Deepavali Special Train: ಹುಬ್ಬಳ್ಳಿ & ಬೀದರ್‌ನಿಂದ ಬೆಂಗಳೂರಿಗೆ ವಿಶೇಷ ರೈಲು, ಸಂಪೂರ್ಣ ವಿವರ ಇಲ್ಲಿದೆ
ಹುಬ್ಬಳ್ಳಿ, ನವೆಂಬರ್ 10: ದೀಪಾವಳಿ ಹಬ್ಬಕ್ಕೆ ಜನರಿಗೆ ಅನುಕೂಲವಾಗಲಿ ಎಂದು ಹುಬ್ಬಳ್ಳಿ-ಬೀದರ್-ಯಶವಂತಪುರ ನಡುವೆ ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದೆ ಎಂದು ಕೇಂದ್ರ ರಾಸಾಯನಿಕ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಮಾಹಿತಿ ನೀಡಿದ್ದಾರೆ.
ವಿಶೇಷ ರೈಲು (ಗಾಡಿ ಸಂಖ್ಯೆ: 06505) ನವೆಂಬರ್ 10ರಂದು ಮಧ್ಯಾಹ್ನ 2.30ಕ್ಕೆ ಹುಬ್ಬಳ್ಳಿಯಿಂದ ಹೊರಟು ರಾತ್ರಿ 11.15ಕ್ಕೆ ಯಶವಂತಪುರ ತಲುಪಲಿದೆ. ಅಲ್ಲಿಂದ ನಿರ್ಗಮಿಸಿ ಯಾದಗಿರಿ, ಕಲಬುರಗಿ, ತಾಜಸುಲ್ತಾನಪುರ ಮಾರ್ಗವಾಗಿ ಬೆಳಿಗ್ಗೆ 10.49ಕ್ಕೆ ಹುಮನಾಬಾದ್, ಮಧ್ಯಾಹ್ನ 12.15ಕ್ಕೆ ಬೀದರ್ ತಲುಪಲಿದೆ.

ಗಾಡಿ ಸಂಖ್ಯೆ: 06506 ರೈಲು ನವೆಂಬರ್ 14ರಂದು ಮಧ್ಯಾಹ್ನ 2.30ಕ್ಕೆ ಬೀದರ್‌ನಿಂದ ನಿರ್ಗಮಿಸಿ ಮರುದಿನ ನಸುಕಿನ ಜಾವ 4ಗಂಟೆಗೆ ಯಶವಂತಪುರ ನಿಲ್ದಾಣ ಸೇರಲಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಗುರುವಾರ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇತ್ತೀಚೆಗೆ ಬೀದರ್-ಯಶವಂತಪುರ ವಾಯಾ ಕಲಬುರಗಿ ರೈಲು ಶನಿವಾರ ರಾತ್ರಿ 11.15ಕ್ಕೆ ಯಶವಂತಪುರದಿಂದ ಹೊರಟು ಮರುದಿನ ಮಧ್ಯಾಹ್ನ 1.30ಕ್ಕೆ ಬೀದರ್ ತಲುಪಲಿದೆ. ಅದೇ ದಿನ ಮಧ್ಯಾಹ್ನ 2.30ಕ್ಕೆ ಬೀದರ್‌ನಿಂದ ನಿರ್ಗಮಿಸಿ ಮರುದಿನ ನಸುಕಿನ ಜಾವ 4ಕ್ಕೆ ಯಶವಂತಪುರ ಸೇರಲಿದೆ ಎಂದು ತಿಳಿಸಿದ್ದಾರೆ.

ವಿಕಾರಬಾದ್ ಮಾರ್ಗವಾಗಿ ಬೀದರ್-ಯಶವಂತಪುರ, ನಾಂದೇಡ್-ಬೀದರ್-ಬೆಂಗಳೂರು ರೈಲುಗಳು ಎಂದಿನಂತೆ ಸಂಚರಿಸಲಿವೆ. ಎರಡು ರೈಲು ವಾಯಾ ಕಲಬುರಗಿ ಮೂಲಕ ಪಯಣ ಬೆಳೆಸಲಿವೆ. ಇದರೊಂದಿಗೆ ಒಟ್ಟು ನಾಲ್ಕು ರೈಲುಗಳು ಬೆಂಗಳೂರಿಗೆ ಸಂಚರಿಸಿದಂತಾಗಲಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ವಿಶೇಷ ರೈಲುಗಳಿಂದ ಹಣ ಉಳಿತಾಯವಾಗಲಿದೆ. ನಮ್ಮ ಮನವಿಗೆ ಓಗೊಟ್ಟು ಪ್ರಧಾನಿ ನರೇಂದ್ರ ಮೋದಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ವಿಶೇಷ ರೈಲುಗಳನ್ನು ಬಿಟ್ಟಿದ್ದಾರೆ ಎಂದು ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.












Click it and Unblock the Notifications