Lok Sabha Election: ಧಾರವಾಡ ಸಖಿ ಮತಗಟ್ಟೆಗಳಲ್ಲಿ ಹತ್ತಾರು ವಿಶೇಷತೆಗಳು; ಇಲ್ಲಿದೆ ವಿವರ

ಧಾರವಾಡ, ಮೇ 07: ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ 2ನೇ ಹಂತದ ಮತದಾನ ಆರಂಭವಾಗಿದ್ದು, 14 ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯಲಿದೆ. ಈ ಬಾರಿ ಗರಿಷ್ಠ ಮತದಾನವಾಗಬೇಕೆಂದು ಚುನಾವಣಾ ಅಧಿಕಾರಿಗಳು ಅನೇಕ ಕ್ರಮಗಳನ್ನು ಕೈಗೊಂಡಿದ್ದಾರೆ.

ಮಹಿಳೆಯರು ಮತ್ತು ವಿಕಲಚೇತನರು ದುರ್ಬಲರಲ್ಲ ಅವರು ಉಳಿದವರಷ್ಟೇ ಸಮರ್ಥರು. ಯಾವ ಕೆಲಸವನ್ನಾದರೂ ಸಂಪೂರ್ಣವಾಗಿ ಮಾಡಬಲ್ಲರು ಎಂಬುದನ್ನು ಸಾರಲು ಈ ಬಾರಿ ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಹಿಳಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಂದಲೇ ನಡೆಸಲ್ಪಡುವ 35 ಸಖಿ ಮತಗಟ್ಟೆಗಳು, ವಿಕಲಚೇತನ ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದಲೇ ನಿಭಾಯಿಸಲ್ಪಡುವ 7 ವಿಕಲಚೇತನರ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

Lok Sabha Election 2024 Dharwad Sakhi Polling Booth Speciality

ವಿಶೇಷವಾಗಿ ಅಲಂಕರಿಸಲ್ಪಟಿರುವ ಈ ಮತಗಟ್ಟೆಗಳು ಜನರನ್ನು ಮತದಾನಕ್ಕೆ ಆಕರ್ಷಿಸುತ್ತಿವೆ. ಆಕರ್ಷಕ ಸ್ವಾಗತ ಕಮಾನು, ರಂಗೋಲಿ, ವರ್ಣಮಯ ಕಾಗದ, ಬಲೂನುಗಳಿಂದ ಸಿಂಗರಿಸಿದ್ದಾರೆ. ಬಣ್ಣ ಬಣ್ಣದ ಪರದೆಗಳು ಮತಗಟ್ಟೆಯ ಅಂದ ಹೆಚ್ಚಿಸಿವೆ. ಪಾಲಕರೊಂದಿಗೆ ಬರುವ ಮಕ್ಕಳಿಗೆ ಆಟವಾಡಲು ಕಿಡ್ಸ್ ಕಾರ್ನರ್ ಸ್ಥಾಪಿಸಲಾಗಿದೆ. ಮಕ್ಕಳಿಗೆ ಚಾಕಲೇಟ್ ವಿತರಣೆಗೆ ತಯಾರಿ ಮಾಡಿಕೊಂಡಿದ್ದಾರೆ. ಮತಗಟ್ಟೆಯಲ್ಲಿ ಮಹಿಳಾ ಅಧಿಕಾರಿ, ಸಿಬ್ಬಂದಿ ಹಾಗೂ ಮಹಿಳಾ ಪೊಲೀಸ್ ಪೇದೆ ಕರ್ತವ್ಯ ನಿರ್ವಹಿಸಲಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 35 ಸಖಿ ಮತಗಟ್ಟೆಗಳಿವೆ, 7 ವಿಕಲಚೇತನ ಮತಗಟ್ಟೆಗಳಿವೆ. ವಿಕಲಚೇತನರನ್ನು ಮನೆಯಿಂದ ಮತಗಟ್ಟೆಗೆ ಕರೆತರಲು ವಾಹನ, ಗಾಲಿಖುರ್ಚಿ, ರ್ಯಾಂಪ್, ಭೂತಕನ್ನಡಿ ಮೊದಲಾದ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ.

Lok Sabha Election 2024 Dharwad Sakhi Polling Booth Speciality

ಅಮರಗೋಳದಲ್ಲಿ ಮಾವಿನ ತಳಿರು, ತೋರಣ, ರಂಗವಲ್ಲಿ, ಬಲೂನು ಸೇರಿ ಬಗೆ ಬಗೆಯ ವಸ್ತುಗಳಿಂದ ವಿಕಲಚೇತನರ ಮತಗಟ್ಟೆಯನ್ನು ಅಲಂಕರಿಸಲಾಗಿದೆ. ಹೆಬ್ಬಳ್ಳಿ ಜನತಾ ಪ್ಲಾಟನಲ್ಲಿ ಹಾಗೂ ಧಾರವಾಡ ಮರಾಠಾ ಕಾಲೋನಿಯ ಮಲ್ಲಸಜ್ಜನ ವ್ಯಾಯಾಮ ಶಾಲೆ ಮತ್ತು ಹುಬ್ಬಳ್ಳಿಯ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಚೇರಿಯ ಮತಗಟ್ಟೆಗಳು ತುಂಬಾ ಆಕರ್ಷಣಿಯವಾಗಿವೆ.

ಕಲಘಟಗಿ ಪಟ್ಟಣ ಪಂಚಾಯಿತಿ ಮತಗಟ್ಟೆಯಲ್ಲಿ ಪ್ರಸಿದ್ಧ ತೊಟ್ಟಿಲು ಮಾದರಿಗಳು ಗಮನ ಸೆಳೆಯುತಿವೆ. ನೆಲ್ಲಿಹರವಿಯ ಸರ್ಕಾರಿ ಲೋವರ್ ಪ್ರೈಮರಿ ಶಾಲೆಯ ಮತಗಟ್ಟೆ ಕೇಂದ್ರ 224ರಲ್ಲಿ ಸಿಬ್ಬಂದಿ ಲಂಬಾಣಿ ಸಂಪ್ರದಾಯಕ ಉಡುಪು ಧರಿಸಿರುವುದು ಸಹ ಆಕರ್ಷಿಣಿಯವಾಗಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರಾಗಿರುವ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ ಹೇಳಿದರು.

ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ನಡೆಯುವ ಮತದಾನದಲ್ಲಿ ಪ್ರತಿಯೊಬ್ಬ ಮತದಾರರು ತಮ್ಮ ಮತ ಚಲಾಯಿಸಿ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸುವ ಕಾರ್ಯ ಮಾಡಬೇಕಾಗಿದೆ ಎಂದು ಚುನಾವಣಾ ಅಧಿಕಾರಿಗಳು ಮತದಾರರಲ್ಲಿ ಮನವಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+