Get Updates
Get notified of breaking news, exclusive insights, and must-see stories!

ಹಜ್ ಯಾತ್ರೆ: 60 ಸಾವಿರ ಯಾತ್ರಿಕರಿಗೆ ಮಾತ್ರ ಅವಕಾಶ

ದುಬೈ, ಜೂನ್ 12: ಕೊರೊನಾ ಸೋಂಕಿನಿಂದಾಗಿ ಈ ಬಾರಿ ಹಜ್ ಯಾತ್ರೆಗೆ ಕೇವಲ 60 ಸಾವಿರ ಮಂದಿಗೆ ಮಾತ್ರ ಅವಕಾಶ ಕಲ್ಪಿಸಿ ಸೌದಿ ಅರೇಬಿಯಾ ಸರ್ಕಾರ ಆದೇಶ ಹೊರಡಿಸಿದೆ.

ಕೋವಿಡ್ ಸಾಂಕ್ರಾಮಿಕದ ಕಾರಣದಿಂದಾಗಿ ಈ ಬಾರಿ ಹಜ್ ಯಾತ್ರಿಕರ ಸಂಖ್ಯೆಯನ್ನು 60 ಸಾವಿರಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ.

ಅವರೆಲ್ಲರೂ ರಾಜ್ಯದ ಒಳಗಿನವರು ಆಗಿರುತ್ತಾರೆ ಎಂದು ಸೌದಿ ಅರೇಬಿಯಾ ಹೇಳಿದೆ. ಸೌದಿ ಅರೇಬಿಯಾ ಕಿಂಗ್ ಡಮ್ ಶನಿವಾರ ಈ ಪ್ರಕಟಣೆ ಹೊರಡಿಸಿರುವುದಾಗಿ ಅದರ ಸರ್ಕಾರಿ ಮಾಧ್ಯಮ ಏಜೆನ್ಸಿಯೊಂದು ತಿಳಿಸಿದೆ.

Saudi Arabia Says Hajj To Be Limited to 60,000 In Kingdom

ಹಜ್ ಸಚಿವಾಲಯ ಮತ್ತು ಉಮ್ರಾ ಈ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ಉಲ್ಲೇಖಿಸಲಾಗಿದೆ. ಕಳೆದ ವರ್ಷ ಹಜ್ ಯಾತ್ರೆಗಾಗಿ ಆಯ್ಕೆಯಾಗಿರುವ 1 ಸಾವಿರ ಜನರು ಈಗಾಗಲೇ ಸೌದಿ ಅರೇಬಿಯಾ ಸುತ್ತಮುತ್ತ ಇದ್ದಾರೆ.

160 ವಿವಿಧ ರಾಷ್ಟ್ರಗಳ ಮೂರನೇ ಎರಡರಷ್ಟು ವಿದೇಶಿ ನಿವಾಸಿಗಳು ಸಾಮಾನ್ಯವಾಗಿ ಹಜ್ ಪ್ರತಿನಿಧಿಸುತ್ತಿದ್ದಾರೆ. ಮೂರನೇ ಒಂದನೇ ರಷ್ಟು ಸೌದಿ ಅರೇಬಿಯಾದ ಭದ್ರತಾ ಸಿಬ್ಬಂದಿ ಮತ್ತು ವೈದ್ಯಕೀಯ ಸಿಬ್ಬಂದಿ ಇರಲಿದ್ದಾರೆ. ಜುಲೈ ಮಧ್ಯ ಭಾಗದಿಂದ ಹಜ್ ಆರಂಭವಾಗಲಿದೆ.

ಕೋವಿಡ್ ಹಿನ್ನೆಲೆಯಲ್ಲಿ ಕಳೆದ ವರ್ಷ ಸೌದಿ ಅರೇಬಿಯಾದಲ್ಲಿ ಇರುವ ಸೀಮಿತ ಜನರು ಮಾತ್ರ ಹಜ್ ಕರ್ಮದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು. ಈ ವರ್ಷ ಸೌದಿ ಅರೇಬಿಯಾದಲ್ಲಿ ಕೋವಿಡ್ ನಿಯಂತ್ರಣಕ್ಕೆ ಬಂದರೂ, ಹಜ್ ಯಾತ್ರೆಯ ಬಗ್ಗೆ ಸರ್ಕಾರ ಯಾವುದೇ ಅಧಿಕೃತ ನಿರ್ಧಾರ ಪ್ರಕಟಿಸಿರಲಿಲ್ಲ.

ಪ್ರತಿ ವರ್ಷ ಎರಡು ಮಿಲಿಯನ್​ಗಿಂತಲೂ ಹೆಚ್ಚು ಮುಸ್ಲಿಮರು ಸೌದಿ ಅರೇಬಿಯಾದ ಪವಿತ್ರ ನಗರ ಮಕ್ಕಾದಲ್ಲಿ ಹಜ್​ ಕರ್ಮದಲ್ಲಿ ಪಾಲ್ಗೊಳ್ಳುತ್ತಾರೆ. ಭಾರತ ಸೇರಿದಂತೆ ಜಗತ್ತಿನ ಬಹುತೇಕ ರಾಷ್ಟ್ರಗಳ ಜನರು ಹಜ್​​ ಯಾತ್ರೆ ತೆರಳುತ್ತಾರೆ. 2019 ರಲ್ಲಿ 2 ಲಕ್ಷ ಭಾರತೀಯರು ಹಜ್​ ಯಾತ್ರೆ ಕೈಗೊಂಡಿದ್ದರು.

ಇತ್ತೀಚೆಗಷ್ಟೇ ಈ ಕುರಿತು ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಮಾತನಾಡಿದ್ದರು, ಕೋವಿಡ್​ -19 ಗೆ ಸಂಬಂಧಪಟ್ಟಂತೆ ವಾರ್ಷಿಕ ಹಜ್ ಯಾತ್ರೆಗಾಗಿ ಸೌದಿ ಅರೇಬಿಯಾ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಗಳಿಗೆ ಭಾರತ ಬದ್ಧವಾಗಿರುವುದಾಗಿಯೂ ಅವರು ಹೇಳಿದ್ದರು.

ಹಜ್ ಯಾತ್ರೆ ಸೌದಿ ಅರೇಬಿಯಾ ಸರ್ಕಾರದ ನಿರ್ಧಾರವನ್ನು ಅವಲಂಬಿಸಿರುತ್ತದೆ. ಭಾರತ ತನ್ನ ನಿರ್ಧಾರದಲ್ಲಿ ಸೌದಿ ಸರ್ಕಾರದ ಪರವಾಗಿ ನಿಲ್ಲುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕಳೆದ ವರ್ಷ ಹಜ್ ರದ್ದಾಯಿತು, ಈ ವರ್ಷ ಇನ್ನೂ ಏನನ್ನೂ ನಿರ್ಧರಿಸಲಾಗಿಲ್ಲ" ಎಂದು ನಖ್ವಿ ಹೇಳಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+