ಚಿತ್ರಗಳು : ನವಲಗುಂದಕ್ಕೆ ಸಚಿವ ವಿನಯ ಕುಲಕರ್ಣಿ ಭೇಟಿ

Posted By:
Subscribe to Oneindia Kannada

ಧಾರವಾಡ, ಜುಲೈ 29 : ಮಹದಾಯಿ ನ್ಯಾಯಮಂಡಳಿ ತೀರ್ಪು ವಿರೋಧಿಸಿ ನಡೆಯುತ್ತಿದ್ದ ಹೋರಾಟದ ವೇಳೆ ನವಲಗುಂದದಲ್ಲಿ ಹಿಂಸಾಚಾರ ನಡೆದಿತ್ತು. ಗುರುವಾರ ಸಂಜೆಯಿಂದ ನವಲಗುಂದದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಲಕರ್ಣಿ ಅವರು ಶುಕ್ರವಾರ ನವಲಗುಂದಕ್ಕೆ ಭೇಟಿ ನೀಡಿದರು. ಪ್ರತಿಭಟನಾನಿರತರು ಬೆಂಕಿ ಹಚ್ಚಿದ್ದ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನವಲಗುಂದದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ಇಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು.[ನವಲಗುಂದ : ಹಿಂಸಾರೂಪಕ್ಕೆ ತಿರುಗಿದ ಮಹದಾಯಿ ಹೋರಾಟ]

ನವಲಗುಂದದ 10 ಸರ್ಕಾರಿ ಕಚೇರಿಗಳಿಗೆ ಹಾನಿಯಾಗಿವೆ. ಅಮೂಲ್ಯ ಕಡತಗಳು ಹಾಳಾಗಿವೆ. 'ಹೋರಾಟಗಾರರು ಸಂಯಮದಿಂದ ವರ್ತಿಸಿ ಶಾಂತಿ ಕಾಪಾಡಬೇಕು. ಘಟನೆ ಬಗ್ಗೆ ತನಿಖೆ ನಡೆಸಿ ಕ್ರಮ ಜರುಗಿಸಲಾಗುತ್ತದೆ' ಎಂದು ಸಚಿವರು ತಿಳಿಸಿದರು.[ಮಹದಾಯಿ ತೀರ್ಪು: ಕನ್ನಡಿಗರು ಗಮನಿಸಬೇಕಾದ್ದು ಏನು?]

'ರೈತರು ಒಂದು ವರ್ಷದಿಂದ ಹೋರಾಟ ನಡೆಸುತ್ತಿದ್ದರೂ ಇದುವರೆಗೂ ಗಲಾಟೆ ಆಗಿರಲಿಲ್ಲ. ಆದರೆ, ನವಲಗುಂದದಲ್ಲಿ ಸರ್ಕಾರಿ ಕಚೇರಿಗಳಿಗೆ ಬೆಂಕಿ ಹಚ್ಚಿದ್ದರಿಂದ ಪೊಲೀಸರು ಅನಿವಾರ್ಯವಾಗಿ ಲಾಠಿ ಪ್ರಹಾರ ನಡೆಸಿದ್ದಾರೆ' ಎಂದು ಸಚಿವರು ಹೇಳಿದರು....[ಮಹದಾಯಿ ಹೋರಾಟದ ಚಿತ್ರಗಳು]

ಕಟ್ಟಡಗಳ ಶೀಘ್ರ ದುರಸ್ತಿ

ಕಟ್ಟಡಗಳ ಶೀಘ್ರ ದುರಸ್ತಿ

ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ್ದರಿಂದ ನವಲಗುಂದದ 10 ಸರ್ಕಾರಿ ಕಚೇರಿಗಳಿಗೆ ಹಾನಿಯಾಗಿವೆ. ಅಮೂಲ್ಯ ಕಡತಗಳು ಹಾಳಾಗಿವೆ. ಪ್ರತಿಭಟನಾಕಾರರಿಂದ ಹಾನಿಗೀಡಾದ ಕಟ್ಟಡಗಳನ್ನು ತಕ್ಷಣ ದುರಸ್ತಿ ಮಾಡಿಸಲಾಗುವದು ಎಂದು ಸಚಿವರು ಹೇಳಿದರು.

ಕಟ್ಟಡಗಳಿಗೆ ಬೆಂಕಿ ಹಚ್ಚಿದ್ದರು

ಕಟ್ಟಡಗಳಿಗೆ ಬೆಂಕಿ ಹಚ್ಚಿದ್ದರು

ಗುರುವಾರ ಬೆಳಗ್ಗೆಯಿಂದ ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ನಡೆಯುತ್ತಿರುವ ಪ್ರತಿಭಟನೆ ಮಧ್ಯಾಹ್ನ ಹಿಂಸಾರೂಪಕ್ಕೆ ತಿರುಗಿತ್ತು. ಪುರಸಭೆ ಕಚೇರಿಯ ಕಡತಗಳ ವಿಭಾಗ ಮತ್ತು ಕೋರ್ಟ್‌ ಕಟ್ಟಡಕ್ಕೆ ಬೆಂಕಿ ಹಚ್ಚಲಾಗಿತ್ತು.

ನಾಲ್ವರನ್ನು ಬಂಧಿಸಲಾಗಿತ್ತು

ನಾಲ್ವರನ್ನು ಬಂಧಿಸಲಾಗಿತ್ತು

ನವಲಗುಂದ ಸರ್ಕಾರಿ ಆಸ್ಪತ್ರೆ ಬಳಿ ಮಚ್ಚು, ಲಾಂಗುಗಳನ್ನು ಹಿಡಿದು ಓಡಾಡುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದರು. ಈ ನಾಲ್ವರು ಕಾರಿನಲ್ಲಿ ಆಗಮಿಸಿದ್ದರು ಎಂದು ತಿಳಿದುಬಂದಿದ್ದು, ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಜಿಲ್ಲಾಧಿಕಾರಿಗಳು ಜೊತೆಗಿದ್ದರು

ಜಿಲ್ಲಾಧಿಕಾರಿಗಳು ಜೊತೆಗಿದ್ದರು

ಶಾಸಕರಾದ ಕೋನರಡ್ಡಿ, ಪ್ರಸಾದ ಅಬ್ಬಯ್ಯ, ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ ಮೀನಾ ಮುಂತಾದವರು ನ್ಯಾಯಾಲಯ, ಪುರಸಭೆ ಮುಂತಾದ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.

ನಿಷೇಧಾಜ್ಞೆ ಜಾರಿಯಲ್ಲಿದೆ

ನಿಷೇಧಾಜ್ಞೆ ಜಾರಿಯಲ್ಲಿದೆ

ನವಲಗುಂದದಲ್ಲಿ ಗುರುವಾರ ನಡೆದ ಹಿಂಸಾಚಾರದ ಬಳಿಕ ನಿಷೇಧಾಜ್ಞೆ ಜಾರಿಯಲ್ಲಿದ್ದು, ಇಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The situation in violence hit Navalgund, Dharwad district continues to be tense, But Situation under control. Dharwad in-charge minister Vinay Kulkarni visited for spot on Friday, July 29, 2016.
Please Wait while comments are loading...