ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಧಾರವಾಡ : ಮರಳಲ್ಲಿ ಮೂಡಿತು ಮಾದರಿ ಮತಯಂತ್ರ

|
Google Oneindia Kannada News

ಧಾರವಾಡ, ಏಪ್ರಿಲ್ 11 : ಧಾರವಾಡದಲ್ಲಿ ಮರಳು ಶಿಲ್ಪದ ಮೂಲಕ ಜನರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ವಿದ್ಯಾರ್ಥಿಗಳು ಮರಳು ಶಿಲ್ಪದ ಮುಂದೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸುತ್ತಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಮತದಾರರ ಜಾಗೃತಿಗಾಗಿ ಹೊಸ ಹೊಸ ಕಾರ್ಯಕ್ರಮ ರೂಪಿಸುತ್ತಿರುವ ಧಾರವಾಡ ಜಿಲ್ಲಾ ಸ್ವೀಪ್ ಸಮಿತಿ ಕರ್ನಾಟಕ ಮಹಾವಿದ್ಯಾಲಯದ ಮಹಾದ್ವಾರದ ಬಳಿ ನಿರ್ಮಿಸಿರುವ ಮತದಾರ ಜಾಗೃತಿ ಸಂದೇಶ ಸಾರುವ ಮರಳು ಶಿಲ್ಪವನ್ನು ನಿರ್ಮಿಸಿದೆ.

ಧಾರವಾಡ ಕ್ಷೇತ್ರದ ಚುನಾವಣಾ ಪುಟ

ಸ್ಥಳೀಯ ಕಲಾವಿದರಾದ ಮಂಜುನಾಥ ಹಿರೇಮಠ ಹಾಗೂ ಅವರ ಪುತ್ರ ಕಾಂತೇಶ ನಿರ್ಮಿಸಿರುವ ಮರಳು ಶಿಲ್ಪ ಕಲಾಕೃತಿಯನ್ನು ಜಿಲ್ಲಾಧಿಕಾರಿ, ಚುನಾವಣಾಧಿಕಾರಿ ದೀಪಾ ಚೋಳನ್ ಹಾಗೂ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸಿ.ಸತೀಶ ಅವರು ಸಾರ್ವಜನಿಕ ಪ್ರದರ್ಶನಕ್ಕೆ ಉದ್ಘಾಟಿಸಿದರು.

ಧಾರವಾಡಕ್ಕೆ ಕೊನೆಗೂ ಕಾಂಗ್ರೆಸ್ ಅಭ್ಯರ್ಥಿ ಘೋಷಣೆಧಾರವಾಡಕ್ಕೆ ಕೊನೆಗೂ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ

Sand art campaign in Dharwad for voting awareness

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಏಪ್ರಿಲ್ 23ರಂದು ಚುನಾವಣೆ ನಡೆಯಲಿದೆ. ಈ ಮರಳು ಶಿಲ್ಪ ವಿದ್ಯಾರ್ಥಿಗಳು, ಯುವಜನರು ಸೇರಿದಂತೆ ಹಲವಾರು ಹಲವರನ್ನು ಸೆಳೆಯುತ್ತಿದೆ. ಅಧಿಕಾರಿಗಳು, ಹಿರಿಯ ನಾಗರಿಕರೂ ಕೂಡ ಮರಳು ಶಿಲ್ಪದೊಂದಿಗೆ ಸೆಲ್ಫಿ ತೆಗೆದುಕೊಂಡರು.

ಕಲಾವಿದರಾದ ಎಫ್.ಬಿ. ಕಣವಿ, ಕೀರ್ತಿವತಿ ಮತ್ತು ತಂಡದವರು ಚುನಾವಣಾ ಗೀತೆಗಳನ್ನು ಹಾಡಿದರು. ಮೂರು ದಿನಗಳ ಕಾಲ ಅಂದರೆ ಏ.13ರ ತನಕ ಮರಳು ಶಿಲ್ಪದ ಪ್ರದರ್ಶನ ಮುಂದುವರೆಯಲಿದೆ.

ಧಾರವಾಡ ಕ್ಷೇತ್ರದಲ್ಲಿ ಬಿಜೆಪಿಯಿಂದ ಹಾಲಿ ಸಂಸದ ಪ್ರಹ್ಲಾದ್ ಜೋಶಿ, ಕಾಂಗ್ರೆಸ್‌-ಜೆಡಿಎಸ್‌ನಿಂದ ವಿನಯ್ ಕುಲರ್ಣಿ ಅಭ್ಯರ್ಥಿಗಳು.

English summary
Voting awareness campaign by Systematic Voter's Education and Electoral Participation (SWEEP) Dharwad in sand art. Lok sabha election will be held in Dharwad on April 23, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X