ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉತ್ತರ ಕರ್ನಾಟಕದ 6 ಬರಪೀಡಿತ ಜಿಲ್ಲೆಗಳಿಗೆ ಸಿಎಂ ಪ್ರವಾಸ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಏಪ್ರಿಲ್ 22 : ಬಿಸಿಲಿನ ತಾಪಕ್ಕೆ ಬಸವಳಿದಿರುವ ಮತ್ತು ನೀರಿಲ್ಲದೆ ಭೀಕರ ಬರಗಾಲಕ್ಕೆ ತುತ್ತಾಗಿರುವ ರಾಜ್ಯದ ಆರು ಜಿಲ್ಲೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಏಪ್ರಿಲ್ 25, ಸೋಮವಾರದಿಂದ ಮೂರು ದಿನಗಳ ಕಾಲ ಭೇಟಿ ನೀಡಲಿದ್ದಾರೆ.

ಬರಪೀಡಿತ ಉತ್ತರ ಕರ್ನಾಟಕ ಭಾಗದ ಬೆಳಗಾವಿ, ಹಾವೇರಿ, ಧಾರವಾಡ ಮತ್ತು ಗದಗ, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಸಿದ್ಧರಾಮಯ್ಯ ಏಪ್ರಿಲ್ 25ರಿಂದ ಆರಂಭವಾಗಲಿದೆ. ಧೂಳಿನ ಊರುಗಳೆಂದೇ ಖ್ಯಾತವಾಗಿರುವ ಈ ಊರುಗಳಿಗೆ ಸಿದ್ದರಾಮಯ್ಯ ಕಾಲಿಡುವ ಮುನ್ನ ಮತ್ತೆಷ್ಟು ಟ್ಯಾಂಕರುಗಳಿಂದ ರಸ್ತೆಗಳಿಗೆ ನೀರು ಹೊಡೆಸಲಿದ್ದಾರೋ?

ಕಲಬುರಗಿಯಲ್ಲಿ ಅತ್ಯಧಿಕ ತಾಪಮಾನ 43.4 ಡಿಗ್ರಿ ದಾಖಲಾಗಿದ್ದರೆ, ಮೇಲಿನ ಈ ಆರು ಜಿಲ್ಲೆಗಳಲ್ಲಿ ತಾಪಮಾನ ನಲವತ್ತರ ಗಡಿ ದಾಟಿದೆ. ಮಳೆಯ ಕಿಂಚಿತ್ ಸುಳಿವೂ ಇಲ್ಲದಿದ್ದರಿಂದ ಈ ಜಿಲ್ಲೆಗಳೆಲ್ಲ ಕಾದ ಕೆಂಡದಂತಾಗಿವೆ. ರೈತರಿಗೆ, ಹಸುಕರುಗಳಿಗೆ ನೀರು ಮೇವು, ಜನರಿಗೆ ಕುಡಿಯುವ ನೀರು ದೊರಕಿಸಿಕೊಡುತ್ತಾರಾ ಸಿದ್ದರಾಮಯ್ಯ? [ಕುಡಿಯಾಕ್ ತೊಟ್ ನೀರಿಲ್ಲ, ಮುಂದ್ ಕತಿ ಹೆಂಗ್ರೀಪಾ..!]

Siddaramaiah to tour drought hit 6 districts in North Karnataka

ಮುಖ್ಯಮಂತ್ರಿಗಳ ಪ್ರವಾಸದ ವಿವರ ಈ ರೀತಿ ಇದೆ

ಏ.25, ಸೋಮವಾರ

* ಬೆಳಗ್ಗೆ 8.30ಕ್ಕೆ ಬೆಂಗಳೂರು ಎಚ್ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಬೆಳಗಾವಿಗೆ ತೆರಳುವರು.
* 10 ಗಂಟೆಯಿಂದ 11ರವರೆಗೆ ಬೆಳಗಾವಿ ಜಿಲ್ಲಾ ಪರಿಶೀಲನಾ ಸಭೆ, ಮಧ್ಯಾಹ್ನ 2-30ರಿಂದ ಸಂಜೆ 6-30ರವರೆಗೆ ಬೆಳಗಾವಿ ಜಿಲ್ಲೆಯ ಬರಪೀಡಿತ ಪ್ರದೇಶಗಳಿಗೆ ಭೇಟಿ. [ಕತ್ತಲಲ್ಲಿ ಕೆಆರ್ ಎಸ್ ವೀಕ್ಷಿಸಿದ ಬರ ಅಧ್ಯಯನ ತಂಡ!]

ರಾತ್ರಿ ಧಾರವಾಡದಲ್ಲಿ ವಾಸ್ತವ್ಯ.

ಏ.26, ಮಂಗಳವಾರ

* ಬೆಳಗ್ಗೆ 9-30ರಿಂದ 11 ಗಂಟೆಯವರೆಗೆ ಧಾರವಾಡ ಜಿಲ್ಲಾ ಪರಿಶೀಲನಾ ಸಭೆ, 11ರಿಂದ ಧಾರವಾಡ ಜಿಲ್ಲಾ ಬರಪೀಡಿತ ಪ್ರದೇಶಗಳಿಗೆ ಭೇಟಿ.
* ಮಧ್ಯಾಹ್ನ 1-30ರಿಂದ ಹಾವೇರಿ ಜಿಲ್ಲೆಗೆ ಪ್ರಯಾಣ. 2.30ರಿಂದ 4ರವರೆಗೆ ಹಾವೇರಿ ಜಿಲ್ಲಾ ಪರಿಶೀಲನಾ ಸಭೆ.
* ಸಂಜೆ 4ರಿಂದ 6-30ರವರೆಗೆ ಹಾವೇರಿ ಜಿಲ್ಲಾ ಬರಪೀಡಿತ ಪ್ರದೇಶಗಳಿಗೆ ಭೇಟಿ. ನಂತರ ಹುಬ್ಬಳ್ಳಿಯ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ. [ನೀಲಕಂಠರಾಯನಗಡ್ಡಿ ವಾಸಿಗಳಿಗೆ ನೀರು ಎಂದೂ ಶಾಪ!]

ಏ.27 ರಂದು ಬುಧವಾರ

* ಬೆಳಗ್ಗೆ 9.30ರಿಂದ 11ರವರೆಗೆ ಗದಗ ಜಿಲ್ಲಾ ಪರಿಶೀಲನಾ ಸಭೆ. 11ರಿಂದ ಗದಗ ಜಿಲ್ಲೆಯ ಬರಪೀಡಿತ ಪ್ರದೇಶಗಳಿಗೆ ಭೇಟಿ.
* ಮಧ್ಯಾಹ್ನ 1ಕ್ಕೆ ಕೊಪ್ಪಳಕ್ಕೆ ಆಗಮನ. ಮಧ್ಯಾಹ್ನ 2-30ರಿಂದ 4 ಗಂಟೆಯವರೆಗೆ ಕೊಪ್ಪಳ ಜಿಲ್ಲಾ ಪರಿಶೀಲನಾ ಸಭೆ.
* ಸಂಜೆ 4ರಿಂದ ಕೊಪ್ಪಳ ಜಿಲ್ಲಾ ಬರಪೀಡಿತ ಪ್ರದೇಶಗಳಿಗೆ ಭೇಟಿ. ಸಂಜೆ 6-30ಕ್ಕೆ ತೋರಣಗಲ್ಲು ಜಿಂದಾಲ್ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ. [ಮಳೆಯಿಲ್ಲ, ಬೆಳೆಯಿಲ್ಲ, ಉತ್ತರದ ಮಂದಿ ಹೊಂಟರು ಗುಳೆ]

English summary
Chief minister Siddaramaiah will be touring drought hit Belagavi, Haveri, Dharwad, Gadag, Koppal and Ballery districts from 25th April for 3 days. Hope authorities will not waste water to sprinkle on road to make them dust free.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X