ಕರ್ನಾಟಕ ಕರ್ತವ್ಯನಿರತ ಸರ್ಕಾರಿ ನೌಕರರಿಗೆ ಮತದಾನಕ್ಕೆ ಅವಕಾಶ ಇಲ್ಲ..!
ಧಾರವಾಡ, ಮೇ 02: ರಾಜ್ಯದಲ್ಲಿ ಮೊದಲ ಹಂತದ ಲೋಸಕಭಾ ಚುನಾವಣೆ ನಡೆದಿದೆ. ಇದೀಗ ಉತ್ತರ ಕರ್ನಾಟಕ ಭಾಗದಲ್ಲಿ ಎರಡನೇ ಹಂತದ ಚುನಾವಣೆಗೆ ದಿನಗಣನೇ ಆರಂಭವಾಗಿದೆ. ಈ ಮಧ್ಯೆ ಕರ್ತವ್ಯ ನಿರತ ಸರ್ಕಾರಿ ನೌಕರರಿಗೆ ಮತದಾನದ ಅವಕಾಶ ತಪ್ಪಿದೆ.
ಹೌದು, ಧಾರವಾಡ ಜಿಲ್ಲೆಯಲ್ಲಿ ಕರ್ತವ್ಯ ನಿರತ ಸಿಬ್ಬಂದಿಗೆ ಈ ಭಾರಿ ಮತದಾನದ ಅವಕಾಶ ತಪ್ಪಿದೆ. ಸುಮಾರು 800-1000 ಅಂಚೆ ಮತದಾರರಿಗೆ ಅದರಲ್ಲೂ ಹೆಚ್ಚಾಗಿ ಪೊಲೀಸ್ ಇಲಾಖೆ ಸಿಬ್ಬಂದಿಗೆ ಮತದಾನದ ಅವಕಾಶ ತಪ್ಪಿದೆ.

ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಲೋಕಸಭಾ ಚುನಾವಣೆಗೆ ಮತದಾನಕ್ಕೆ ಅವಕಾಶ ಕೋರಿ ಅಂಚೆ ಮತದಾನಕ್ಕಾಗಿ ಅರ್ಜಿ ಅಲ್ಲಿಸಿದ್ದರ. ಆದರೆ ಗುರುವಾರ ಅಂಚೆ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲ ಎಂದು ಚುನಾವಣಾ ಆಯೋಗ ಇವರ ಮತದಾನದ ಮನವಿಯನ್ನು ನಿರಾಕರಿಸಿದೆ.
ಅಧಿಕಾರಿಗಳಿಗೆ ಮನವಿ ಮಾಡಿದರು ಖ್ಯಾರೆ ಎಂದಿಲ್ಲ?
ಕೂಡಲೇ ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಈ ವಿಚಾರವನ್ನು ಧಾರವಾಡ ಪೊಲೀಸ್ ವರಿಷ್ಠಾಧಿಕಾರಿಗಳು ಗಮನಕ್ಕೆ ತರಲಾಗಿದೆ. ಅಲ್ಲದೇ ಈ ಬಗ್ಗೆ ಜಿಲ್ಲಾ ಚುನಾವಣಾಧಿಕಾಯೂ ಆಗಿರುವ ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗಿದೆ.
ಆದರೆ, ಮತದಾನ ಅವಕಾಶದ ಕುರಿತು ನನಗೆ ಗೊತ್ತಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿಗಳ ಹಾರಿಕೆಯ ಉತ್ತರ ಕೊಟ್ಟಿದ್ದಾರೆ. ಈ ಬಗ್ಗೆ ರಿಟರ್ನಿಂಗ್ ಆಫೀಸರ್ ಅವರ ಬಳಿ ಸಹ ಮನವಿ ಮಾಡಲಾಗಿದೆ. ಅವರು ಸಹ ಈ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಬೇರೆ ಜಿಲ್ಲೆಗಳ ಪೊಲೀಸರು ವಂಚಿತರು
ಮತದಾನದಿಂದ ವಂಚಿತರಾಗಿರುವ ಪೊಲೀಸರ ಪೈಕಿ ಧಾರವಾಡ ಜಿಲ್ಲೆ ಹೊರತು ಪಡಿಸಿ ಬೇರೆ ಜಿಲ್ಲೆಗಳಿಂದ ಬಂದಿರುವ ಪೊಲೀಸ್ ಸಿಬ್ಬಂದಿ ಸಹ ಇದ್ದಾರೆ. ಎಡಿಎಲ್ಆರ್ ಮನೋಹರ ಶಿವಣ್ಣವರ್ ಕರ್ತವ್ಯ ಲೋಪದಿಂದ ಈ ನೂರಾರು ಪೊಲೀಸರು ಮತದಾನದಿಂದ ವಂಚಿತರಾಗಿದ್ದಾರೆ ಎನ್ನಲಾಗಿದೆ.
ಮತದಾನಕ್ಕೆ ಅವಕಾಶ ಮಾಡಿಕೊಡಬೇಕಾದ ಎಡಿಎಲ್ಆರ್ ಶಿವಣ್ಣವರ್ ಅವರು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ತಿಂಗಳ ಪ್ರಯತ್ನಕ್ಕೆ ಸಿಗದ ಫಲ
ಮತದಾನ ಹಕ್ಕು ಚಲಾಯಿಸಲು ಕರ್ತವ್ಯ ನಿರತ ಪೊಲೀಸರು ಕಳೆದ 1 ತಿಂಗಳಿನಿಂದ ನ್ಯೂಡಲ್ ಆಫೀಸರ್ ಗೆ ಮಾಹಿತಿ ನೀಡಿದ್ದಾರೆ. ಎಡಿಎಲ್ಆರ್ಗೆ ಸಹ ಅರ್ಜಿ ರವಾನಿಸಿ ಮನವಿ ಮಾಡಿದ್ದರು. ಹೀಗಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ.
ಸಿಲೆಬ್ರಟಿಗಳಿಂದ ಮತದಾನದ ಮಹತ್ವದ ಕುರಿತು ಜಾಹೀರಾತು, ಜಾಗೃತಿ ಸಾರುವ ಚುನಾವಣಾ ಆಯೋಗವು ಈ ಪೊಲೀಸರ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದೆ. ಮತದಾನ ಮಾಡಲು ಬಯಸುವವರಿಗೆ ಅವಕಾಶ ಇಲ್ಲ ಎಂದು ಆಯೋಗ ಹೇಳಿದೆ ಎಂದು ನೂರಾರು ಪೊಲೀಸರು ಅಸಮಾಧಾನ ವ್ಯಕ್ತಪಡಿಸಿದರು.












Click it and Unblock the Notifications