ಧಾರವಾಡಕ್ಕೆ ಡ್ರಗ್ಸ್ ಸರಬರಾಜು ಬಗ್ಗೆ ಮಾಹಿತಿ ಬಿಚ್ಚಿಟ್ಟ ಸಚಿವ ಸಂತೋಷ್ ಲಾಡ್

ಹುಬ್ಬಳ್ಳಿ, ಆಗಸ್ಟ್ 15: ಹುಬ್ಬಳ್ಳಿ -ಧಾರವಾಡ ಅವಳಿನಗರದಲ್ಲಿ ಅಪರಾಧ ಚಟುವಟಿಕೆಗಳ ತನಿಖೆ ನಡೆಸಿದ ಪೊಲೀಸರಿಗೆ ಡ್ರಗ್ಸ್‌ ಕುರಿತು ಸೂಕ್ತ ಮಾಹಿತಿ ಲಭಿಸಿದೆ. ಧಾರವಾಡ ಜಿಲ್ಲೆಗೆ ಡ್ರಗ್ಸ್ ಬರುವ ಬಗ್ಗೆ ನಮಗೆ ಮಾಹಿತಿ ಇದ್ದು, ಅದುನೆರೆಯ ಆಂಧ್ರ ಪ್ರದೇಶದಿಂದ ಬರುತ್ತಿದೆ. ಡ್ರಗ್ಸ್ ಬಗ್ಗೆ ಜನಪ್ರತಿನಿಧಿಗಳಷ್ಟೇ ಸಾರ್ವಜನಿಕರ ಮೇಲೂ ಜವಾಬ್ದಾರಿ ಇದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.

ಇತ್ತೀಚೆಗೆ ದಾರವಾಡದಲ್ಲಿ ಅಂಜುಮನ್ ಸಂಸ್ಥೆಯ ಅಧ್ಯಕ್ಷರ ಮನೆ ಮೇಲೆ ದಾಳಿ ನಡೆದಿತ್ತು. ಈ ಹಲ್ಲೆ ಡ್ರಗ್ಸ್ ತೆಗೆದುಕೊಂಡಿದ್ದ ಹುಡುಗರು ಮಾಡಿದ್ದು ಎಂಬ ಆರೋಪ ಕೇಳಿ ಬಂದಿತ್ತು. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು ಜಿಲ್ಲೆಗೆ ಬೇರೆಡೆಯಿಂದ ಮಾಧಕ ವಸ್ತು ಬಗ್ಗೆ ಮಾಹಿತಿ ನೀಡಿದ್ದಾರೆ.

Minister Santosh Lad Uncovers Drug Supply Chain to Dharwad from Andhra Pradesh

ರಾಜ್ಯಕ್ಕೆ 32 ಸಾವಿರ ಕೋಟಿ ಮೌಲ್ಯದ ಅಫೀಮು ಅಫ್ಘಾನಿಸ್ತಾನದಿಂದ ದೇಶಕ್ಕೆ ಬರುತ್ತಿತ್ತು. ಎಲ್ಲ ಮಲ್ಟಿ ಸೆಕ್ಟರ್ ನಿಂದಲೂ ಡ್ರಗ್ ರಾಜ್ಯಕ್ಕೆ ಬರುತ್ತದೆ. ಇದ ನಮ್ಮ ರಾಜ್ಯದ ಕಥೆಯಲ್ಲ ಎಲ್ಲ ರಾಜ್ಯಗಳಿಗೂ ಡ್ರಗ್ಸ್ ಸಪ್ಲೈ ಆಗುತ್ತಿದೆ.

350 ಜನರ ರಿಪೋರ್ಟ್ ಪಾಸಿಟಿವ್

ಇತ್ತೀಚೆಗೆ ಪೊಲೀಸ್ ಅಧಿಕಾರಿಗಳು ಧಾರವಾಡದಲ್ಲಿ ದಿಢೀರ್ ದಾಳಿ ಕೈಗೊಂಡಿದ್ದರು. ಈ ವೇಳೆ 500 ಜನ ಸಿಕ್ಕಿ ಬಿದ್ದಿದ್ದಾರೆ. ಅವರನ್ನೆಲ್ಲ ತಪಾಸಣೆಗೆ ಒಳಪಡಿಸಿದಾಗ 350 ಜನರ ರಿಪೋರ್ಟ್ ಪಾಸಿಟಿವ್ ಬಂದಿದೆ. ಇದೆಲ್ಲ ನೋಡಿದರೆ ಪೊಲೀಸ್ ಇಲಾಖೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಸಾರ್ವಜನಿಕರೂ ಮಾಹಿತಿ ಕೊಡುವ ಕೆಲಸ ಮಾಡಬೇಕು ಎಂದು ಅವರು ಹೇಳಿದರು.

Minister Santosh Lad Uncovers Drug Supply Chain to Dharwad from Andhra Pradesh

ಇನ್ನು ಕಾಂಗ್ರೆಸ್ ಮುಖಂಡ ಅಂಜುಮನ್ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಟಗಾರಗೆ ಜೀವ ಬೆದರಿಕೆ ಘಟನೆ ವೇಳೆ ನನಗೆ ಹುಷಾರಿಲ್ಲದ ಕಾರಣ ಬರಲಾಗಲಿಲ್ಲ. ಪ್ರಕರಣ ಸಂಬಂಧ ಪೊಲೀಸ್ ಆಯುಕ್ತರಿಗೆ ಜತೆ ಮಾತನಾಡಿದ್ದೇನೆ. ಆಯುಕ್ತರು ಸ್ಥಳ ಪರಿಶೀಲನೆ ಮಾಡಿದ್ದಾರೆ ಐವರನ್ನು ಬಂಧಿಸಿದ್ದಾರೆ. ದೂರು ದಾಖಲಾಗಿದ್ದು, ತಪ್ಪಿತಸ್ಥರನ್ನು ಸರ್ಕಾರ ಸುಮ್ಮನೆ ಬಿಡುವುದಿಲ್ಲ ಎಂದು ಅವರು ತಿಳಿಸಿದರು.

ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ

ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆ ಪರಿಷ್ಕರಣೆ ವಿಚಾರ ಮಾಹಿತಿ ನನಗೆ ಸಂಪೂರ್ಣವಾಗಿ ಮಾಹಿತಿ ಇಲ್ಲ. ಅದು ಸಚಿವ ಸಂಪುಟಕ್ಕೆ ಬಂದಾಗ ಮಾತ್ರ ಈ ಬಗ್ಗೆ ಮಾಹಿತಿ ಸಿಗಲಿದೆ ಎಂದರು.

ರಷ್ಯಾಗೆ ದುಡಿಯಲು ಹೋದವರನ್ನು ಯುದ್ಧಕ್ಕೆ ಬಳಿಸಿದ್ದಾರೆ ಎಂಬ ವಿಚಾರ, ಅಲ್ಲಿ 8 ಜನ ಮೃತಪಟ್ಟಿದ್ದಾರೆ. ಇದಕ್ಕೆ ಬಿಜೆಪಿಗರು ಉತ್ತರ ನೀಡಬೇಕಾಗುತ್ತದೆ. ತಮ್ಮ ಭವಿಷ್ಯಕ್ಕಾಗಿ ಕೆಲಸಕ್ಕೆ ಹುಡುಗರು ಅಲ್ಲಿಗೆ ತೆರಳಿದ್ದಾರೆ. ನಮ್ 70 ವರ್ಷದ ಇತಿಹಾಸದಲ್ಲಿ ಬಹಳ ಜನ ಕೆಲಸ ಮಾಡಲು ವಿದೇಶಕ್ಕೆ ಹೋಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಮುಂಚೆ ಯಾರನ್ನೂ ಯುದ್ಧಕ್ಕೆ ಬಳಸಿಲ್ಲ ಎಂದು ಸ್ಪಷ್ಟಪಡಿಸಿದರು.

8 ಜನರ ಸಾವು: ಪ್ರಧಾನಿಗೆ ಲಾಡ್ ಪ್ರಶ್ನೆ

ಸದ್ಯ ರಷ್ಯಾಗೆ ಹೋಗ 67 ಜನರನ್ನು ಯುದ್ಧಕ್ಕೆ ಬಳಸಿದ್ದಾರೆ, ಅದರಲ್ಲಿ 8 ಜನ ಜೀವ ಕಳೆದುಕೊಂಡಿದ್ದಾರೆ. ಈ ಬಗ್ಗೆ ಚರ್ಚೆಯಾಗಬೇಕಿದೆ. ವಿದೇಶಕ್ಕೆ ಹೋದವರನ್ನು ಅಲ್ಲಿ ಮಿಲಿಟರಿಗೆ ಬಳಸಬಹುದಾ?. ಮೊನ್ನೆ ಸಂಸತ್ ನಲ್ಲಿ ವಿದೇಶಾಂಗ ಸಚಿವರು ಉತ್ತರ ಕೊಟ್ಟಿದ್ದಾರೆ. ಒಂದು ತಲೆಗೆ ಹತ್ತು ತಲೆ ತರುತ್ತೇವೆ ಎಂದು ಪ್ರಧಾನಿ ಹೇಳುತ್ತಾರೆ.

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಈ ಹೇಳಿಕೆ ಕೊಡಬೇಕು. ಇವರು ಉಕ್ರೇನ್-ರಷ್ಯಾ ಯುದ್ಧವನ್ನೇ ನಿಲ್ಲಿಸಿದವರು. ಯುದ್ಧ ನಿಲ್ಲಿಸಿದ ವಿಶ್ವಗುರು ಮೋದಿ ಆಗಿದ್ದಾರೆ. ಇವರು ನಮ್ಮ ದೇಶದ ಯುವಕರ ಬಗ್ಗೆ ಉತ್ತರ ಕೊಡಬೇಕು ಎಂದು ಅವರು ಆಗ್ರಹಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+