಮತದಾರರನ್ನು ಸೆಳೆಯಲು ಶುರುಮಾಡಿಕೊಂಡಿದ್ದಾರೆ. ಚುನಾವಣೆ ದೃಷ್ಟಿಯಲ್ಲೇ ಹಲವು ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಜನರ ಮನವೊಲಿಕೆಗೆ ಮುಂದಾಗುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್​, ಜೆಡಿಎಸ್ ಕೂಡ ಮತದಾರರ ಮನವೊಲಿಕೆಗೆ ಮುಂದಾಗಿದೆ. ಇತ್ತ ಆಡಳಿತ ಪಕ್ಷ ಬಿಜೆಪಿ ಸಹ ಮುಂದಿನ ಬಾರಿ ತಾವೇ ಅಧಿಕಾರಕ್ಕೆ ಬರಲು ಜನಪರ ಯೋಜನೆಗಳನ್ನು ಜಾರಿಗೆ ತರುತ್ತಿವೆ. ಜೊತೆಗೆ ರಾಜ್ಯದ ಜನರಿಗೆ ಹಲವು ಭರವಸೆಗಳನ್ನು ನೀಡುತ್ತಾರೆ. ಇದೀಗ ಸಾರಿಗೆ ಸಚಿವ ಶ್ರೀರಾಮುಲು ಸಹ ಮುಂದಿನ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಉಚಿತ ಬಸ್​ ಪಾಸ್ ನೀಡೋದಾಗಿ ಹೇಳಿದ್ದಾರೆ.

ಶ್ರೀರಾಮುಲು ಖಡಕ್ ಸೂಚನೆ; ಬಳ್ಳಾರಿ ವಿಮ್ಸ್‌ನಲ್ಲಿ ಸ್ವಚ್ಛತಾ ಕಾರ್ಯಶ್ರೀರಾಮುಲು ಖಡಕ್ ಸೂಚನೆ; ಬಳ್ಳಾರಿ ವಿಮ್ಸ್‌ನಲ್ಲಿ ಸ್ವಚ್ಛತಾ ಕಾರ್ಯ

ಬೆಂಗಳೂರಿನಲ್ಲಿ ಕೆಎಸ್​ಆರ್​ಟಿಸಿ ಯಾವುದೇ ಆಸ್ತಿ ಅಡಮಾನವಾಗಿ ಇಟ್ಟಿಲ್ಲ. ಬೆಂಗಳೂರು ಶಾಂತಿ ನಗರ ಕಾಂಪ್ಲೆಕ್ಸ್ ಮಾತ್ರ ಅಡಮಾನ‌ ಇಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

Free Bus Pass for Women: Sriramulu Offer

ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಹುಬ್ಬಳ್ಳಿ ಕಡೆ 16 ಎಕರೆ ಅಡಮಾನ ಇಡಲಾಗಿದೆ. ಕಲ್ಯಾಣ ಕರ್ನಾಟಕದಲ್ಲೂ ಕೆಲವು ಜಮೀನು ಅಡಮಾನ ಇಡಲಾಗಿದೆ. ಸಂಸ್ಥೆ ಜಾಗ ಅಡಮಾನ ಇಟ್ಟ ಹಣ ಸಿಬ್ಬಂದಿ ಭವಿಷ್ಯ ನಿಧಿಗೆ ನೀಡಲಾಗಿದೆ. ಕಡಿಮೆ ದರದಲ್ಲಿ ಬಡ್ಡಿ ಇದ್ದ ಕಾರಣ ಆಸ್ತಿ ಅಡಮಾನ ಇಡಲಾಗಿದೆ. ಇನ್ನೂ ಒಂದೂವರೆ ತಿಂಗಳ ಸಂಬಳ ಮಾತ್ರ ಬಾಕಿ ಇದೆ. ಒಂದು ವಾರದೊಳಗೆ ಆ ಬಾಕಿ ಸಂಬಳ ನೀಡಿದರೆ ಕ್ಲಿಯರ್ ಆಗುತ್ತೆ ಅಂತ ಸಚಿವರು ತಿಳಿಸಿದರು.

Free Bus Pass for Women: Sriramulu Offer

ಮುಂದಿನ ತಿಂಗಳಿಂದ ಸಿಬ್ಬಂದಿಗೆ ನಿಯಮಿತವಾಗಿ ಸಂಬಳ ನೀಡಲಾಗುತ್ತದೆ. ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ 3 ಸಾವಿರ ಕೋಟಿ ಇಲಾಖೆಗೆ ನೀಡಿದ್ದಾರೆ. ಇನ್ನು ಮುಂದೆ ಚಾಲಕರ, ನಿರ್ವಾಹಕರು ಹಾಗೂ ಸಿಬ್ಬಂದಿ ಸಂಬಳಕ್ಕೆ ಕಾಯಬೇಕಿಲ್ಲ. ಅಡಮಾನ ಇಟ್ಟಿದ್ದು ವೈಯಕ್ತಿಕ ಬಳಕೆಗೆ ಅಲ್ಲ. ಸಿಬ್ಬಂದಿ ಭವಿಷ್ಯದ ನಿಧಿಗಾಗಿ ಎಂದು ಸ್ಪಷ್ಟಪಡಿಸಿದ ರಾಮುಲು, ನಮ್ಮ ಇಲಾಖೆ ದಿವಾಳಿ ಆಗಿದೆ ಅಂತ ಹೇಳುತ್ತಾರಲ್ಲ. ಇದು ಲಾಭದಾಯಕ ಮಾಡುವ ಉದ್ದೇಶ ಅಲ್ಲ ಎಂದರು.

ಕಾಂಗ್ರೆಸ್ ಪಾರ್ಟ್‌ಟೈಂ ಪಕ್ಷವಾಗಿ ಉಳಿಯುತ್ತದೆ. ರಾಹುಲ್ ಗಾಂಧಿ ಪಾರ್ಟ್‌ಟೈಂ ನಾಯಕರಾಗುತ್ತಾರೆ. ಕಾಂಗ್ರೆಸ್ ವೈಟ್‌ವಾಶ್ ಮಾಡುವ ಕೆಲಸ ಮಾಡುತ್ತಿದೆ. ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮಾಡುತ್ತಿದೆ ಅಂತ ಶ್ರೀರಾಮುಲು ಅಭಿಪ್ರಾಯಪಟ್ಟರು.

ಇದೇ ವೇಳೆ ಕೆಲೂರ ಗ್ರಾಮದ ರೈತ ಮಹಿಳೆ ಆತ್ಮಹತ್ಶೆ ಪ್ರಕರಣ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಸಚಿವರು, ಅರಣ್ಶ ಜಮೀನಿನಲ್ಲಿ ಒಕ್ಕಲುತನ ಮಾಡುವವರನ್ನು ಒಕ್ಕಲೇಬ್ಬಿಸಬಾರದು. ಸುಮಾರು 20-30 ವರ್ಷಗಳಿಂದ ಒಕ್ಕಲುತನ ಮಾಡುತ್ತಿದ್ದರೇ, ಅಂತವರಿಗೆ ಸಾಗುವಳಿ ಚೀಟಿ ನೀಡಬೇಕೆಂದು ಸುರ್ಪಿಂ ಕೋರ್ಟ್​ ಸ್ಪಷ್ಟ ಸಂದೇಶ ನೀಡಿದೆ. ಮುಂದೆ ಈ ರೀತಿ ಘಟನೆಗಳು ಮರುಕಳಿಸಬಾರದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದೆನೆ. ನಿರ್ಮಲಾ ಕುಟುಂಬಕ್ಕೆ ಸರ್ಕಾರ ಈಗಾಗಲೇ ಪರಿಹಾರ ಧನ ನೀಡಿದೆ. ಪರಿಶಿಷ್ಟ ಪಂಗಡಗಳ ಇಲಾಖೆಯಿಂದ ರೈತ ಮಹಿಳೆಯ ಕುಟುಂಬಕ್ಕೆ ಎರಡು ಎಕರೆ ಜಮೀನು ಹಾಗೂ ಗಂಗಾ ಕಲ್ಶಾಣ ಯೋಜನೆಯಲ್ಲಿ ಒಂದು ಬೊರ್ ವೆಲ್ ಕೊಡಿಸುತ್ತೇವೆ. ಸರ್ಕಾರದಿಂದ ಏನು ಪರಿಹಾರ ಬೇಕು ಅದನ್ನು ಕೊಡಿಸುವ ಪ್ರಯತ್ನ ಮಾಡುತ್ತೇನೆ ಎಂದರು.

Recommended Video

ಫಾಫ್ ಡುಪ್ಲೆಸಿಸ್ ನಾಯಕತ್ವದಲ್ಲಿ RCB ಹಣೆಬರಹ ಏನಾಗ್ಬೋದು? | Oneindia Kannada

English summary
BJP has offered Big Offer by giving free bus pass to women. Looking at this, it seems like the BJP is already thinking of coming to power again in the state. "If BJP comes to power again, we will give women free bus passes," Transport Minister Sriramulu said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X