ದೇಶ ವಿನಾಶದತ್ತ ಸಾಗುತ್ತಿರುವುದಕ್ಕೆ ಬಿಜೆಪಿಯೇ ಹೊಣೆ: ಗುಂಡೂರಾವ್

Posted By:
Subscribe to Oneindia Kannada

ಹುಬ್ಬಳ್ಳಿ,ಮಾರ್ಚ್,12: ದೇಶದ ಸಿದ್ಧಾಂತ ಬುಡಮೇಲು ಮಾಡುತ್ತಿರುವ ಬಿಜೆಪಿ ಪಕ್ಷ ದೇಶವನ್ನು ಅಧಃಪತನದತ್ತ ಕೊಂಡೊಯ್ಯುತ್ತಿದೆ. ಅಲ್ಲದೇ ರಾಜ್ಯದ ಬಿಜೆಪಿ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಾಚ್ ಬಗ್ಗೆ ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ ಎಂದು ಸಚಿವ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ದಿನೇಶ ಗುಂಡೂರಾವ್ ಕಿಡಿಕಾರಿದರು.

ಹಳೇಹುಬ್ಬಳ್ಳಿ ಭಾಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 500 ಕುಟುಂಬಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ ವಿತರಿಸಿ ಮಾತನಾಡಿದ ಅವರು, 'ಮೋದಿ ಸರಕಾರದ ವಿರುದ್ಧ ಧ್ವನಿ ಎತ್ತುವವರನ್ನು ದಮನ ಮಾಡಲಾಗುತ್ತಿದೆ. ಹಿಂದುತ್ವ ಒಪ್ಪಿದವರನ್ನು ದೇಶಪ್ರೇಮಿಗಳೆಂದು, ಉಳಿದವರು ದೇಶದ್ರೋಹಿಗಳೆಂದು ಬಿಂಬಿಸಲಾಗುತ್ತಿದೆ ಎಂದು ದಿನೇಶ್ ಆರೋಪಿಸಿದರು.[ಪ್ರಧಾನಿ ಮೋದಿ ದೇಶಕ್ಕೆ ನೀಡಿದ ಎರಡು ಅಪ್ರತಿಮ ಉಡುಗೊರೆಗಳು!]

Hubballi

ಮೋದಿ ಸರಕಾರದ ನೀತಿಗಳನ್ನು ಖಂಡಿಸಿದ ಅವರು ಮೋದಿ ಸರಕಾರದ ನಿರ್ಲಕ್ಷ್ಯದಿಂದ ರಾಜೀವ್ ಗಾಂಧಿ ಯೋಜನೆ ರಾಜ್ಯದಲ್ಲಿ ಕುಂಠಿತವಾಗಿದೆ. ಮನಮೋಹನ್ ಸಿಂಗ್ ಈ ಯೋಜನೆಯಡಿ ಮನೆ ನಿರ್ಮಾಣಕ್ಕೆ 4 ಲಕ್ಷ ರೂ. ನೀಡುತ್ತಿದ್ದರು. ಈಗ ಅದನ್ನು ಕೇವಲ 1.5 ಲಕ್ಷಕ್ಕೆ ಇಳಿಸಲಾಗಿದೆ ಎಂದು ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದರು.

ಮಹಿಳೆಯರ ಹೆಸರಿನಲ್ಲಿ ಪಡಿತರ ಚೀಟಿ ವಿತರಿಸುತ್ತಿರುವುದರಿಂದ ಮಹಿಳೆಯರು ಸಾಮಾಜಿಕ ಬದಲಾವಣೆಯಲ್ಲಿ ಭಾಗಿಯಾಗಿದ್ದಾರೆ ಎಂದು ಧಾರವಾಡದಲ್ಲಿ ಗ್ರಾಹಕ ಹಿತರಕ್ಷಣಾ ಕೈಪಿಡಿ ಬಿಡುಗಡೆ ಮಾಡಿ ಮಾತನಾಡಿದರು.

ಪಡಿತರ ಚೀಟಿ ವಿತರಣೆಯಲ್ಲಿ ಖಾಸಗಿ ವ್ಯಕ್ತಿಗಳು ನಡೆಸುತ್ತಿರುವ ಅವ್ಯವಹಾರ ತಪ್ಪಿಸಲೆಂದು ಮಹಿಳಾ ಸ್ವ ಸಹಾಯ ಸಂಘ ಮತ್ತು ಸಹಕಾರ ಸಂಘಗಳಿಗೆ ಪಡಿತರ ವಿತರಿಸುವ ಲೈಸೆನ್ಸ್ ನೀಡಲಾಗುತ್ತಿದೆ. ಈ ಹಿಂದೆ ನೀಡುತ್ತಿದ್ದ 36 ರೂ.ಕಮೀಷನ್ ನ್ನು 70 ರೂ.ಗೆ ಏರಿಸಲಾಗಿದ್ದು, ಪಡಿತರ ಮಳಿಗೆಯನ್ನು ಮಹಿಳೆಯರು ಸಮರ್ಥ ಮತ್ತು ಪ್ರಾಮಾಣಿಕವಾಗಿ ನಡೆಸಿಕೊಂಡು ಹೋಗುತ್ತಾರೆ ಎಂದು ವಿಶ್ವಾಸ
ವ್ಯಕ್ತಪಡಿಸಿದರು.

ಅಖಿಲ ಭಾರತ ರಾಷ್ಟ್ರೀಯ ಗ್ರಾಹಕ ಸಂಶೋಧನಾ ಕೇಂದ್ರವನ್ನು ಧಾರವಾಡದಲ್ಲಿ ಸ್ಥಾಪಿಸಲು ಈ ಹಿಂದೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರಂತೆ ಹೆಬ್ಬಳ್ಳಿಯಲ್ಲಿ ಕೇಂದ್ರ ಸ್ಥಾಪಿಸಲು ಕೇಂದ್ರ ಸರಕಾರ ಒಪ್ಪಿದೆ ಇದಕ್ಕಾಗಿ 5 ಎಕರೆ ಜಾಗವನ್ನು ಗುರುತಿಸಲಾಗಿದೆ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Food and civil supply Minsiter Gundu Rao angry on BJP in Hubballi on Friday, March 11th
Please Wait while comments are loading...