Get Updates
Get notified of breaking news, exclusive insights, and must-see stories!

ಬೆಂಗಳೂರು-ಧಾರವಾಡ ನಡುವೆ ವಂದೇ ಭಾರತ್ ರೈಲು ಸಂಚಾರ

ಧಾರವಾಡ ಸೆಪ್ಟೆಂಬರ್ 29: ಭಾರತೀಯ ರೈಲ್ವೆ 2024ರ ಹೊತ್ತಿಗೆ ಒಟ್ಟು 102 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲು ತೀರ್ಮಾನಿಸಿದೆ. ಬೆಂಗಳೂರು-ಧಾರವಾಡ ನಡುವೆ ಸಹ ಈ ರೈಲು ಸಂಚಾರ ನಡೆಸಲು ಮಾಡಿದ ಮನವಿಗೆ ಇಲಾಖೆ ಸ್ಪಂದಿಸಿದೆ.

ಧಾರವಾಡದ ಬಿಜೆಪಿ ಸಂಸದ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ರೈಲ್ವೆ ಸಚಿವರಾದ ಅಶ್ವಿನ್ ವೈಷ್ಣವ್ ಭೇಟಿ ಮಾಡಿದ್ದಾರೆ. ಬೆಂಗಳೂರು-ಧಾರವಾಡ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಓಡಿಸುವ ಕುರಿತು ಮನವಿ ಸಲ್ಲಿಸಿದ್ದಾರೆ.

ಮೊದಲ ದೇಶಿಯ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚಾರ ಆರಂಭಿಸಿ ಒಂದು ವರ್ಷ ಕಳೆದಿದೆ. ಶೇ 100ರಷ್ಟು ದೇಶಿಯವಾಗಿ ನಿರ್ಮಾಣ ಮಾಡಲಾದ ರೈಲು ಇದಾಗಿದೆ. ಪ್ರಧಾನಿ ನರೇಂದ್ರ ಮೋದಿ ಕನಸಿನ ಆತ್ಮ ನಿರ್ಭರ ಭಾರತ ಪರಿಕಲ್ಪನೆ ಗಮನದಲ್ಲಿಟ್ಟುಕೊಂಡು ರೈಲು ತಯಾರಿಸಲಾಗಿದೆ.

ಸದ್ಯ ದೇಶದ ಅತಿ ವೇಗದ ರೈಲು ಇದಾಗಿದೆ. ಬೆಂಗಳೂರು-ಧಾರವಾಡ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭವಾದರೆ ರಾಜಧಾನಿಯಿಂದ ಉತ್ತರ ಕರ್ನಾಟಕವನ್ನು ಕೆಲವೇ ಗಂಟೆಗಳಲ್ಲಿ ತಲುಪಬಹುದಾಗಿದೆ. ರೈಲು ಸಂಚಾರ ಯಾವಾಗ ಆರಂಭವಾಗಲಿದೆ? ಎಂಬುದು ಇನ್ನೂ ಅಂತಿಮವಾಗಿಲ್ಲ.

ಹಲವು ಜಿಲ್ಲೆಗಳಿಗೆ ಅನುಕೂಲ

ಹಲವು ಜಿಲ್ಲೆಗಳಿಗೆ ಅನುಕೂಲ

ಬೆಂಗಳೂರು-ಧಾರವಾಡ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭವಾದರೆ ಹಲವು ಜಲ್ಲೆಗಳಿಗೆ ಅನುಕೂಳವಾಗಲಿದೆ. ಬೆಂಗಳೂರಿನಿಂದ ಹೊರಡುವ ರೈಲು ತುಮಕೂರು, ದಾವಣಗೆರೆ, ಹಾವೇರಿ ಮಾರ್ಗವಾಗಿ ಸಂಚಾರ ನಡೆಸಲಿದೆ.

ಹುಬ್ಬಳ್ಳಿ-ಧಾರವಾಡದಲ್ಲಿ ನೈಋತ್ಯ ರೈಲ್ವೆ ವಲಯ ಕಚೇರಿ ಇದೆ. ಮೆಡಿಕಲ್ ಕಾಲೇಜು, ಐಐಟಿ ಸೇರಿದಂತೆ ಶೈಕ್ಷಣಿಕ, ವಾಣಿಜ್ಯೋದ್ಯಮಕ್ಕೆ ಅವಳಿ ನಗರ ಪ್ರಸಿದ್ಧಿಯಾಗಿದೆ. ರೈಲು ಸಂಚಾರ ಆರಂಭವಾದರೆ ಸಹಾಯಕವಾಗಲಿದೆ ಎಂದು ಪ್ರಹ್ಲಾದ್ ಜೋಶಿ ವಿವರಣೆ ನೀಡಿದ್ದಾರೆ.

58 ರೈಲುಗಳ ನಿರ್ಮಾಣಕ್ಕೆ ಟೆಂಡರ್

58 ರೈಲುಗಳ ನಿರ್ಮಾಣಕ್ಕೆ ಟೆಂಡರ್

ಈಗಾಗಲೇ ಭಾರತೀಯ ರೈಲ್ವೆ 58 ವಂದೇ ಭಾರತ್ ಎಕ್ಸ್​ಪ್ರೆಸ್ ರೈಲುಗಳ ನಿರ್ಮಾಣಕ್ಕೆ ಟೆಂಡರ್ ಕರೆದಿದೆ. 2022ರ ಆಗಸ್ಟ್ 23ರೊಳಗೆ ಇನ್ನೂ 75 ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸುವ ಗುರಿಯನ್ನು ಇಲಾಖೆ ಹೊಂದಿದೆ. 2024ರ ಹೊತ್ತಿಗೆ 102 ವಂದೇ ಭಾರತ್ ಎಕ್ಸ್​ಪ್ರೆಸ್​ ರೈಲು ಸಂಚಾರ ನಡೆಸಬೇಕು ಎಂಬುದು ಗುರಿಯಾಗಿದೆ.

ಆಗಸ್ಟ್ 15ರಂದು ದೆಹಲಿಯ ಕೆಂಪುಕೋಟೆ ಮೇಲೆ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ 75 ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸುವುದಾಗಿ ಘೋಷಣೆ ಮಾಡಿದ್ದರು. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾದ ಹಿನ್ನಲೆಯಲ್ಲಿ 75 ರೈಲುಗಳನ್ನು ಘೋಷಣೆ ಮಾಡಲಾಗಿತ್ತು.

ದೇಶದಲ್ಲೇ ರೈಲು ತಯಾರಿಕೆ

ದೇಶದಲ್ಲೇ ರೈಲು ತಯಾರಿಕೆ

ವಂದೇ ಭಾರತ್ ರೈಲುಗಳನ್ನು ದೇಶದಲ್ಲಿಯೇ ತಯಾರು ಮಾಡಲಾಗುತ್ತದೆ. ಚೆನ್ನೈನಲ್ಲಿರುವ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ, ಚೆನ್ನೈನ ಮಾಡರ್ನ್ ಕೋಚ್ ಫ್ಯಾಕ್ಟರಿ, ರಾಯ್​ಬರೇಲಿ ಮತ್ತು ಕಪುರ್ತಲಾದ ರೈಲು ಕೋಚ್ ಫ್ಯಾಕ್ಟರಿಗಳಲ್ಲಿ ಈ ರೈಲು ನಿರ್ಮಾಣವಾಗಲಿದೆ. ವಂದೇ ಭಾರತ್ ರೈಲಿನ ವಿನ್ಯಾಸ ಸಹ ಆಕರ್ಷಕವಾಗಿದೆ. ನರೇಂದ್ರ ಮೋದಿ ಕನಸಿನ ಆತ್ಮನಿರ್ಭರ್ ಭಾರತ್ ಪರಿಕಲ್ಪನೆಯಲ್ಲಿ ಈ ರೈಲನ್ನು ತಯಾರು ಮಾಡಲಾಗಿದೆ. ನರೇಂದ್ರ ಮೋದಿ ಕ್ಷೇತ್ರವಾದ ವಾರಣಾಸಿ-ದೆಹಲಿ ನಡುವೆ ಈಗಾಗಲೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ನಡೆಸುತ್ತಿದೆ. ಈ ರೈಲಿನ ವೇಗ 160 ಕಿ. ಮೀ.ಗಳು.

Recommended Video

    ಆ ದಿನಗಳನ್ನ ಮೆಲುಕು ಹಾಕಿದ ಬೆಂಗಳೂರು ನಾಗೇಶ್ | Oneindia Kannada
    ಶತಾಬ್ದಿ ರೈಲುಗಳಿಗಿಂತ ವೇಗವಾಗಿ ಸಂಚಾರ

    ಶತಾಬ್ದಿ ರೈಲುಗಳಿಗಿಂತ ವೇಗವಾಗಿ ಸಂಚಾರ

    2019ರ ಫೆಬ್ರವರಿಯಲ್ಲಿ ದೆಹಲಿ-ವಾರಣಾಸಿ ನಡುವೆ ಮತ್ತು 2019ರ ಅಕ್ಟೋಬರ್‌ನಲ್ಲಿ ದೆಹಲಿ-ಶ್ರೀ ಮಾತಾ ವೈಷ್ಣೋದೇವಿ ಕಟ್ರಾ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಚಾಲನೆ ನೀಡಲಾಗಿದೆ. ಶತಾಬ್ದಿ ರೈಲಿಗಿಂತ ವೇಗದಲ್ಲಿ ಈ ರೈಲು ಸಂಚಾರ ನಡೆಸಲಿವೆ. ರೈಲಿನ ವಿನ್ಯಾಸವನ್ನು ಬದಲಾವಣೆ ಮಾಡಲಾಗುತ್ತಿದ್ದು, 2022ರಲ್ಲಿ ಹೊಸ ವಿನ್ಯಾಸದ ರೈಲು ಹಳಿಯ ಮೇಲೆ ಇರಲಿದೆ. ಕರ್ನಾಟಕದಲ್ಲಿಯೂ ವಂದೇ ಭಾರತ್ ರೈಲು ಸಂಚಾರಕ್ಕೆ ಇಲಾಖೆ ಯಾವಾಗ ದಿನಾಂಕ ನಿಗದಿ ಮಾಡಲಿದೆ ಎಂದು ಕಾದು ನೋಡಬೇಕಿದೆ.

    More From
    Prev
    Next
    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+