ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವರ್ಲ್ಡ್ ರೆಕಾರ್ಡ್ಸ್ ಆಫ್ ಇಂಡಿಯಾದಲ್ಲಿ ದಾಖಲಾದ 200 ವಿದ್ಯಾರ್ಥಿಗಳ ಗಿಟಾರ್ ಸಂಗೀತ ಸುಧೆ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಧಾರವಾಡ, ನವೆಂಬರ್‌22 : ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಜನತಾ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷರು, ಡಾ.ಡಿ. ವೀರೇಂದ್ರ ಹೆಗ್ಗಡೆ ಅವರ 75ನೇ ಹುಟ್ಟುಹಬ್ಬದ ಪ್ರಯುಕ್ತ ಏಕಕಾಲದಲ್ಲಿ ಗಿಟಾರ್ ಸಂಗೀತ ಸುಧೆಯ ಮೂಲಕ ಶುಭಾಶಯ ಕೋರಲಾಯಿತು. ಈ ಕಾರ್ಯಕ್ರಮ ಈಗ ವರ್ಲ್ಡ್ ರೆಕಾರ್ಡ್ಸ್ ಆಫ್ ಇಂಡಿಯಾದಲ್ಲಿ ದಾಖಲಾಗಿದೆ.

ಧಾರವಾಡದ ವಿದ್ಯಾಗಿರಿಯ ಜೆಎಸ್‌ಎಸ್‌ ಸೆಂಟ್ರಲ್ ಶಾಲೆಯ 200 ವಿದ್ಯಾರ್ಥಿಗಳು ಏಕಕಾಲದಲ್ಲಿ ಗಿಟಾರ್ ನುಡಿಸಿ, ಸಂಗೀತ ಸುಧೆಯಲ್ಲಿ ಡಾ.ಡಿ. ವೀರೆಂದ್ರ ಹೆಗ್ಗಡೆ ಅವರಿಗೆ ಹುಟ್ಟುಹಬ್ಬದ ಶುಭಾಶಯವನ್ನು ಕೋರಿದ್ದರು. ಈ ಸಂಗೀತ ಸುಧೆ ಕಾರ್ಯಕ್ರಮವನ್ನು ವೀರೇಂದ್ರ ಹೆಗ್ಗಡೆ ಅವರು ಸಹ ನೇರ ಪ್ರಸಾರದ ಮೂಲಕ ವೀಕ್ಷಿಸಿದ್ದರು. ಇದೀಗ ಈ ಸಂಗೀತ ಸುಧೆಯ ಕಾರ್ಯಕ್ರಮವು ವರ್ಲ್ಡ್ ರೆಕಾರ್ಡ್ಸ್ ಆಫ್ ಇಂಡಿಯಾದದಲ್ಲಿ ದಾಖಲಾಗಿದೆ.

ವರ್ಲ್ಡ್ ರೆಕಾರ್ಡ್ಸ್ ಆಫ್ ಇಂಡಿಯಾದದಲ್ಲಿ ದಾಖಲಾದ ಪ್ರಮಾಣ ಪತ್ರವನ್ನು ಜೆಎಎಸ್‌ಎಸ್‌ ಬಯಲು ನಾಟ್ಯಗೃಹ ಸಭಾಂಗಣದಲ್ಲಿ ಜೆಎಎಸ್‌ಎಸ್‌ ಕಾರ್ಯದರ್ಶಿ ಡಾ.ಅಜಿತ ಪ್ರಸಾದ್ ಸ್ವೀಕರಿಸಿದರು. ಡಾ.ಡಿ. ವೀರೇಂದ್ರ ಹೆಗ್ಗಡೆ ಅವರ ಹುಟ್ಟುಹಬ್ಬದ ಪ್ರಯುಕ್ತ ಜೆಎಸ್‌ಎಸ್‌ನ ವಿವಿಧ ಶಿಕ್ಷಣ ಸಂಸ್ಥೆಗಳು ವರ್ಷಪೂರ್ತಿ 75 ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ ಎನ್ನುವುದು ವಿಶೇಷ ಸಂಗತಿ.

Vidyagiri JSS Central School Student Guitar Sangeetha Sudha Register In World Records Of India

ಈ ಬಗ್ಗೆ ಮಾತನಾಡಿರುವ ಡಾ.ಅಜಿತ ಪ್ರಸಾದ್ "ಧರ್ಮಸ್ಥಳದ ಧರ್ಮಾಧಿಕಾರಿ ಪಟ್ಟವನ್ನು ಏರಿ ಪರಂಪರಾಗತ ಇತಿಹಾಸವನ್ನು ಅಗರ್ಭ ಪರಿಪಾಲಕರಾಗಿಸಿದವರು ವೀರೇಂದ್ರ ಹೆಗ್ಗಡೆ ಅವರು. ಕೇವಲ ಧರ್ಮ ಶಿಕ್ಷಣ, ದಾನ-ಧರ್ಮವೊಂದೇ ಜನರ ಕಲ್ಯಾಣವಲ್ಲ ಎಂಬುದನ್ನು ಅರಿತು, ನಾಡಿನ ಸುಭಿಕ್ಷೆಗೆ ಅಷ್ಟ ದಿಕ್ಕುಗಳಲ್ಲೂ ಪರಿವರ್ತನೆ ಬಯಸಿ ಆಧುನಿಕ ಆಡಳಿತ ಪದ್ಧತಿಗೆ ಹೆಗ್ಗುರುತಾದವರು ಡಾ. ಡಿ. ವೀರೇಂದ್ರ ಹೆಗ್ಗಡೆಯವರು. ಗ್ರಾಮ ಸುಭಿಕ್ಷೆಗೆ ಗ್ರಾಮಾಭಿವೃದ್ಧಿ ಯೋಜನೆ, ಶಿಕ್ಷಣ ಕ್ರಾಂತಿಗೆ ಶಿಕ್ಷಣ ಸಂಸ್ಥೆಗಳು, ಸೇವಾ ಕಾರ್ಯಕ್ಕಾಗಿ ಚತುರ್ಧಾನ, ಸಾಂಸ್ಕೃತಿಕ, ಸಾಮಾಜಿಕ ಸ್ವರಗಳ ಸರ್ವಧರ್ಮ ಸಾಹಿತ್ಯ ಸಮ್ಮೇಳನ, ಅಶಕ್ತರ ಸಬಲೀಕರಣಕ್ಕಾಗಿ ಸ್ವ ಉದ್ಯೋಗ, ಧರ್ಮ ಶಿಕ್ಷಣಕ್ಕಾಗಿ ಆಲಯಗಳ ಜೀರ್ಣೋದ್ದಾರ ಸೇರಿದಂತೆ ಸಹಸ್ರಾರು ಯೋಜನೆಗಳ ಹರಿಕಾರರಾಗಿ ಪರಮೋಚ್ಚ ಸ್ಥಾನವನ್ನು ಅರ್ಥ ಪೂರ್ಣವಾಗಿ ಮುನ್ನಡೆಸಿದವರು ಖಾವಂದರು" ಎಂದು ಹೇಳಿದ್ದಾರೆ.

Vidyagiri JSS Central School Student Guitar Sangeetha Sudha Register In World Records Of India

ಈ ಸಂದರ್ಭದಲ್ಲಿ ಶಾಲೆಯ ಪ್ರಚಾರ್ಯರಾದ ಸಾಧನಾ ಎಸ್, ಮಹಾವೀರ ಉಪಾಧ್ಯೆ, ಡಾ. ಸೂರಜ್ ಜೈನ್, ರಾಯಲ್ ಇಂಟರ್‌ ನ್ಯಾಶನಲ್ ಸ್ಕೂಲ್ ಆಪ್ ಮ್ಯೂಸಿಕ್‌ನ ವಿಶಾಲ ಹಾಗೂ ಮೋಹಿತ್ ಸೇರಿದಂತೆ ಜೆಎಸ್‌ಎಸ್‌ ಸಂಸ್ಥೆಯ ಹಿತೈಷಿಗಳು ಹಾಗೂ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರ ಹಾಗೂ ಸಂಗೀತ ಅಭಿಮಾನಿಗಳು ಭಾಗವಹಿಸಿದ್ದರು.

English summary
Vidyagiri JSS Central School student guitar sangeetha sudha register in World Records of India. on the occasion of Dr.D Veerendra heggade birthday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X