ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎನ್ಎಂಸಿ ಹೆಲ್ತ್ ಸ್ಥಾಪಕ ಎನ್ನಾರೈ ಉದ್ಯಮಿ ಬಿ. ಆರ್ ಶೆಟ್ಟಿ ರಾಜೀನಾಮೆ

|
Google Oneindia Kannada News

ದುಬೈ, ಫೆಬ್ರವರಿ 18: ಅನಿವಾಸಿ ಭಾರತೀಯ ಉದ್ಯಮಿ ಬಿ. ರಘುರಾಮ್ ಶೆಟ್ಟಿ ಅವರು ತಾವೇ ಸ್ಥಾಪಿಸಿದ ಸಂಸ್ಥೆಯಿಂದ ಹೊರನಡೆದಿದ್ದಾರೆ. ಎನ್ ಎಂ ಸಿ ಹೆಲ್ತ್ ಸಂಸ್ಥೆಯ ಬೋರ್ಡ್ ಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಇತ್ತೀಚೆಗೆ ಎನ್ಎಂಸಿ ಬೋರ್ಡ್ ನಿಂದ ಹನಿ ಬುತ್ತಿಖಿ, ಅಬ್ದುರ್ ರೆಹ್ಮಾನ್ ಬಸದ್ದಿಕ್ ಸೇರಿದಂತೆ ನಾಲ್ವರು ರಾಜೀನಾಮೆ ಸಲ್ಲಿಸಿದ್ದಾರೆ. ಸಂಸ್ಥೆಯ ಷೇರುಗಳ ಗಾತ್ರ, ಮೌಲ್ಯದ ಬಗ್ಗೆ ತಪ್ಪು ಮಾಹಿತಿ ನೀಡಿದ ಕಾರಣಕ್ಕೆ ಶೆಟ್ಟಿ ಅವರನ್ನು ತಮ್ಮ ಸ್ಥಾನದಿಂದ ಕೆಳಗಿಳಿಯುವಂತೆ ಬೋರ್ಡ್ ಸದಸ್ಯರು ಆಗ್ರಹಿಸಿದ್ದರು.

ಉದ್ಯಮಿ ಬಿಆರ್ ಶೆಟ್ಟಿ ಮಗನ ಮದುವೇಲಿ ಸಿಎಂ, ಸಚಿವರು ಹಾಜರ್ಉದ್ಯಮಿ ಬಿಆರ್ ಶೆಟ್ಟಿ ಮಗನ ಮದುವೇಲಿ ಸಿಎಂ, ಸಚಿವರು ಹಾಜರ್

ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ದ ಬಿಆರ್ ಎಸ್ ಇಂಟರ್ ನ್ಯಾಷನಲ್ ಹೋಲ್ಡಿಂಗ್ ನಿಂದ ಅಬುಧಾಬಿ ಬ್ಯಾಂಕ್ ಹಾಗೂ ಆಲ್ ಸಲಾಂ ಬ್ಯಾಂಕ್, ಬಹರೇನ್ ಸುಮಾರು 20 ಮಿಲಿಯನ್ ಷೇರುಗಳನ್ನು ಪಡೆದುಕೊಂಡಿದ್ದು, 8 ಮಿಲಿಯನ್ ಷೇರುಗಳನ್ನು ಮಾರಾಟ ಮಾಡಿವೆ.

BR Shetty resigns from ailing NMC Health

ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಅತಿದೊಡ್ಡ ಮೆಡಿಕಲ್ ಜಾಲ ಹೊಂದಿರುವ ಎನ್ಎಂಸಿ, 2012ರಲ್ಲಿ ಲಂಡನ್ ಷೇರುಪೇಟೆಯಲ್ಲಿ ಲಿಸ್ಟಿಂಗ್ ಪಡೆದ ಮೊದಲ ಅಬುಧಾಬಿ ಕಂಪನಿ ಎನಿಸಿಕೊಂಡಿತ್ತು.

ಕನ್ನಡಿಗ ಬಿಆರ್ ಶೆಟ್ಟಿ ತೆಕ್ಕೆಗೆ ಟ್ರಾವೆಲ್ ಎಕ್ಸ್ಕನ್ನಡಿಗ ಬಿಆರ್ ಶೆಟ್ಟಿ ತೆಕ್ಕೆಗೆ ಟ್ರಾವೆಲ್ ಎಕ್ಸ್

77 ವರ್ಷ ವಯಸ್ಸಿನ ಶೆಟ್ಟಿ ಅವರು 1970ರಲ್ಲಿ ಎನ್ಎಂಸಿ ಸ್ಥಾಪಿಸಿದ್ದು, ಶೆಟ್ಟಿ ಅವರ ಪತ್ನಿ, ಅಳಿಯ ಕೂಡಾ ಸಂಸ್ಥೆಯಲ್ಲಿ ಷೇರು ಹೊಂದಿದ್ದಾರೆ. ಮಾರ್ಕ್ ಟಾಂಪ್ಕಿಣ್ಸ್ ಸಂಸ್ಥೆಯ ಏಕೈಕ ಚೇರ್ಮನ್ ಆಗಿ ಉಳಿದಿದ್ದಾರೆ.

English summary
NMC Health founder Bavaguthu Raghuram Shetty resigned. NMC has lost four board members.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X