ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುಬೈನಲ್ಲಿ ಉದ್ಘಾಟನೆಯಾಯ್ತು ವಿಶ್ವದ ಅತೀ ಎತ್ತರದ ಹೋಟೆಲ್

By Sachhidananda Acharya
|
Google Oneindia Kannada News

ದುಬೈ, ಫೆಬ್ರವರಿ 12: ಇಲ್ಲಿನ ಗಗನಚುಂಬಿ ಕಟ್ಟಡಗಳ ಸಾಲಿಗೆ ಹೊಸ ಮುಕುಟವೊಂದು ಸೇರ್ಪಡೆಯಾಗಿದೆ. ಅದೇ ವಿಶ್ವದ ಅತೀ ಎತ್ತರದ ಹೋಟೇಲ್.

ಬುರ್ಜ್ ಖಲಿಫಾದಂಥ ವಿಶ್ವದ ಅತ್ಯಂತ ಎತ್ತರದ ಕಟ್ಟಡ ಕಟ್ಟಿದ ಅರಬ್ಬಿಗರು ಇದೀಗ ವಿಶ್ವದ ಅತೀ ಎತ್ತರದ ಹೊಟೇಲ್ ಕಟ್ಟಿ ಪ್ರವಾಸಿಗರನ್ನು ಸೆಳೆಯಲು ಹೊರಟಿದ್ದಾರೆ. ಇದರ ಹೆಸರು ಗೆವೋರಾ. ಈ ಹೋಟೆಲ್ ನಿಂದ ದುಬೈನ ಆಕರ್ಷಣೆಗೆ ಮತ್ತೊಂದು ಗರಿ ಸಿಕ್ಕಂತಾಗಿದೆ.

 75 ಮಹಡಿಗಳ ಹೋಟೆಲ್

75 ಮಹಡಿಗಳ ಹೋಟೆಲ್

ಈ ಹೋಟೆಲ್ ನಲ್ಲಿ 75 ಮಹಡಿಗಳಿವೆ. ಈ ಗಗನಚುಂಬಿ ಹೋಟೆಲ್ ಬರೋಬ್ಬರಿ 356 ಮೀಟರ್ ಎತ್ತರವಿದೆ. ದುಬೈ ಇಂಟರ್ನ್ಯಾಷನಲ್ ಫೈನಾನ್ಸ್ ಸೆಂಟರ್ ಪಕ್ಕದಲ್ಲಿ ಈ ಹೋಟೆಲ್ ತಲೆಎತ್ತಿದೆ.

ಗಲ್ಫ್ ಮೆಟ್ರೊಪೊಲೀಸ್ ದುಬೈ ನಿರ್ಮಾಣ

ಗಲ್ಫ್ ಮೆಟ್ರೊಪೊಲೀಸ್ ದುಬೈ ನಿರ್ಮಾಣ

ಈ ಅದ್ಭುತ ಹೋಟೆಲ್ ನ್ನು ಗಲ್ಫ್ ಮೆಟ್ರೊಪೊಲೀಸ್ ದುಬೈ ನಿರ್ಮಾಣ ಮಾಡಿದೆ. ಜತೆಗೆ ಭಾನುವಾರ ವಿಶ್ವದ ಅತೀ ಎತ್ತರದ ಹೋಟೆಲ್ ಗೆ ಚಾಲನೆ ನೀಡುತ್ತಿರುವುದಾಗಿ ಅದು ಘೋಷಣೆ ಮಾಡಿದೆ.

ಜೆಡಬ್ಲ್ಯೂ ಮ್ಯಾರಿಯಟ್ ಗಿಂತ ಎತ್ತರ

ಜೆಡಬ್ಲ್ಯೂ ಮ್ಯಾರಿಯಟ್ ಗಿಂತ ಎತ್ತರ

ಈವರೆಗಿನ ವಿಶ್ವದ ಅತ್ಯಂತ ಎತ್ತರದ ಹೋಟೆಲ್ ದುಬೈನಲ್ಲೇ ಇತ್ತು. ಇದರ ಹೆಸರು ಜೆಡಬ್ಲ್ಯೂ ಮ್ಯಾರಿಯಟ್ ಮಾರ್ಕಸ್. ಇದು 355 ಮೀಟರ್ ಎತ್ತರವಿತ್ತು. ಇದೀಗ ನಿರ್ಮಾಣವಾಗಿರುವ ಗೆವೋರಾ ಹೋಟೆಲ್ ಗೂ ಇದರಿಂದ ಕೇವಲ 1 ಮೀಟರ್ ಅಷ್ಟೇ ಹೆಚ್ಚಿನ ಎತ್ತರವಿದ್ದು ಜೆಡಬ್ಲ್ಯೂ ಮ್ಯಾರಿಯಟ್ ನ್ನು ಹಿಂದಿಕ್ಕಿದೆ.

ಸೋಮವಾರದಿಂದ ಸಾರ್ವಜನಿಕರಿಗೆ ಪ್ರವೇಶ

ಸೋಮವಾರದಿಂದ ಸಾರ್ವಜನಿಕರಿಗೆ ಪ್ರವೇಶ

ಸೋಮವಾರದಿಂದ ಅಂದರೆ ಇಂದಿನಿಂದ ಅತಿಥಿಗಳಿಗೆ ಹೊಟೇಲ್ ಬಾಗಿಲು ತೆರೆದಿದೆ. ಆದರೆ ಇಲ್ಲಿ ಉಳಿದುಕೊಳ್ಳಲು ಪ್ರವಾಸಿಗರು ಸಾವಿರಾರು ಡಾಲರ್ ಪಾವತಿ ಮಾಡಬೇಕಾಗಿದೆ.

ಪ್ರವಾಸಿಗರ ನಿರೀಕ್ಷೆಯಲ್ಲಿ ದುಬೈ

ಪ್ರವಾಸಿಗರ ನಿರೀಕ್ಷೆಯಲ್ಲಿ ದುಬೈ

ಯುನೈಟೆಡ್ ಅರಬ್ ಎಮಿರೇಟ್ಸ್ 2020ರ ಹೊತ್ತಿಗೆ ವಾರ್ಷಿಕ 2 ಕೋಟಿ ಪ್ರವಾಸಿಗರ ನಿರೀಕ್ಷೆಯಲ್ಲಿದೆ. ಅದೇ ವರ್ಷ ಯುಎಇ ಗ್ಲೋಬಲ್ ಟ್ರೇಡ್ ಫೇರ್ ಎಕ್ಸ್ ಪೋ 2020 ಆಯೋಜಿಸಲಿದೆ. ಈ ಎಕ್ಸ್ ಪೋ ಹಿನ್ನಲೆಯಲ್ಲಿ 2 ಕೋಟಿ ಜನರ ಆಗಮನದ ನಿರೀಕ್ಷೆಯನ್ನು ಅರಬ್ ದೊರೆಗಳು ಇಟ್ಟುಕೊಂಡಿದ್ದಾರೆ.

English summary
The world's next tallest hotel opened in Dubai on Monday, February 12. Located near the Dubai International Financial Centre, the Gevora Hotel has been built by Majid Al Attar. Dubai's JW Marriott Marquis currently wears the crown of worlds' tallest hotel. Gevora Hotel consists of 75 floors and measures 356 metres.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X