ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬುರ್ಜ್ ಖಲೀಫಾದಲ್ಲಿ ಭಾರತದ ತ್ರಿವರ್ಣ ಧ್ವಜ; ಕೊರೊನಾ ವಿರುದ್ಧದ ಹೋರಾಟಕ್ಕೆ ಬೆಂಬಲ ಪ್ರದರ್ಶಿಸಿದ ಯುಎಇ

|
Google Oneindia Kannada News

ದುಬೈ, ಏಪ್ರಿಲ್ 26: ಭಾರತದಲ್ಲಿ ಕೊರೊನಾ ಸೋಂಕು ಆತಂಕಕಾರಿ ಮಟ್ಟದಲ್ಲಿ ಏರಿಕೆಯಾಗುತ್ತಿದ್ದು, ಭಿನ್ನ ರೀತಿಯಲ್ಲಿ ಭಾರತಕ್ಕೆ ಯುನೈಟೆಡ್ ಅರಬ್ ಎಮಿರೇಟ್ಸ್ ಸ್ಥೈರ್ಯ ತುಂಬಿದೆ. ದೇಶದಲ್ಲಿನ ಪ್ರಮುಖ ಕಟ್ಟಡಗಳ ಮೇಲೆ ಭಾರತ ಧ್ವಜದ ತ್ರಿವರ್ಣವನ್ನು ವಿದ್ಯುತ್ ದೀಪಗಳಿಂದ ಪ್ರತಿಬಿಂಬಿಸುವ ಮೂಲಕ ಕೊರೊನಾ ವಿರುದ್ಧದ ಹೋರಾಟದೊಂದಿಗೆ ಒಗ್ಗಟ್ಟು ಪ್ರದರ್ಶಿಸಿದೆ.

ದುಬೈನಲ್ಲಿನ ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಹಾಗೂ ಅಬುದಾಬಿಯ ಅಡನಾಕ್ ಹೆಡ್‌ಕ್ವಾಟರ್ಸ್ ಕಟ್ಟಡದಲ್ಲಿ ಭಾರತದ ಧ್ವಜದ ತ್ರಿವರ್ಣವನ್ನು ವಿದ್ಯುತ್ ದೀಪಗಳಿಂದ ಮೂಡಿಸಿದ್ದು, "ಸ್ಟೇ ಸ್ಟ್ರಾಂಗ್ ಇಂಡಿಯಾ" ಎಂಬ ಸಂದೇಶವನ್ನು ಭಾನುವಾರ ರಾತ್ರಿ ಬಿತ್ತರಿಸಲಾಗಿದೆ.

UAE Buildings Illuminated With Tricolour In Support Amid Covid Surge

ಭಾರತ ಕೊರೊನಾ ವಿರುದ್ಧ ಹೋರಾಡುತ್ತಿದೆ. ಭಾರತದೊಂದಿಗೆ ಸ್ನೇಹ ಸೌಹಾರ್ದಯುತ ರಾಷ್ಟ್ರವಾಗಿರುವ ಯುಎಇ ಭಾರತಕ್ಕೆ ಹಾರೈಸುತ್ತಿದೆ. ಭಾರತಕ್ಕೆ ನಮ್ಮ ಬೆಂಬಲವನ್ನು ವ್ಯಕ್ತಪಡಿಸಲು ಬುರ್ಜ್ ಖಲೀಫಾದಲ್ಲಿ ಭಾರತ ಧ್ವಜದ ತ್ರಿವರ್ಣವನ್ನು ಬೆಳಕಿನ ಮೂಲಕ ಮೂಡಿಸಲಾಗಿದೆ ಎಂದು ಯುಎಇ ಭಾರತೀಯ ರಾಯಭಾರ ಕಚೇರಿ ಟ್ವಿಟ್ಟರ್‌ನಲ್ಲಿ ವಿಡಿಯೋದೊಂದಿಗೆ ಮಾಹಿತಿ ಹಂಚಿಕೊಂಡಿದೆ.

ವಿಡಿಯೋ : ಬುರ್ಜ್ ಖಲೀಫಾದಲ್ಲಿ ಭಾರತದ ತ್ರಿವರ್ಣ ಧ್ವಜವಿಡಿಯೋ : ಬುರ್ಜ್ ಖಲೀಫಾದಲ್ಲಿ ಭಾರತದ ತ್ರಿವರ್ಣ ಧ್ವಜ

ಇಂಥ ಕಷ್ಟದ ಸಮಯದಲ್ಲಿ ಯುಎಇ ತನ್ನ ಬೆಂಬಲ ವ್ಯಕ್ತಪಡಿಸಿರುವುದನ್ನು ಭಾರತ ಪ್ರಶಂಸಿಸುತ್ತದೆ ಎಂದು ಯುಎಇಯಲ್ಲಿನ ಭಾರತೀಯ ರಾಯಭಾರಿ ಪವನ್ ಕಪೂರ್ ಅವರು ಟ್ವೀಟ್ ಮಾಡಿದ್ದಾರೆ.

ಭಾರತದಲ್ಲಿ ಭಾನುವಾರ 3.49 ಲಕ್ಷ ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. 2,767 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ದೇಶದಲ್ಲಿ ವೈದ್ಯಕೀಯ ಆಮ್ಲಜನಕ ಹಾಗೂ ಆಸ್ಪತ್ರೆಯ ಅಭಾವವೂ ಬಿಕ್ಕಟ್ಟನ್ನು ಸೃಷ್ಟಿಸಿದೆ. ಹಲವು ದೇಶಗಳು ಭಾರತಕ್ಕೆ ಬೆಂಬಲ ನೀಡುವುದಾಗಿ ಘೋಷಿಸಿವೆ.

English summary
Amid a surge in coronavirus cases in India, landmark buildings in the United Arab Emirates (UAE) illuminated with the Tricolour to show solidarity with the country as it tries to tackle the pandemic
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X