ಮಣಿಪುರ‌ ಅಷ್ಟೇ ಅಲ್ಲ, ‌ಪಶ್ಚಿಮ ಬಂಗಾಳ ಗಲಭೆ ಸಹ ಅಧಿವೇಶನದಲ್ಲಿ ಚರ್ಚೆ ಆಗಲಿ- ಶೋಭಾ ಕರಂದ್ಲಾಜೆ

ಹುಬ್ಬಳ್ಳಿ, ಜುಲೈ 22: ಮಣಿಪುರದಲ್ಲಿ ಮಹಿಳೆಯರನ್ನ ಬೆತ್ತಲೆ ಮಾಡಿದ್ದು ದೇಶಕ್ಕೆ ನೋವು ತರುವಂತಹದ್ದು. ಈ ಪ್ರಕರಣ ಹಾಗೂ ಪಶ್ಚಿಮ ಬಂಗಾಳದಲ್ಲಿ ಪಂಚಾಯತ್‌ ಚುನಾವಣೆಯಲ್ಲಿ ನಡೆದ ಸಂಘರ್ಷ ಸಹ ಅಧಿವೇಶನ ಹಾಗೂ ಮಾಧ್ಯಮಗಳಲ್ಲಿ ಪಾರದರ್ಶಕವಾಗಿ ಚರ್ಚೆ ಆಗಬೇಕು ಎಂದು ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಆಗ್ರಹಿಸಿದರು.

ಹುಬ್ಬಳ್ಳಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಣಿಪುರದಲ್ಲಿ ಜಾತಿ ಸಂಘರ್ಷ ನಡೆಯುತ್ತಿದ್ದು, ಈಗ ಸತ್ಯ ಹೊರ ಬರುತ್ತಿದೆ. ಮಣಿಪುರದಲ್ಲಿ ಬೇರೆ ಬೇರೆ ಜಾತಿಗಳ ಮಧ್ಯೆ ಸಂಘರ್ಷ ನಡೆಯುತ್ತಿದೆ. ಎಲ್ಲರೂ ಒಗ್ಗೂಡಿಸಿ ಹೋರಾಟ ಮಾಡಬೇಕಾಗಿದೆ. ಕೇವಲ ಬಿಜೆಪಿ, ಕಾಂಗ್ರೆಸ್ ಮತ್ತು ಜೆಸಿಎಸ್ ಒಂದೇ ಎರಡೇ ಪಕ್ಷ ಅಲ್ಲಾ ಎಂದರು.

Union Minister Shobha Karandlaje React On Manipur Viral Video Of Women

ಮಣಿಪುರದ ಭಾಗದಲ್ಲಿ ಬೇರೆ ಬೇರೆ ದೇಶಗಳಿಂದ ನುಸುಳುಕೋರರು ಬರುತ್ತಿದ್ದಾರೆ. ಇದು ಸರಿಯಲ್ಲ. ಇದರಲ್ಲಿ ಯಾವುದೇ ರಾಜಕೀಯ ಮಾಡಬಾರದು. ಒಗ್ಗಟ್ಟಾಗಿ ಹೋರಾಟ ನಡೆಸಿದರೆ ಮಾತ್ರ ಮಣಿಪುರದಲ್ಲಿ ಶಾಂತಿ ಸುವ್ಯವಸ್ಥಿತೆ ಕಾಪಾಕೊಳ್ಳಬಹುದು. ಮಣಿಪುರದಲ್ಲಿ ಶಾಂತಿ ಸುವ್ಯವಸ್ಥೆ ಅಗತ್ಯವಾಗಿದೆ ಎಂದು ಸಲಹೆ ನೀಡಿದರು.

ಉತ್ತರ ಭಾರತದಲ್ಲಿ ಸಾಕಷ್ಟು ಆತಂಕಕಾರಿ ಬೆಳವಣಿಗೆ ನಡೆಯುತ್ತಿದೆ. ಪಂಚಾಯತ್‌ ಚುನಾವಣೆಯಲ್ಲಿನ ಗಲಭೆ ಹಾಗೂ ಕೊಲೆ ಸಹ ಚರ್ಚೆ ಆಗಬೇಕು ಎಂದರು.

ಜ್ಞಾನವಾಪಿ ಮಸೀದಿ ಸರ್ವೇಗೆ ಕೋರ್ಟ್ ಅನುಮತಿ ನೀಡಿದ ವಿಚಾರವಾಗಿ ಮಾತನಾಡಿದ ಅವರು, ಅದು ಜ್ಞಾನವಾಪಿ ಮಸೀದಿ ವಾರಾಣಾಸಿ ಕಾಶಿಯ ಒಂದು ಭಾಗ. ಶಿವನ ಮೊದಲ ಸ್ಥಾನ ವಾರಾಣಾಸಿ. ಜೀವನದಲ್ಲಿ ಒಂದು ದಿನವಾದರೂ ಕಾಶಿ ಯಾತ್ರೆಗೆ ಹೋಗಬೇಕು ಎನ್ನುವುದು ಹಿಂದೂಗಳ ಅಪೇಕ್ಷೆ ಆಗಿದೆ ಎಂದರು.

Union Minister Shobha Karandlaje React On Manipur Viral Video Of Women

ಕಾಶಿಯ ಹಲವಾರು ಹಿಂದೂ ದೇವಾಲಯಗಳನ್ನು ಧ್ವಂಸ ಮಾಡಲಾಗಿತ್ತು. ಧ್ವಂಸ ಮಾಡಿದ ದೇವಸ್ಥಾನ, ದೇವಾಲಯ ಕಂಬಗಳ ಮೇಲೆ ಮಸೀದಿಗಳ ನಿರ್ಮಾಣ ಮಾಡಲಾಗಿತ್ತು. ಇನ್ನು ಕಾಶಿಯ ಜ್ಞಾನವಾಪಿ ಮಸೀದಿ ಕುರಿತು ನ್ಯಾಯಾಲಯದ ತೀರ್ಪು ನಮ್ಮ ಪರ ಬರುವ ವಿಶ್ವಾಸ ಇದೆ. ನಮ್ಮ ಹಿರಿಯರು ಜ್ಞಾನವಾಪಿ ಮಸೀದಿಯಲ್ಲಿ ಶಿವನ ಆರಾಧನೆ ಮಾಡುತ್ತಿದ್ದರು. ಮುಂದೆ ನಮಗೂ ಶಿವನ ಆರಾಧನೆ ಮಾಡುವ ಕಾಲ ಬರುತ್ತದೆ ಎಂದು ಹೇಳಿದರು.

ಭಾರತೀಯರು ಎಂದೂ ಬೇರೆ ಧರ್ಮಕ್ಕೆ ಭೇಧ ಭಾವ ಮಾಡಿಲ್ಲ. ಯಾರೇ, ಯಾವುದೇ ಧರ್ಮವರೂ ಭಾರತಕ್ಕೆ ಬಂದರೆ ಅವರಿಗೆ ಆಶ್ರಯವನ್ನು ಕೊಟ್ಟವರು. ಜ್ಞಾನವಾಪಿಯ ಸರ್ವೇ ಸ್ವಾಗತಾರ್ಹ. ಪ್ರಾಚೀನ ಕಾಲದಿಂದಲೂ ಹಿಂದೂಗಳ ದೇವಾಲಯ ಕಾಶಿ ವಿಶ್ವನಾಥನ ದೇವಸ್ಥಾನ ಒಡೆದು ಮಸೀದಿ ಕಟ್ಟಿದ್ದು ,ತನಿಖೆ ನಡೆಯಬೇಕು ಒತ್ತಾಯ ಮಾಡುತ್ತಿದ್ದರು. ಈಗ ಸರ್ವೇಗೆ ಅನುಮತಿ ಸಿಕ್ಕಿರುವುದು ನ್ಯಾಯಕ್ಕೆ ಸಿಕ್ಕ ಜಯ. ಮಸೀದಿ ಸರ್ವೇಗಾಗಿ ಕೋರ್ಟ್‌ಗೆ ಹೋಗಿದ್ದರು. ಈಗ ಕೋರ್ಟ್ ಸರ್ವೇಗೆ ಅನುಮತಿ ನೀಡಿದೆ. ಒಳ್ಳೆಯ ವಿಚಾರ. ಇದರಿಂದ ಹಿಂದೂಗಳಿಗೆ ಅಷ್ಟೇ ಅಲ್ಲದೇ, ಅಲ್ಲಿನ ಜನರಿಗೆ ನ್ಯಾಯ ಸಿಕ್ಕಿದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+