• search
  • Live TV
ದುಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೊದಲ ಬಾರಿಗೆ ಇಬ್ಬರು ಭಾರತೀಯ ಉದ್ಯಮಿಗಳಿಗೆ 10 ವರ್ಷದ UAE ವೀಸಾ

|
Google Oneindia Kannada News

ದುಬೈ, ಮೇ 22: ಭಾರತೀಯ ಉದ್ಯಮಿಗಳಾದ ವಸು ಶ್ರಾಫ್ ಹಾಗೂ ಖುಷಿ ಖಟ್ವಾನಿ ಅವರಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ ನಿಂದ ಹತ್ತು ವರ್ಷಗಳ ವೀಸಾ ನೀಡಲಾಗಿದೆ. ಗಲ್ಫ್ ರಾಷ್ಟ್ರದ ದೀರ್ಘಾವಧಿ ವೀಸಾ ಯೋಜನೆಯು ಹೂಡಿಕೆದಾರರನ್ನು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸೆಳೆಯುವ ಸಲುವಾಗಿಯೇ ತರಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಭಾರತೀಯ ಉದ್ಯಮಿಗಳ ಪೈಕಿ ಹತ್ತು ವರ್ಷಗಳ ವೀಸಾ ಪಡೆದ ಮೊದಲಿಗರು ಇವರು. ರೀಗಲ್ ಗ್ರೂಪ್ ಆಫ್ ಕಂಪೆನಿಯ ಅಧ್ಯಕ್ಷ ವಸು ಶ್ರಾಫ್, ಖುಷಿ ಗ್ರೂಪ್ ಆಫ್ ಕಂಪೆನೀಸ್ ಹಾಗೂ ಅಲ್ ನಿಸರ್ ಸಿನಿಮಾ ಫಿಲ್ಮ್ ನ ಕಾರ್ಯನಿರ್ವಾಹಕ ನಿರ್ದೇಶಕ ಖುಷಿ ಖಟ್ವಾನಿ ಅವರಿಗೆ ಹತ್ತು ವರ್ಷದ ವೀಸಾ ದೊರೆತಿದೆ.

ಹತ್ತು ವರ್ಷದ ಈ ವೀಸಾ ಯೋಜನೆ ಜನವರಿಯಲ್ಲೇ ಜಾರಿಗೆ ಬಂದಿದ್ದು, ಅರಬ್ ನ ಕೆಲ ವಿಜ್ಞಾನಿಗಳು, ವೈದ್ಯಕೀಯ ಕ್ಷೇತ್ರದ ತಜ್ಞರಿಗೆ ವಿತರಿಸಲಾಗಿದೆ. ಭೇಟಿ ಮಾಡುವಂತೆ ಅಧಿಕಾರಿಯೊಬ್ಬರಿಂದ ಕರೆ ಬಂತು. ತೆರಳಿದ ಐದು ನಿಮಿಷದೊಳಗೆ ಹತ್ತು ವರ್ಷದ ವೀಸಾ ನೀಡಿದರು ಎಂದು ಶ್ರಾಫ್ ಹೇಳಿರುವುದಾಗಿ ಮಾಧ್ಯಮಗಳಲ್ಲಿ ವರದಿ ಆಗಿದೆ. ಖಟ್ವಾನಿ ಕೂಡ ತಮಗೆ ಹತ್ತು ವರ್ಷದ ವೀಸಾ ದೊರೆತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ಅಪಾರ ಪ್ರತಿಭೆಯ ವೈದ್ಯರು, ಎಂಜಿನಿಯರ್ ಗಳು, ವಿಜ್ಞಾನಿಗಳು, ವಿದ್ಯಾರ್ಥಿಗಳು ಹಾಗೂ ಕಲಾವಿದರನ್ನು ಸೆಳೆಯುವ ಸಲುವಾಗಿ 'ಗೋಲ್ಡನ್ ಕಾರ್ಡ್' ಯೋಜನೆ ತಂದಿದೆ. ಅದರ ಅಡಿಯಲ್ಲಿ ಶಾಶ್ವತವಾದ ಪೌರತ್ವ ನೀಡುವ ಯೋಜನೆಯನ್ನು ಕಳೆದ ಮಂಗಳವಾರ ಪರಿಚಯಿಸಲಾಗಿದೆ.

English summary
Interestingly, this is the first time two Indian business men got 10 year long visa for UAE. Here is the complete details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X