ಗದಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಟಗೇರಿಯಲ್ಲಿ ಕಾರ್ಮಿಕ ವರ್ಗಕ್ಕೆ ಭರವಸೆ ನೀಡಿದ ಎಚ್ಕೆ ಪಾಟೀಲ್

|
Google Oneindia Kannada News

ಗದಗ ಏಪ್ರಿಲ್ 21: ರಾಜ್ಯದ ನೇಕಾರರು ಅನುಭವಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆಯನ್ನು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾದ ಹೆಚ್ ಕೆ ಪಾಟೀಲ್ ನೀಡಿದರು.

ಬೆಟಗೇರಿಯಲ್ಲಿ ನಡೆದ ನೇಕಾರ ಕಾರ್ಮಿಕರ ಸಂಘದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ದೇಶದ ಬಡಜನತೆಯ ಅಭಿವೃದ್ದಿಗೆ ಕಾಂಗ್ರೆಸ್ ಪಕ್ಷ ಅಮೂಲ್ಯ ಕೊಡುಗೆಯನ್ನು ನೀಡಿದೆ. ಸಮಾಜದ ಸರ್ವಾಂಗೀಣ ಅಭಿವೃದ್ದಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅದನ್ನು ಅನುಷ್ಠಾನಗೊಳಿಸಿದ ಖ್ಯಾತಿ ಕಾಂಗ್ರೆಸ್ ಪಕ್ಷದ್ದು.

ಬಿಜೆಪಿ ಚುನಾವಣಾ ಜಾಹಿರಾತಿನಲ್ಲಿ ರಾಷ್ಟ್ರಧ್ವಜ ಬಳಕೆ: ಕಾಂಗ್ರೆಸ್ ಅರೋಪಬಿಜೆಪಿ ಚುನಾವಣಾ ಜಾಹಿರಾತಿನಲ್ಲಿ ರಾಷ್ಟ್ರಧ್ವಜ ಬಳಕೆ: ಕಾಂಗ್ರೆಸ್ ಅರೋಪ

ಕೆ ಹೆಚ್ ಪಾಟೀಲರು ನೇಕಾರರ ಅಭಿವೃದ್ದಿಗೆ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ. ಅವರ ಸಂಧರ್ಭದಲ್ಲಿ ಅಸಂಘಟಿತ ನೇಕಾರರ ಕಲ್ಯಾಣಕ್ಕಾಗಿ ಅನೇಕ ಅಭಿವೃದ್ದಿ ಕಾರ್ಯಕ್ರಮಗಳನ್ನು ಕೈಗೊಂಡಿದ್ದರು. ಅಸಂಘಟಿತ ನೇಕಾರರ ಕಲ್ಯಾಣ ಅವರ ಪ್ರಮುಖ ಗುರಿಯಾಗಿದ್ದನ್ನು ನೆನೆಪಿಸಿಕೊಂಡರು.

Elections 2019 : HK Patil campaigns for D R Patil woos Weavers community

ಅಸಂಘಟಿತ ನೇಕಾರರು ಈಗಲೂ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಈ ಬಗ್ಗೆ ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

'ಮೊಟ್ಟ ಮೊದಲ ಬಾರಿಗೆ ರೈತರನ್ನು ಋಣಮುಕ್ತರನ್ನಾಗಿಸಿದ್ದು ಕಾಂಗ್ರೆಸ್' 'ಮೊಟ್ಟ ಮೊದಲ ಬಾರಿಗೆ ರೈತರನ್ನು ಋಣಮುಕ್ತರನ್ನಾಗಿಸಿದ್ದು ಕಾಂಗ್ರೆಸ್'

ದೇಶದ ಭವಿಷ್ಯವನ್ನು ನಿರ್ಧರಿಸುವ ಪ್ರಮುಖ ಚುನಾವಣೆ ನಮ್ಮ ಮುಂದಿದೆ. ಈ ಚುನಾವಣೆಯಲ್ಲಿ ದೇಶದ ಹಿತಕ್ಕೆ ಕೊಡುಗೆಗಳನ್ನು ನೀಡಿರುವ ಪಕ್ಷವಾದ ಕಾಂಗ್ರೆಸ್ ಕೈಬಲಪಡಿಸಬೇಕಾಗಿದೆ ಎಂದರು. ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಿ ಆರ್ ಪಾಟೀಲ್ ಅವರನ್ನು ಆಯ್ಕೆ ಮಾಡುವ ಮೂಲಕ ಕಾಂಗ್ರೆಸ್ ಕೈ ಬಲಪಡಿಸುವಂತೆ ಮನವಿ ಮಾಡಿದರು.

English summary
Elections 2019 : KPCC Campaign Committee chief HK Patil woos weavers community in Betagere town by giving many assurances. He was campaigning for Haveri candidate D.R Patil
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X